ನವದೆಹಲಿ:ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರೋಧದ ಹೋರಾಟದಲ್ಲಿ ಯುವಕನೊಬ್ಬನಿಂದ ನಡೆದ ಗುಂಡಿನ ದಾಳಿ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಈ ದುಷ್ಕೃತ್ಯದ ಹಿಂದೆ ಎಎಪಿ ಕೈವಾಡವಿರಬೇಕು ಅಥವಾ ಆತ ಶಹೀನ್​ ಬಾಗ್​ನಿಂದ ಬಂದವನೇ ಆಗಿರಬೇಕು ಎಂದು ಬಿಜೆಪಿ ನಾಯಕ ಮನೋಜ್​ ತಿವಾರಿ ವ್ಯಂಗ್ಯವಾಡಿದ್ದಾರೆ.
ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಏಕಾಏಕಿ ಯುವಕನೊಬ್ಬ ಬಂದೂಕಿನೊಂದಿಗೆ ನುಗ್ಗಿ ಗುಂಡನ್ನು ಹಾರಿಸಿದ್ದ. ಪೊಲೀಸರ ಸಮ್ಮುಖದಲ್ಲೇ ಈ ದುಷ್ಕೃತ್ಯ ನಡೆದಿದ್ದರಿಂದ ಇದರ ಹಿಂದೆ ಕೇಂದ್ರಾಡಳಿತ ಪಕ್ಷವಾದ ಬಿಜೆಪಿಯ ಕೈವಾಡವಿದೆ ಎಂದು ವಿರೋಧ ಪಕ್ಷದವರು ಆರೋಪ ನಡೆಸುತ್ತಿದ್ದರು. ಇದೀಗ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಇದರಲ್ಲಿ ವಿರೋಧ ಪಕ್ಷದವರದ್ದೇ ಕೈವಾಡವಿದೆ ಎಂದು ಆರೋಪಿಸಿದೆ. ಈ ಕುರಿತಾಗಿ ಮಾತನಾಡಿರುವ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್​ ತಿವಾರಿ, “ಆ ಯುವಕ ಎಎಪಿ ಕಾರ್ಯಕರ್ತ ಆಗಿರಬೇಕು ಅಥವಾ ಶಹೀನ್​ ಬಾಗ್​ನಿಂದ ಬಂದವನೇ ಆಗಿರಬೇಕು. ಸಿಎಎ ವಿರೋಧದ ಪ್ರತಿಭಟನೆಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿಲ್ಲ, ಅದಕ್ಕಾಗಿ ಅವರು ಈ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ.” ಎಂದು ಮಾಧ್ಯಮದೆದುರು ದೂರಿದ್ದಾರೆ.
ಗುಂಡಿನ ದಾಳಿ ನಡೆಸಿರುವ ಯುವಕನನ್ನು ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ. ಯುವಕನ ಫೇಸ್​ಬುಕ್​ ಖಾತೆಯನ್ನು ನೋಡಿದಾಗ ಮೇಲ್ನೋಟಕ್ಕೆ ಯುವಕ ಬಲ ಪಂಥದ ಬೆಂಬಲಿಗನಂತೆ ಕಂಡು ಬಂದಿದ್ದಾನೆ. ಯುವಕನ ಫೇಸ್​ಬುಕ್​ ಪ್ರೊಫೈಲ್​ ಫೋಟೋದಲ್ಲಿ ಬಿಜೆಪಿಯ ಸ್ಕಾರ್ಫ್​ ಹಾಕಿಕೊಂಡಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eight =
Remember me
