ನವದೆಹಲಿ:ಬೆಂಗಳೂರಿನ ಸಹಕಾರ ನಗರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳಿಗೆ ಹಲವು ಕ್ಷೇತ್ರಗಳಲ್ಲಿ ನಾಡಿನ ಕೀರ್ತಿ ಹೆಚ್ಚಿಸಿದ ಕರುನಾಡಿನ ಸಾಧಕರ ಹೆಸರನ್ನು ನಾಮಕರಣ ಮಾಡಿ ಪೋಷಿಸುತ್ತಿರುವ ಹಾಗೂ ಕನ್ನಡ ಕಲಾ ವೈಭವವನ್ನು ಸಾರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ನಿತ್ಯವೂ ಕನ್ನಡ ಕಂಪನ್ನು ಪಸರಿಸುತ್ತಿರುವ ಸುರೇಶ್ ಕುಮಾರ್ ಅವರ ಪರಿಸರ, ಪರಂಪರೆ ಉಳಿವಿಗೆ ಶ್ರಮಿಸುತ್ತಿರುವ ಕಾರ್ಯವನ್ನು ಪ್ರಧಾನಿ ಮೋದಿ ಅವರು ಮನ್‌ ಕೀ ಬಾತ್‌ನಲ್ಲಿ ಶ್ಲಾಘಿಸಿದರು.
ಇಂದು (ಅ.30) ರೆಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ನ 94ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ ಅವರು ಸುರೇಶ್​ ಕುಮಾರ್​ ಅವರ ಹೆಸರನ್ನು ಪ್ರಸ್ತಾಪ ಮಾಡಿದರು.
ಕರ್ನಾಟಕದ ಬೆಂಗಳೂರು ಮೂಲದ ಸುರೇಶ್​ ಕುಮಾರ್​ ಎಂಬುವರಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ತಮ್ಮ ಇಡೀ ಜೀವನವನ್ನು ಪರಿಸರ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ. 20 ವರ್ಷಗಳ ಹಿಂದೆ ಅವರು ಸಂಕಲ್ಪವೊಂದನ್ನು ಮಾಡಿದರು. ಸಹಕಾರ ನಗರದಲ್ಲಿ ಅರಣ್ಯ ಸೃಷ್ಟಿಸುವುದು ಅವರ ಸಂಕಲ್ಪವಾಗಿತ್ತು. ಇದು ತುಂಬಾ ಸವಾಲಿನ ಮತ್ತು ಕಷ್ಟದ ಕೆಲಸವಾಗಿತ್ತು. ಆದರೂ, 20 ವರ್ಷಗಳ ಹಿಂದೆ ಅವರು ನೆಟ್ಟಿದ್ದ ಗಿಡಗಳು ಇಂದು 40 ಸಾವಿರ ಎತ್ತರದ ಬೃಹತ್​ ಮರಗಳಾಗಿವೆ. ಇದೀಗ ಅದರ ಸೌಂದರ್ಯ ಎಲ್ಲರನ್ನು ಮೋಡಿ ಮಾಡುತ್ತಿದೆ. ಸ್ಥಳೀಯ ನಿವಾಸಿಗಳಿಗೂ ಕೂಡ ಸುರೇಶ್​ ಕುಮಾರ್​ ಬಗ್ಗೆ ಹೆಮ್ಮೆ ಇದೆ ಎಂದು ಹೊಗಳಿದರು.
ಇದಿಷ್ಟೇ ಅಲ್ಲದೆ, ಸುರೇಶ್​ ಕುಮಾರ್​ ಅವರು ಮೊತ್ತೊಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಸಹಕಾರ ನಗರದಲ್ಲಿ ಅವರು ಒಂದು ಬಸ್​ ನಿಲ್ದಾಣವನ್ನು ನಿರ್ಮಾಣ ಮಾಡಿದ್ದಾರೆ. ಇದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಿತ್ತಾಳೆ ಪ್ಲೇಟ್​ಗಳ ಮೇಲೆ ಕನ್ನಡದಲ್ಲಿ ಬರೆಯಲಾದ ಮಾಹಿತಿ ಗುಚ್ಛವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಪರಿಸರ ವ್ಯವಸ್ಥೆ ಮತ್ತು ಸಂಸ್ಕೃತಿ ಹಾಗೂ ಮುಂದೆ ಸಾಗುವುದು ಮತ್ತು ಒಟ್ಟಿಗೆ ಏಳಿಗೆ ಕಾಣುವುದು ಸೇರಿದಂತೆ ಅನೇಕ ಸಂದೇಶಗಳಿವೆ. ನಿಜಕ್ಕೂ ಸುರೇಶ್​ ಕುಮಾರ್​ ಅವರ ಕಾರ್ಯವನ್ನು ನಾವೆಲ್ಲರು ಶ್ಲಾಘಿಸಲೇಬೇಕು ಎಂದು ಪ್ರಧಾನಿ ಹೇಳಿದರು.
ಮನ್​ ಕೀ ಬಾತ್​: ಛತ್​ ಪೂಜೆ ಹಿನ್ನೆಲೆ ಸೌರಶಕ್ತಿಯ ಮಹತ್ವ ಸಾರಿದ ಪ್ರಧಾನಿ ಮೋದಿ

ಡಾಲಿ ಧನಂಜಯ್​ ನಟನೆಯ ಹೆಡ್ ಬುಷ್ ಸಿನಿಮಾದ ಪ್ರಚಾರ ಮಾಡುತ್ತಿದ್ದವರ ವಿರುದ್ಧ ಎಫ್ಐಆರ್ ದಾಖಲು

ಮತ್ತೊಂದು ದಾಖಲೆಯ ಸನಿಹದಲ್ಲಿ ವಿರಾಟ್ ಕೊಹ್ಲಿ; ಯಾವುದು ಆ ದಾಖಲೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 7 =
Remember me
