ನವದೆಹಲಿ: ಕರೊನಾ ಸೋಂಕಿನಿಂದ ಜನರ ರಕ್ಷಣೆ ಮಾಡಲು ಇದ್ದ ಏಕೈಕ ಮಾರ್ಗ ಲಾಕ್​ಡಾನ್​. ಹೀಗಾಗಿ ಇದನ್ನು ಜಾರಿಗೊಳಿಸಬೇಕಾಯಿತು. ಲಾಕ್​ಡೌನ್​ ಜಾರಿ ಮಾಡಿದ್ದರಿಂದ ಹಲವು ಮಂದಿ ನನ್ನ ಮೇಲೆ ಕೋಪಗೊಂಡಿದ್ದಾರೆ. ನೀವು ಹಾಗೂ ನಿಮ್ಮ ಕುಟುಂಬದ ರಕ್ಷಣೆಗಾಗಿ ನಾನು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವಕ್ಕೆ ಕರೊನಾ ಸೋಂಕು ಹರಡಿದೆ. ಇದರ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ನಾವು ಕೂಡ ಹೋರಾಟ ಮಾಡಬೇಕಾಗಿದೆ. ಲಾಕ್​ಡೌನ್​ ಕರೊನಾ ವಿರುದ್ಧದ ಹೋರಾಟ. ಈ ನಿರ್ಧಾರ ಕೈಗೊಂಡಿದ್ದಕ್ಕೆ ನಾನು ನಿಮ್ಮಲಿ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದರು.ಲಾಕ್​ಡೌನ್​ ಲಕ್ಷ್ಮಣ ರೇಖೆಯನ್ನು ಯಾರು ದಾಟಬಾರದು. ಕರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಅವರು ಹೇಳಿದರು.
ಆರೋಗ್ಯವೇ ಭಾಗ್ಯ: ದೇಶದ ಜನರ ಆರೋಗ್ಯವೇ ಭಾಗ್ಯ. ಲಾಕ್​ಡೌನ್​ ನಿಯಮ ಉಲ್ಲಂಘಿಸಿದರೆ ಸೋಂಕಿನಿಂದ ರಕ್ಷಣೆ ಸಾಧ್ಯ ಇಲ್ಲ. ಕೆಲವರು ಲಾಕ್​ಡೌನ್​ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನಾದರೂ ಮನೆಯಲ್ಲಿದ್ದು ವೈರಸ್​ ಸೋಂಕಿನಿಂದ ರಕ್ಷಣೆ ಪಡೆಯಿರಿ. ಇದು ಒಂದೆರೆಡು ದಿನ ಕಠಿಣ ಅನಿಸಬಹುದು. ಆದರೂ ಸೋಂಕಿನಿಂದ ನಮಗೆ ರಕ್ಷಣೆ ನೀಡುತ್ತದೆ.
ಮೊದಲು ಕರೊನಾ ವೈರಸ್​ ಪತ್ತೆಯಾದ ಹುಬೈ ಪ್ರಾಂತ್ಯ ಬಿಟ್ಟು ಗುಳೆ ಹೋಗುತ್ತಿರುವ ನಾಗರಿಕರು: ತಡೆದ ಪೊಲೀಸರ ಮೇಲೆ ಹಲ್ಲೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 3 =
Remember me
