ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಒಂದತ್ತ ರೈತರು ಹೋರಾಟ ನಡೆಸುತ್ತಿದ್ದರೆ ಇನ್ನೊಂದತ್ತ ಬಿಜೆಪಿ ನಾಯಕರು ಧರಣಿ ಕುಳಿತಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮನೆ ಮುಂದೆ ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭಿರ್​ ಹಾಗೂ ಮನೋಜ್​ ತಿವಾರಿ ಅವರು ಧರಣಿ ನಡೆಸುತ್ತಿದ್ದವರ ಜತೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ:ಸ್ಕೂಲ್​ ಬ್ಯಾಗ್​ ತೂಕ ಮತ್ತಷ್ಟು ಇಳಿಕೆ, ಹೋಂ ವರ್ಕ್​ಗೂ ಬಿತ್ತು ಕತ್ತರಿ! ಈ ಕ್ಲಾಸಿನ ಮಕ್ಕಳಿಗೆ ಹೋಂ ವರ್ಕ್​ ಇಲ್ಲವೇ ಇಲ್ಲ!
ಪೂರ್ವ, ಉತ್ತರ ಮತ್ತು ದಕ್ಷಿಣ ದೆಹಲಿಯ ಪುರಸಭೆ ನಿಗಮಗಳ ನಾಯಕರು ಫ್ಲಾಗ್​ಸ್ಟಾಪ್​ ರಸ್ತೆಯಲ್ಲಿರುವ ಸಿಎಂ ನಿವಾಸದ ಮುಂದೆ ಸೋಮವಾರದಿಂದ ಧರಣಿ ನಡೆಸುತ್ತಿದ್ದಾರೆ. ದೆಹಲಿ ಸರ್ಕಾರದಿಂದ ಬರಬೇಕಿದ್ದ 13 ಸಾವಿರ ಕೋಟಿ ರೂಪಾಯಿ ಬಾಕಿ ಪಾವತಿಸುವಂತೆ ಒತ್ತಾಯಿಸಿ ಧರಣೆ ನಡೆಸಲಾಗುತ್ತಿದೆ. ಮೇಯರ್​ಗಳಾದ ಜಯಪ್ರಕಾಶ್​, ಅನಾಮಿಕ ಮಿಥಿಲೇಶ್​ ಹಾಗೂ ನಿರ್ಮಲ್​ ಜೈನ್​ ಧರಣಿ ಕುಳಿತಿದ್ದಾರೆ. ಇವರ ಜತೆ ಕೆಲ ಮಹಿಳಾ ಕೌನ್ಸಿಲರ್​ಗಳೂ ಸಾಥ್​ ಕೊಟ್ಟಿದ್ದಾರೆ.
ಇದನ್ನೂ ಓದಿ:ರೈತ ಹೋರಾಟಕ್ಕೆ ಮತ್ತೋರ್ವ ರೈತ ಬಲಿ! ಈವರೆಗೆ ಐದು ರೈತರ ಕೊನೆಯುಸಿರು
ಇಂದು ಧರಣಿಯಲ್ಲಿ ಭಾಗವಹಿಸಿ ಮನೋಜ್​ ತಿವಾರಿ ಅವರು ಮಾತನಾಡಿ, ಕೇಜ್ರಿವಾಲ್​ ಜನಸಾಮಾನ್ಯರ ವಿರೋಧಿ ಎಂದು ಆರೋಪಿಸಿದ್ದಾರೆ. ಪುರಸಭೆಯ 13 ಸಾವಿರ ಕೋಟಿ ಹಣವನ್ನು ಅವರು ಇಟ್ಟುಕೊಂಡಿದ್ದಾರೆ. ನೈರ್ಮಲ್ಯ ಕಾರ್ಯಕರ್ತರು, ವೈದ್ಯರು ಶುಶ್ರೂಷಕಿಯರು ಮತ್ತು ಇತರೆ ಉದ್ಯೋಗಿಗಳಿಗೆ ವೇತನ ನೀಡಲು ಆ ಮೊತ್ತ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)
ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
