ಮುಂಬೈ:ಪ್ರೀತಿ ಎಂತ ದುಷ್ಕೃತ್ಯವನ್ನಾದರೂ ಮಾಡುವುದಕ್ಕೆ ನಾಂದಿ ಹಾಡಿಬಿಡುತ್ತದೆ ಎನ್ನುತ್ತಾರೆ. ಅದೇ ರೀತಿ ಒನ್​ ಸೈಡ್​ ಲವ್​ನಿಂದಾಗಿ ಒಬ್ಬ ಮೃತನಾಗಿ, ಇನ್ನೊಬ್ಬಳು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಮುಂಬೈನ ಮೇಘವಾಡಿ ಪ್ರದೇಶದಲ್ಲಿ ವಾಸಿಸಿದ್ದ ಯುವತಿಯೊಬ್ಬಳನ್ನು ಯುವಕನೋರ್ವ ಪ್ರೀತಿಸುತ್ತಿದ್ದನಂತೆ. ಎರಡೂವರೆ ವರ್ಷಗಳಿಂದ ಅವರಿಬ್ಬರ ಮಧ್ಯೆ ಸ್ನೇಹವಿದ್ದು, ಆತ ಮಾತ್ರ ಅದನ್ನು ಪ್ರೀತಿಯಾಗಿ ಪರಿಗಣಿಸಿದ್ದನಂತೆ. ನಿಮ್ಮ ಮಗಳನ್ನು ನನಗೇ ಮದುವೆ ಮಾಡಿಕೊಡಿ ಎಂದು ಆಕೆಯ ಮನೆಗೆ ಬಂದು ಕೇಳಿದ್ದನಂತೆ. ಆದರೆ ಯುವತಿಯ ತಂದೆ ತಾಯಿ ಅದಕ್ಕೆ ಒಪ್ಪಿಲ್ಲ. ಅದೇ ದ್ವೇಷವನ್ನು ಬೆಳೆಸಿಕೊಂಡ ಆತ ಮಾಡಬಾರದ ಕೆಲಸ ಮಾಡುವ ಯೋಜನೆಯನ್ನು ಹಾಕಿಯೇ ಬಿಟ್ಟಿದ್ದಾನೆ.
ಫೆಬ್ರವರಿ 6ರಂದು ಯುವತಿಯ ಮನೆಯಲ್ಲಿ ಆಕೆಯನ್ನು ಬಿಟ್ಟು ಬೇರಾರೂ ಇಲ್ಲದ್ದನ್ನು ತಿಳಿದುಕೊಂಡ ಯುವಕ, ಒಂದು ಬಾಟೆಲ್​ನಲ್ಲಿ ಪೆಟ್ರೋಲ್​ ಹಿಡಿದು ಆಕೆಯ ಮನೆಯೊಳಗೆ ನುಗ್ಗಿದ್ದಾನೆ. ಯುವತಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿ ಉರಿಯುವುದನ್ನು ಕಂಡು ಭಯಭೀತಳಾದ ಯುವತಿ ತಕ್ಷಣ ಬೆಂಕಿ ಹಚ್ಚಿದ್ದ ಯುವಕನನ್ನೂ ಅಪ್ಪಿಕೊಂಡಿದ್ದಾಳೆ. ಆತನ ದೇಹಕ್ಕೂ ಬೆಂಕಿ ಹತ್ತಿ ಉರಿಯಲಾರಂಭಿಸಿದೆ.
ಮನೆಯಲ್ಲಿ ಕೂಗಾಟ ಕೇಳಿದ ನಂತರ ಅಕ್ಕ ಪಕ್ಕದ ಮನೆಯವರು ಒಳಗೆ ಬಂದು ನೋಡಿದ್ದಾರೆ. ಎರಡು ದೇಹಗಳು ಬೆಂಕಿಯಲ್ಲಿ ನರಳಾಡುತ್ತಿರುವುದನ್ನು ಕಂಡು ತಕ್ಷಣ ಬೆಂಕಿ ನಂದಿಸಿ, ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಯುವಕ ಸಾವನ್ನಪ್ಪಿದ್ದಾನೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. (ಏಜೆನ್ಸೀಸ್​)
ನ್ಯೂಯಾರ್ಕ್​ನಲ್ಲಿ ಶಾರುಖ್​ ಖಾನ್​ ಮಗಳಿರುವ ಡ್ರೀಮ್​ ಅಪಾರ್ಟ್​ಮೆಂಟ್​ ಹೇಗಿದೆ ಗೊತ್ತಾ? ಫೋಟೋ ಇಲ್ಲಿದೆ ನೋಡಿ..

ಬಿಜೆಪಿ ನಾಯಕನ ಮೇಲೆ ಕಪ್ಪು ಮಸಿ ಸುರಿದ ಶಿವಸೇನೆ ನಾಯಕರು! ಸೀರೆ ತೊಡುವಂತೆ ಮಾಡಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
