ನವದೆಹಲಿ:ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇದೊಂದು ಪ್ರವೃತ್ತಿಯಾಗಿ ಮಾರ್ಪಟ್ಟಿದೆ.
ಇದೀಗ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಬ್ಯಾಕ್​ಫ್ಲಿಪ್​ ಸ್ಟಂಟ್​​ ಮಾಡಲು ಹೋಗಿ ವಿಫಲವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವ್ಯಕ್ತಿಯ ನಡೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಇದರ ಅವಶ್ಯಕತೆಯಾದರೂ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ವಿಡಿಯೋವನ್ನು ಚಮನ್​ ಬ್ಯಾಕ್​ಫ್ಲಿಪರ್​ ಎಂಬುವವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಮೆಟ್ರೋ ಮೇ ಚೋಟ್ ಲಗ್ ಗೈ. (ಮೆಟ್ರೋದಲ್ಲಿ ಗಾಯಗೊಂಡಿದ್ದೇನೆ) ಎಂದು ಬರೆದುಕೊಂಡಿದ್ದಾರೆ.
Man's Failed Attempt At Backflip In Delhi Metro Leaves Internetpic.twitter.com/vA8RNsAkRN
ಇದನ್ನೂ ಓದಿ:ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ವ್ಯಕ್ತಿಯ ನಡೆಯನ್ನು ಟೀಕಿಸಿದ್ದು, ಈ ರೀತಿಯ ಅಧಿಕಪ್ರಸಂಗತನದ ಕೆಲಸಗಳನ್ನು ಮಾಡುವ ಬದಲು ಸುಮ್ಮನೆ ಇರುವುದೇ ಲೇಸು ಎಂದಿದ್ದಾರೆ. ಅದಲ್ಲದೆ ಜನರು ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಹರಿಬಿಡುತ್ತಿದ್ದಾರೆ ಎಂದು ಕೆಲವರು ಆಕ್ಷೇಪಿಸಿದ್ದಾರೆ.
ಇಂತಹ ವ್ಯಕ್ತಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದು ಅಪಾಯಕಾರಿ. ಈ ರಿತಿಯ ಸಾಹಸಗಳನ್ನು ಹೇಗೆ ಮಾಡಬೇಕೆಂದು ನಿಮಗೆ ಗೊತ್ತಿಲದಿರುವಾಗ ಇದನ್ನು ಮಾಡು ಎಂದು ಹೇಳಿದವರು ಯಾರು ಸುಮ್ಮನೆ ಮೂರ್ಖರಂತೆ ವರ್ತಿಸಬೇಡಿ ಎಂದು ಹಲವರು ವೈರಲ್​ ವಿಡಿಯೋಗೆ ಕಮೆಂಟ್​ ಮಾಡಿ ಕಿಡಿಕಾರಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
