ಕೊಚ್ಚಿ:ನಿನ್ನೆಯಷ್ಟೇ ಕೇರಳದ ಕೆಲ ಯೂಟ್ಯೂಬರ್ಸ್​ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ತೆರಿಗೆ ವಂಚನೆ ಆರೋಪದ ಅಡಿಯಲ್ಲಿ ಕೆಲ ಯೂಟ್ಯೂಬರ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಐಟಿ ಇಲಾಖೆ ಮುಂದಾಗಿದೆ.
ಸುಮಾರು 25 ಕೋಟಿ ರೂಪಾಯಿ ತೆರಿಗೆಯನ್ನು ಯೂಟ್ಯೂಬರ್ಸ್​ ವಂಚಿಸಿರುವುದು ಐಟಿ ದಾಳಿ ವೇಳೆ ತಿಳಿದುಬಂದಿದೆ. ಕೆಲ ಯೂಟ್ಯೂಬರ್ಸ್​ 2 ಕೋಟಿ ರೂಪಾಯಿವರೆಗೂ ತೆರಿಗೆ ಕಟ್ಟಬೇಕಿದೆ. ಆದಾಗ್ಯೂ ಕೆಲವರು ಈವರೆಗೂ ಒಂದೇ ಒಂದು ರೂಪಾಯಿ ತೆರಿಗೆ ಕಟ್ಟಿಲ್ಲ ಎಂದು ಐಟಿ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಪಟನಾದಲ್ಲಿ ಮೊಳಗಿದ ವಿಪಕ್ಷಗಳ ಒಗ್ಗಟ್ಟಿನ ಮಂತ್ರ: ಒಂದು ಕ್ಷೇತ್ರಕ್ಕೆ ಒಮ್ಮತದ ಒಬ್ಬನೇ ಅಭ್ಯರ್ಥಿ ನಿಲ್ಲಿಸಲು ಚರ್ಚೆ
ಈ ಬಗ್ಗೆ ವಿಚಾರಿಸಿದಾಗ ಹಲವು ಯೂಟ್ಯೂಬರ್ಸ್​ ತೆರಿಗೆ ಕಟ್ಟಬೇಕು ಎಂಬುದು ನಮಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಐಟಿ ಇಲಾಖೆಯು ತನ್ನ ತೆರಿಗೆ ತಪಾಸಣೆಯನ್ನು ರಾಜ್ಯದ ಹೆಚ್ಚಿನ ಯೂಟ್ಯೂಬರ್ಸ್​ಗೆ ವಿಸ್ತರಿಸುವ ಸುಳಿವು ಸಿಕ್ಕಿದೆ. ಇದುವರೆಗೆ ಐಟಿ ಅಧಿಕಾರಿಗಳು ರಾಜ್ಯದ 13 ಯೂಟ್ಯೂಬರ್ಸ್​ ಮನೆ ಮತ್ತು ಕಚೇರಿಗಳನ್ನು ಮಾತ್ರ ಪರಿಶೀಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿಯಾಗುವ ಸಾಧ್ಯತೆ ಇದೆ. ಯೂಟ್ಯೂಬರ್ಸ್​ ಆದಾಯವನ್ನು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.
ಐಟಿ ಇಲಾಖೆಯ ಅಧಿಕಾರಿಗಳು, ನಟಿ ಮತ್ತು ಆಂಕರ್ ಪರ್ಲೆ ಮಾನಿ, ಫಿಶಿಂಗ್ ಫ್ರೀಕ್ಸ್ (ಸೆಬಿನ್), ಎಂ4ಟೆಕ್, ಆರ್ಜ್ಯೂ, ಕಾಲ್ಮೆಶಜ್ಜಮ್, ಅಖಿಲ್ ಎನ್‌ಆರ್‌ಡಿ, ಜಯರಾಜ್ ಜಿ ನಾಥ್, ಅನ್‌ಬಾಕ್ಸಿಂಗ್ ಡ್ಯೂಡ್, ರೈಸಿಂಗ್ ಸ್ಟಾರ್, ಈಗಲ್ ಗೇಮಿಂಗ್ ಮತ್ತು ಕಾಜ್ಟ್ರೋ ಗೇಮಿಂಗ್ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿ ನಡೆಸಿದರು. ಇವರಲ್ಲಿ ಹಲವರ ವಾರ್ಷಿಕ ಆದಾಯ 1ರಿಂದ 2 ಕೋಟಿ ರೂಪಾಯಿಗಳಾಗಿದ್ದು, ಉದ್ಘಾಟನೆ, ವಿದೇಶಿ ಪ್ರವಾಸ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಕಷ್ಟು ಆದಾಯ ಬರುತ್ತಿದೆ ಎಂದು ಪರಿಶೀಲನೆ ವೇಳೆ ತಿಳಿದುಬಂದಿದೆ.(ಏಜೆನ್ಸೀಸ್​)
ಜೀವನ ಶಿಕ್ಷಣ ನೀಡುವ ಹಾಸ್ಟೆಲ್; ವಿದ್ಯಾರ್ಥಿ ನಿಲಯದ ಬದುಕು

ಅವಧಿ ಆಧರಿಸಿ ಕರೆಂಟ್ ಬಿಲ್: ಹಗಲು ಕಡಿಮೆ, ರಾತ್ರಿ ಹೆಚ್ಚು ಬೆಲೆ; ಕೇಂದ್ರದ ಹೊಸ ನೀತಿಯಲ್ಲಿ ಪ್ರಸ್ತಾವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 6 =
Remember me
