ಮುಂಬೈ:ಇತ್ತೀಚೆಗಷ್ಟೇ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರದ ಟ್ರೈನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್, ಒಬ್ಬ ಅಧಿಕಾರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಮೀರಿ ತನಗೆ ಹೇಗೆ ಬೇಕೋ ಹಾಗೆ ಅಧಿಕಾರ ದುರ್ಬಳಕೆ ಮಾಡಿಕೊಂಡ ರೀತಿಗೆ ರಾಜ್ಯ ಸರ್ಕಾರ ಛೀಮಾರಿ ಹಾಕಿತ್ತು. ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೂಜಾ ತನಗೆ ನೀಡಲಾಗಿದ್ದ ಅಧಿಕಾರವನ್ನು ಅತಿಯಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಹಿನ್ನೆಲೆ ರಾಜ್ಯ ಸರ್ಕಾರವೇ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ವಾಶಿಮ್‌ನಲ್ಲಿ ಸೂಪರ್‌ನ್ಯೂಮರರಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡುವಂತೆ ಪುಣೆಯಿಂದ ವರ್ಗಾಯಿಸಿತ್ತು.
ಇದನ್ನೂ ಓದಿ:ಮಲೆನಾಡು ಕರಾವಳಿಯಲ್ಲಿ ಬಿರುಸಿನ ಮಳೆ, ಜನಜೀವನ ಅಸ್ತವ್ಯಸ್ತ
ಒಂದೆಡೆ ಪೂಜಾ ಖೇಡ್ಕರ್​ ವಿಚಾರ ತೀವ್ರವಾಗುತ್ತಿದ್ದಂತೆ ಮತ್ತೊಂದೆಡೆ ಆಕೆಯ ತಾಯಿ ಮನೋರಮ ಖೇಡ್ಕರ್ ಭೂಮಿ ವಿಷಯಕ್ಕೆ ಸ್ಥಳೀಯ ರೈತನೊಂದಿಗೆ ಜಟಾಪಟಿ ಮಾಡಿದ್ದಲ್ಲದೇ ಆತನ ಹಣೆಗೆ ನೇರವಾಗಿ ಗನ್ ​ಇಟ್ಟು ಬುಲೆಟ್ ಹಾರಿಸಲು ಮುಂದಾಗಿದ್ದರು. ಇಷ್ಟಲ್ಲದೇ ಭೂಮಿ ವಿಚಾರಕ್ಕೆ ಬರಬಹುದು ಎಂದು ಬೆದರಿಕೆ ಕೂಡ ಹಾಕಿದ್ದರು. ಈ ಆರೋಪಗಳನ್ನು ದಾಖಲಿಸಿಕೊಂಡ ಪುಣೆ ಪೊಲೀಸರು ಪೂಜಾ ಮತ್ತು ಆಕೆಯ ಪೋಷಕರ ವಿರುದ್ಧ ದೂರು ದಾಖಲಿಸಿ, ವಿಚಾರಣೆ ಕೈಗೊಂಡಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಕಳುಹಿಸಿದ ಪೊಲೀಸರಿಗೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಮನೆಯಿಂದ ಪರಾರಿಯಾಗಿದ್ದ ಪೂಜಾ ತಾಯಿಯನ್ನು ಕಡೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಎಎಸ್ ಟ್ರೈನಿ ಅಧಿಕಾರಿ ಪೂಜಾ ತಾಯಿ ಮನೋರಮಾ ಖೇಡ್ಕರ್ ವಿರುದ್ಧದ ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 307 ಸೇರಿಸಿರುವುದರ ಬಗ್ಗೆ ಸಮರ್ಥಿಸಿಕೊಂಡ ಪುಣೆ ಪೊಲೀಸರು, ಆರೋಪಿಗಳು ದೂರುದಾರರ ತಲೆಯ ಮೇಲೆ ಬಂದೂಕು ಇಟ್ಟಿದ್ದಲ್ಲದೇ, ಟ್ರಿಗರ್​ ಎಳೆದು ಗುಂಡು ಹಾರಿಸುವಲ್ಲಿ ಮುಂದಾಗಿದ್ದರು. ಆದ್ರೆ, ಸ್ಥಳದಲ್ಲಿದ್ದ ಇತರರು ಆಕೆಯನ್ನು ತಡೆದಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ಮಹಾರಾಷ್ಟ್ರದ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಫಸ್ಟ್​​​ ನೈಟ್​ ವೇಳೆ ನವದಂಪತಿ ಜತೆ ವಧುವಿನ ತಾಯಿ ಕೂಡ ಅದೇ ರೂಮಿನಲ್ಲಿರಬೇಕು! ಇದೊಂದು ವಿಚಿತ್ರ ಆಚರಣೆ
ಭೂ ವಿವಾದ ಪ್ರಕರಣದಲ್ಲಿ ಮನೋರಮಾ ಖೇಡ್ಕರ್ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ಕೋರಿದ ಪುಣೆ ಪೊಲೀಸರು, ಪೂಜಾ ತಾಯಿ ಮತ್ತು ಆಕೆಯ ಪತಿ ದಿಲೀಪ್ ಮತ್ತು ಇತರ ಮೂವರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ತೋರಿಸಿದ್ದಾರೆ. ಇವರು ಪ್ರಭಾವಿ ಮತ್ತು ರಾಜಕೀಯವಾಗಿ ಸಕ್ರಿಯ ವ್ಯಕ್ತಿಗಳು ಎಂದು ವಿವರಿಸಿದ್ದು, ಸದ್ಯ ಆಕೆಯನ್ನು ಜುಲೈ 20ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ,(ಏಜೆನ್ಸೀಸ್).
ಪಾಕಿಸ್ತಾನದಲ್ಲಿ ಜಸ್ಪ್ರೀತ್​ ಬುಮ್ರಾ! ಮಾಜಿ ಕ್ರಿಕೆಟಿಗ ವಾಸೀಮ್ ಅಕ್ರಂ ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
