ಈಗಾಗಲೇ ಹಲವು ರಾಜಕೀಯ ಮುಖಂಡರು, ಕೇಂದ್ರ ಸಚಿವರುಗಳಿಗೆ ಕರೊನಾ ಸೋಂಕು ತಗುಲಿದೆ. ಇದೀಗ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಅವರಲ್ಲೂ ಸೋಂಕು ದೃಢಪಟ್ಟಿದೆ.
ತಮಗೆ ಕರೊನಾ ವೈರಸ್​ ದೃಢಪಟ್ಟಿದ್ದನ್ನು ಟ್ವೀಟ್​ ಮೂಲಕ ತಿಳಿಸಿದ ಖಟ್ಟರ್​, ನಾನು ಇಂದು ಕೊವಿಡ್​-19 ತಪಾಸಣೆಗೆ ಒಳಗಾಗಿದ್ದೆ. ವರದಿಯಲ್ಲಿ ಪಾಸಿಟಿವ್​ ಬಂದಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲ ಸಹೋದ್ಯೋಗಿಗಳು, ಸಹಾಯಕರು ಕೂಡಲೇ ಕರೊನಾ ಟೆಸ್ಟ್​ಗೆ ಒಳಗಾಗಿ ಎಂದು ಹೇಳಿದ್ದಾರೆ. ಕಳೆದ ಒಂದು ವಾರದಿಂದ ನನ್ನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರೆಲ್ಲ ತಕ್ಷಣವೇ ಕ್ವಾರಂಟೈನ್​​ಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.
ಇಂದು ಹರಿಯಾಣ ವಿಧಾನಸಭಾ ಸ್ಪೀಕರ್​ ಜಿಯಾನ್ ಚಂದ್ ಗುಪ್ತಾ ಮತ್ತು ಇಬ್ಬರು ಬಿಜೆಪಿ ಶಾಸಕರಲ್ಲಿ ಕೂಡ ಕೊವಿಡ್​ 19 ಸೋಂಕು ದೃಢಪಟ್ಟಿದೆ.
ಇನ್ನೆರಡು ದಿನಗಳಲ್ಲಿ ಹರಿಯಾಣ ವಿಧಾನಸಭೆ ಮುಂಗಾರು ಅಧಿವೇಶನ ಶುರುವಾಗಲಿದ್ದು, ಈಗ ಒಬ್ಬರಾದ ಬಳಿಕ ಒಬ್ಬರಂತೆ ಕರೊನಾ ಸೋಂಕಿತರಾಗುತ್ತಿದ್ದಾರೆ. (ಏಜೆನ್ಸೀಸ್​)
ರೆಸಾರ್ಟ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 11 =
Remember me
