ಚೆನ್ನೈ:33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಏರ್​ಪಿಸ್ತೂಲ್​ ವಿಭಾಗದಲ್ಲಿ ಅವಳಿ ಕಂಚು ಪದಕಗಳನ್ನು ಗೆದ್ದು ಕೊಟ್ಟ ಮನು ಭಾಕರ್​ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಒಲಿಂಪಿಕ್ಸ್​ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಪಾತ್ರರಾಗಿದ್ದಾರೆ.
ಮನು ಭಾಕರ್​ ಅವರ ಸಾಧನೆಯನ್ನು ಮೆಚ್ಚಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಅವರಿಗೆ ಇತ್ತೀಚಿಗೆ ತಮಿಳುನಾಡಿನ ಕಾಲೇಜೊಂದರಲ್ಲಿ ಸನ್ಮಾನ ಸಮಾಂರಭವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಯಾರೆಂಬುದೇ ತಮಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.
Olympian Manu Bhaker at Chennai Meet!!!Mahabalipuram ❌Meenakshi Temple ❌MK Stalin ❌Actor Vijay ✅pic.twitter.com/tCoQ5Aydbl
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ವಿದ್ಯಾರ್ಥಿಯೊಬ್ಬರು ಮನು ಭಾಕರ್​ಗೆ ಮಹಾಬಲಿಪುರಂ, ಮೀನಾಕ್ಷಿ ದೇವಸ್ಥಾನ ಹಾಗೂ ಎಂ.ಕೆ. ಸ್ಟಾಲಿನ್​ ಬಗ್ಗೆ ಕೇಳಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ನಗುತ್ತಲೇ ಉತ್ತರಿಸುವ ಮನು ಇವರ ಬಗ್ಗೆ ನನಗೆ ತಿಳಿದಿಲ್ಲ. ಚೆಸ್​ ಆಟಗಾರ ಆರ್. ಪ್ರಗ್ನಾನಂದ ಮತ್ತು ಪ್ರಸಿದ್ಧ ನಟ ದಳಪತಿ ವಿಜಯ್ ಅವರ ಬಗ್ಗೆ ನನಗೆ ಗೊತ್ತು. ನಾನು ಪ್ರಾಗ್ ಆಟವನ್ನು ಲೈವ್ ಆಗಿ ನೋಡಿದ್ದೇನೆ ಮತ್ತು ವಿಜಯ್ ಬಗ್ಗೆಯೂ ತಿಳಿದಿದೆ ಎಂದು ಹೇಳಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ಶೂಟರ್ ಸ್ವರ್ಧೆಯಲ್ಲಿ ಮನು ಭಾಕರ್ ಕಂಚು ಗೆಲ್ಲುವ ಮೂಲಕ ಭಾರತದ ಖಾತೆಯನ್ನು ತೆರೆದರು. ನಂತರ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಕಂಚಿನ ಪದಕವನ್ನು ಗೆದಿದ್ದಾರೆ. 25ಮೀ ಏರ್​ಪಿಸ್ತೂಲ್​ ವಿಭಾಗದಲ್ಲಿ ಅವರು ಹ್ಯಾಟ್ರಿಕ್​ ಪದಕ ಸಾಧಿಸುವ ಕನಸು ಸ್ವಲ್ಪದರಲ್ಲೇ ಭಗ್ನಗೊಂಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eleven =
Remember me
