ಬೆಂಗಳೂರು: ಬೇಡಿಕೆಯ ಏರುಗತಿಗೆ ಅನುಗುಣವಾಗಿ ತಯಾರಿಕಾ ವಲಯದ ಚಟುವಟಿಕೆ ಜನವರಿಯಲ್ಲಿ ಹೆಚ್ಚಾಗಿದ್ದು ಕಳೆದ ಎಂಟು ವರ್ಷಗಳಲ್ಲೇ ಇದು ದಾಖಲೆಯ ಮಟ್ಟದ್ದಾಗಿದೆ. ಹೊಸ ಬೇಡಿಕೆ ಹಾಗೂ ಉತ್ಪನ್ನಗಳ ಪರಿಣಾಮವಾಗಿ ತಯಾರಿಕಾ ವಲಯದಲ್ಲಿ ಚಟುವಟಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ತಿಳಿಸಿದೆ. ಆರ್ಥಿಕತೆ ಮತ್ತೆ ದೃಢವಾಗಿ ಚೇತರಿಸಿಕೊಳ್ಳುವ ಲಕ್ಷಣ ಇದಾಗಿರಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.
ನಿಕ್ಕೆ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ (ಪಿಎಂಐ) ಕಳೆದ ವರ್ಷ ಡಿಸೆಂಬರ್​ನಲ್ಲಿ ಶೇ. 52.7 ಇದ್ದದ್ದು ಜನವರಿಯಲ್ಲಿ ಶೇ. 55.3ಕ್ಕೆ ಜಿಗಿದಿದೆ. 2012 ಫೆಬ್ರವರಿ ನಂತರ ದಾಖಲಾದ ಅತಿ ಹೆಚ್ಚಿನ ಸೂಚ್ಯಂಕ ಇದಾಗಿದೆ ಎಂದು ಸಮೀಕ್ಷೆ ನಡೆಸಿರುವ ಐಎಚ್​ಎಸ್ ಮಾರ್ಕಿಟ್ ತಿಳಿಸಿದೆ. ಮಾರಾಟದಲ್ಲಿ ಭಾರಿ ಜಿಗಿತ ಕಂಡುಬಂದಿದ್ದರಿಂದ ಕಾರ್ಖಾನೆಗಳು ಕಳೆದ ಏಳು ವರ್ಷಗಳಲ್ಲೇ ತ್ವರಿತವಾಗಿ ಹೊಸ ಕಾರ್ವಿುಕರನ್ನು ನೇಮಿಸಿಕೊಂಡಿವೆ ಎಂದೂ ಸಮೀಕ್ಷೆಯಿಂದ ಗೊತ್ತಾಗಿದೆ.
‘ಬೇಡಿಕೆಯಲ್ಲಿ ಕಂಡು ಬಂದ ತೀವ್ರ ಹೆಚ್ಚಳದಿಂದ ಮಾರಾಟ, ಕಚ್ಚಾ ಸಾಮಗ್ರಿ ಖರೀದಿ, ಉತ್ಪಾದನೆ ಮತ್ತು ಉದ್ಯೋಗದ ಹೆಚ್ಚಳಕ್ಕೂ ಕಾರಣವಾಗಿದೆ. ಹೊಸ ಉದ್ಯಮಗಳು ಇನ್ನಷ್ಟು ಪ್ರಗತಿ ನಿರೀಕ್ಷೆಯಿಂದ ವ್ಯವಹಾರ ಸಾಮರ್ಥ್ಯ ವಿಸ್ತರಿಸಲು ಗಮನ ಕೇಂದ್ರೀಕರಿಸಿವೆ’ ಎಂದು ಐಎಚ್​ಎಸ್ ಮಾರ್ಕಿಟ್​ನ ಪ್ರಧಾನ ಅರ್ಥಶಾಸ್ತ್ರಜ್ಞ ಪೊಲ್ಯಣ್ಣ ಡಿ ಲಿಮಾ ತಿಳಿಸಿದ್ದಾರೆ.ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಉದ್ದಿಮೆಗಳು ಇನ್ನೂ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ವ್ಯಕ್ತಪಡಿಸಿರುವುದರಿಂದ ಹಾಗೂ ಹೊಸ ಗ್ರಾಹಕರು ಸೇರ್ಪಡೆಯಾಗುವ ಆಶಯ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ಪಾದನೆ ಇನ್ನಷ್ಟು ಹೆಚ್ಚುವ ಹುಮ್ಮಸ್ಸಿನಲ್ಲಿ ಉದ್ಯಮಿಗಳಿದ್ದಾರೆ ಎಂದೂ ಲಿಮಾ ಹೇಳಿದ್ದಾರೆ.
ಈ ನಡುವೆ, ಕಚ್ಚಾ ಸಾಮಗ್ರಿಗಳು ಮತ್ತು ಉತ್ಪನ್ನಗಳ ಬೆಲೆ ನಿಧಾನ ಗತಿಯಲ್ಲಿ ಏರಿದೆ. ಇದು ಹಣದುಬ್ಬರ ಸ್ವಲ್ಪ ಕಡಿಮೆಯಾಗಿರುವುದರ ಸೂಚನೆಯಾಗಿದೆ. ಡಿಸೆಂಬರ್​ನಲ್ಲಿ ಹಣದುಬ್ಬರ ಪ್ರಮಾಣ ಶೇ. 7.35ಕ್ಕೆ ಏರಿತ್ತು. ಆರ್​ಬಿಐ ಹಣದುಬ್ಬರ ಪ್ರಮಾಣ ಶೇ. 4ರೊಳಗೆ ಇರಬೇಕು ಎಂಬ ಗುರಿಹೊಂದಿದೆ. ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದು ಕಳವಳ ಸೃಷ್ಟಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
