ಗಾಂಧಿನಗರ:ಗುಜರಾತ್​ನ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಮನ್ಸುಖ್​ ವಾಸವಾ ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬುಧವಾರದಂದು ಅದನ್ನು ವಾಪಾಸು ಪಡೆದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಅವರು ರಾಜೀನಾಮೆ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಬಿಜೆಪಿ ಹಿರಿಯ ಸಂಸದ ರಾಜೀನಾಮೆ; ನನ್ನ ತಪ್ಪಿಂದ ಪಕ್ಷಕ್ಕೆ ತೊಂದರೆಯಾಗಬಾರದೆಂದ ಮಾಜಿ ಕೇಂದ್ರ ಸಚಿವ
ಮನ್ಸುಖ್​ ಅವರು ಮಂಗಳವಾರದಂದು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್​ ಪಾಟಿಲ್​ ಅವರಿಗೆ ಕಳುಹಿಸಿಕೊಟ್ಟಿದ್ದರು. ನನಗೆ ಪಕ್ಷ ಹೆಚ್ಚಿನ ಜವಾಬ್ದಾರಿಯನ್ನೇ ಕೊಟ್ಟಿತ್ತು. ನನ್ನ ತಪ್ಪಿನಿಂದಾಗಿ ಪಕ್ಷಕ್ಕೆ ಕೆಟ್ಟ ಹೆಸರು ಬರಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಮುಂದಿನ ಕೇಂದ್ರ ಬಜೆಟ್​ ಅಧಿವೇಶನದ ಸಮಯದಲ್ಲಿ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಅವರು ಹೇಳಿಕೊಂಡಿದ್ದರು.
ರಾಜೀನಾಮೆ ನೀಡಿದ ನಂತರ ಅವರು ಸಿಆರ್​ ಪಾಟೀಲ್​ರನ್ನು ಭೇಟಿಯಾಗಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ವಿಜಯ್​ ರೂಪಾಣಿ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದಾದ ನಂತರ ತಮ್ಮ ರಾಜೀನಾಮೆಯನ್ನು ವಾಪಾಸು ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!
ಆರು ಬಾರಿ ಭರೂಚ್​ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಮನ್ಸುಖ್​ ಅವರು, ರಾಜ್ಯ ಬಿಜೆಪಿಯೊಂದಿಗೆ ಮನಸ್ಥಾಪ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ತಾವು ಎತ್ತಿದ್ದ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಬೇಸರದಿಂದ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. (ಏಜೆನ್ಸೀಸ್​)
ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
