ಯುವ ಮಿತ್ರರು ವಾರ್ಷಿಕ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಪರೀಕ್ಷೆ ಬಗ್ಗೆ ಚಿಂತಿತರಾಗದೆ (ವರಿಯರ್), ಅದನ್ನು ಯೋಧರಂತೆ (ವಾರಿಯರ್) ಧೈರ್ಯದಿಂದ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ರೇಡಿಯೊ ಕಾರ್ಯಕ್ರಮ 74ನೇ ಮನ್ ಕೀ ಬಾತ್​ನಲ್ಲಿ ಮಾತನಾಡಿದ ಅವರು, ಪರೀಕ್ಷೆಗಳನ್ನು ಸಂತಸದಿಂದ ಎದುರಿಸಬೇಕು. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳ ಮೊಗದಲ್ಲಿ ಚಿಂತೆ ಬದಲು ಮಂದಹಾಸವಿರಬೇಕು.
ಪರೀಕ್ಷೆಯ ಭಯ ಬಿಟ್ಟು ಸಾಕಷ್ಟು ನಿದ್ರಿಸಿ. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಸಮಯ ನಿರ್ವಹಣೆಯ ಬಗ್ಗೆ ಎಚ್ಚರವಿರಲಿ. ಪರೀಕ್ಷಾ ಸಮಯವಾದ ಕಾರಣ ಆಟ ಕೆಲವು ಕಾಲ ನಿಲ್ಲಿಸಿ. ಪುನರ್ ಮನನಕ್ಕೆ ನವೀನ ವಿಧಾನಗಳನ್ನು ಬಳಸಿ. ಈ ಪರೀಕ್ಷೆಯನ್ನು ಅತ್ಯುತ್ತಮವಾಗಿ, ಆತ್ಮವಿಶ್ವಾಸದಿಂದ ಎದುರಿಸಿ ಎಂದು ಸಲಹೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮ ಮಾರ್ಚ್​ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಅನುಭವ ಹಂಚಿಕೊಳ್ಳಬಹುದು. ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಹೇಗೆ ಭಾಗವಹಿಸಬಹುದು ಎಂಬ ಮಾಹಿತಿ MyGov.in ಡಿಜಿಟಲ್ ವೇದಿಕೆಯಲ್ಲಿ ದೊರೆಯಲಿದೆ. ಕ್ವಿಜ್​ನಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಬಹುದು. ಇದುವರೆಗೆ ಒಂದು ಲಕ್ಷ ವಿದ್ಯಾರ್ಥಿಗಳು, 40 ಸಾವಿರ ಪಾಲಕರು, 10 ಸಾವಿರ ಶಿಕ್ಷಕರು ಈ ವೇದಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.
ಮಳೆ ನೀರು ಸಂಗ್ರಹ ಜನಾಂದೋಲನ:ಮಾರ್ಚ್ 22 ವಿಶ್ವ ಜಲ ಸಂರಕ್ಷಣಾ ದಿನದ ಹಿನ್ನಲೆಯಲ್ಲಿ ನೀರಿನ ಬಳಕೆ, ನಿರ್ವಹಣೆ ಕುರಿತಂತೆ ಮಾತನಾಡಿದ ಪ್ರಧಾನಿ ಮೋದಿ, ಇನ್ನೇನು ಬೇಸಿಗೆ ಆರಂಭವಾಗಲಿರುವ ಕಾರಣ ನೀರಿನ ಕೊರತೆ ಕಾಡಲಿದೆ. ಹೀಗಾಗಿ ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಬೇಕು. ನೀರು ಪೋಲಾಗುವುದನ್ನು ತಡೆಯಬೇಕು. ಜಲ ಸಂರಕ್ಷಣೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಇದು ಎಲ್ಲರ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಜಲ ಸಂಗ್ರಹಾಗಾರಗಳನ್ನು (ಕೆರೆ-ಕಟ್ಟೆ, ಬಾವಿ, ಬ್ಯಾರೇಜ್) ಸ್ವಚ್ಛಗೊಳಿಸಿ ಮುಂದಿನ ಮಳೆಗಾಲದ ಹೊತ್ತಿಗೆ ಅವುಗಳನ್ನು ಮಳೆ ನೀರು ಸಂಗ್ರಹಕ್ಕೆ ಸಿದ್ಧಗೊಳಿಸುವ 100 ದಿನಗಳ ಜನಾಂದೋಲನ ನಡೆಯಬೇಕು ಎಂದು ಕರೆ ನೀಡಿದರು.
ತಮಿಳು ಕಲಿಯದ್ದಕ್ಕೆ ಬೇಸರ:ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದಾದ ತಮಿಳನ್ನು ಕಲಿಯದಿರುವುದಕ್ಕೆ ಬೇಸರವಿದೆ ಎಂದ ಪ್ರಧಾನಿ ಮೋದಿ, ತಮಿಳಿನಲ್ಲಿ ಉತ್ಕೃಷ್ಠ ಸಾಹಿತ್ಯ ಮತ್ತು ಕಾವ್ಯ ಪರಂಪರೆ ಇದೆ ಎಂದು ಶ್ಲಾಘಿಸಿದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:18 + 8 =
Remember me
