ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿ ಇದ್ದು, ಚುನಾವಣಾ ಪ್ರಚಾರದ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಮುಖ್ಯಮಂತ್ರಿ ಕೇಜ್ರಿವಾಲ್​, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಂತೆ ಸವಾಲು ಹಾಕಿದ್ದು, ತನ್ನ ಜತೆಗೆ ಚರ್ಚೆಗೆ ಬರುವಂತೆ ಹೇಳಿದ್ದರು. ಇದೀಗ ಕೇಜ್ರಿವಾಲ್​ ಜತೆ ಚರ್ಚೆ ಮಾಡುವುದಕ್ಕೆ ತಾವು ಸಿದ್ಧ ಎಂದು ತಿಳಿಸಿರುವ ಬಿಜೆಪಿಯ ಮನೋಜ್​ ತಿವಾರಿ ಚರ್ಚೆಗೆ ಸಮಯವನ್ನು ನಿಗದಿ ಪಡಿಸುವಂತೆ ಕೇಜ್ರಿವಾಲ್​ಗೆ ಹೇಳಿದ್ದಾರೆ.
ಬಿಜೆಪಿ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಅವರು ಜನರಿಂದ ಬ್ಲಾಂಕ್​ ಚೆಕ್​ ಕೇಳುತ್ತಿದ್ದಾರೆ. ಜನಾದೇಶ ಸಿಕ್ಕ ನಂತರ ಅಭ್ಯರ್ಥಿಯನ್ನು ಘೋಷಿಸುವುದಾಗಿ ಹೇಳಿದ್ದಾರೆ. ಯಾರಿಗೆ ಗೊತ್ತು, ಒಂದು ವೇಳೆ ಜನರು ಬಿಜೆಪಿಯನ್ನು ಗೆಲ್ಲಿಸಿ, ಫಲಿತಾಂಶದ ನಂತರ ಬಿಜೆಪಿಯವರು ಯಾರೋ ಅವಿದ್ಯಾವಂತನನ್ನೋ ಅಥವಾ ದೇಶದ್ರೋಹಿಯನ್ನೋ ಮುಖ್ಯಮಂತ್ರಿ ಮಾಡಿದರೆ? ನಾನು ಬಿಜೆಪಿಯವರಿಗೆ ಸವಾಲು ಹಾಕುತ್ತೇನೆ. ನಾಳೆ ಮಧ್ಯಾಹ್ನ 1 ಗಂಟೆಯೊಳಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಿ ನನ್ನ ಬಳಿ ಚರ್ಚೆಗೆ ಬನ್ನಿ. ಇಲ್ಲವಾದರೆ ನಾನು ಮತ್ತೊಂದು ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಇಂದು ಅರವಿಂದ್​ ಕೇಜ್ರಿವಾಲ್​ ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೆ ಸವಾಲೆಸೆದಿದ್ದರು.
ಸವಾಲನ್ನು ಭಾಗಶಃ ಸ್ವೀಕರಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್​ ತಿವಾರಿ, ನಾವು ನಿಮ್ಮ ಜತೆಗೆ ಚರ್ಚೆಗೆ ಸಿದ್ಧ. ನೀವು ಸಮಯ ಫಿಕ್ಸ್​ ಮಾಡಿ. ನಾವು ನಿಮ್ಮ ಪ್ರಣಾಳಿಕೆಯ ಕುರಿತು ಚರ್ಚೆ ಮಾಡೋಣ. ನೀವು ಚರ್ಚೆಗೆ ಬಂದಿದ್ದೇ ಆದಲ್ಲಿ ನಮ್ಮ ಪಕ್ಷದಿಂದ ಒಬ್ಬರು ಬಂದು ನಿಮ್ಮ ಜತೆ ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ.
70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಫೆ.8ರಂದು ಚುನಾವಣೆ ನಡೆಯಲಿದ್ದು, ಫೆ.11ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
