ಬೆಂಗಳೂರು :ಹಾಲು ಅಮೃತಕ್ಕೆ ಸಮಾನ. ಆದರೆ ಹಣ ಮಾಡಿಕೊಳ್ಳುವ ದೃಷ್ಟಿಯಿಂದ ಹಲವು ಖಾಸಗಿ ಸಂಸ್ಥೆಗಳು ನಾನಾ ರೀತಿಯ ಕೆಮಿಕಲ್​ಗಳನ್ನು ಬೆರೆಸುತ್ತಾರೆ ಎಂಬ ಆರೋಪ ಇಂದು ನಿನ್ನೆಯದಲ್ಲ. ಅದೇ ರೀತಿ ಹಾಲಿಗೆ ಡಿಟರ್ಜೆಂಟ್ ಪೌಡರ್ ಹಾಕಲಾಗುತ್ತದೆ ಎಂದು ನೆಟ್ಟಿಗರೊಬ್ಬರು ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಇಂತಹ ಕಲಬೆರಕೆಗಳೂ ನಡೆಯುತ್ತವೆಯೇ ಎಂದು ಕೇಳಿದ ಈ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ಇದು ಟ್ರೆಂಡಿಂಗ್ ( ವೈರಲ್ ) ಆಗಿದೆ .
ಇದನ್ನೂ ಓದಿ:ಸೀರೆಯನ್ನು ಹೀಗೂ ಕಟ್ಟಬಹುದೇ.. ರಾಶಿ ಖನ್ನಾ? ನಟಿಗೆ ನೆಟ್ಟಿಗರ ಪ್ರಶ್ನೆ..
ರಾಮ್ ಎಂಬ ಉದ್ಯಮಿ 2005 ರಲ್ಲಿ ಆದ ತಮ್ಮ ಅನುಭವವನ್ನು ವಿವರಿಸುವ ಪೋಸ್ಟ್ ಮಾಡಿದ್ದಾರೆ. ಅಂದಿನಿಂದ ಮಾರುಕಟ್ಟೆಯಲ್ಲಿ ಸಿಗುವ ಲಸ್ಸಿ, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ ಎಂದಿದ್ದಾರೆ.
ಕಂಪನಿಯೊಂದರಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಈ ವಿಷಯ ತಿಳಿಸಿರುವುದಾಗಿ ಅವರು ವಿವರಿಸಿದ್ದಾರೆ
“ಆ ಸಮಯದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ನನ್ನ ಬಳಿಗೆ ಬಂದರು. ಡಿಟರ್ಜೆಂಟ್ ನಲ್ಲಿ ಪರಿಮಳ ಸ್ವಲ್ಪ ಕಡಿಮೆ ಮಾಡಿದರೆ ಮಾರಾಟ ಹೆಚ್ಚುತ್ತದೆ ಎಂದರು. ಈ ಬಗ್ಗೆ ಗ್ರಾಹಕರಿಂದ ಯಾವುದೇ ದೂರುಗಳಿವೆಯೇ ಎಂದು ನಾನು ಕೇಳಿದೆ. ಹಲವರು ಡಿಟರ್ಜೆಂಟ್ ಗಳನ್ನು ಖರೀದಿಸಿ ಹಾಲಿನಲ್ಲಿ ಮಿಶ್ರಣ ಮಾಡುತ್ತಾರೆ ಎಂದರು.
ಡಿಟರ್ಜೆಂಟ್‌ನಲ್ಲಿರುವ ಆಪ್ಟಿಕಲ್ ಬ್ರೈಟ್ನರ್‌ನಿಂದಾಗಿ ಹಾಲು ಬಿಳಿಯಾಗಿ ಕಾಣುತ್ತದೆ ಮತ್ತು ಡಿಟರ್ಜೆಂಟ್‌ನಿಂದಾಗಿ ಹಾಲಿಗೆ ನೊರೆ ಕೂಡ ಇರುತ್ತದೆ ಎಂದು ಅವರು ಹೇಳಿದರು. ನನ್ನ ಪ್ರತಿಸ್ಪರ್ಧಿ ಉತ್ಪನ್ನವನ್ನು ಜನರು ಹೆಚ್ಚು ಖರೀದಿಸುತ್ತಿದ್ದಾರೆ. ಏಕೆಂದರೆ ಅದರಲ್ಲಿ ಡಿಟರ್ಜೆಂಟ್​ ವಾಸನೆ ತುಂಬಾ ಇಲ್ಲ. ಎಂದು ಅವರು ಹೇಳಿದರು. ಆ ನಂತರ ನಾನು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಿದೆ,” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಓದಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಕಲಬೆರಕೆಗಳೂ ನಡೆಯುತ್ತವೆಯೇ ಎಂದು ಆಶ್ಚರ್ಯಪಟ್ಟಿದ್ದಾರೆ. ಹೀಗಾದರೆ ಸರ್ಕಾರಗಳು ಏನು ಮಾಡುತ್ತಿವೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಮ್ಮ ಊರಿನಲ್ಲೇ ಸಹಕಾರಿ ಸಂಘದ ಹಾಲಿನ ಡೇರಿಯಲ್ಲಿ ಕಲಬೆರಕೆ ಇಲ್ಲದ ಹಾಲು ಸಿಗುತ್ತದೆ ಎಂದು ನೆಟಿಜನ್ ಹೇಳಿದ್ದಾರೆ.
ಎರಡು ದಿನದ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ ಬಾಂಗ್ಲಾ ಪ್ರಧಾನಿ ಹಸೀನಾ..ಶನಿವಾರ ಪ್ರಧಾನಿ ಮೋದಿ ಭೇಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
