| ಜೆ.ಸಿ.ಜಾಧವ ಬಾಗಲಕೋಟೆ
ಯಾವುದೇ ದೇಶದ ಆರ್ಥಿಕತೆ ನಿಯಂತ್ರಣ ದಲ್ಲಿಡಲು ಹಣದುಬ್ಬರವೇ ಮಾನದಂಡ. ನಮ್ಮ ಹಿರಿಯರಲ್ಲಿ ಕೆಲವರು ಮಾತನಾಡುವುದನ್ನು ಕೇಳಿರುತ್ತೇವೆ. “ನಮ್ಮ ಕಾಲದಲ್ಲಿ 10 ರೂ.ಕೊಂಡೊಯ್ದರೆ ಚೀಲದ ತುಂಬ ವಸ್ತು ತರುತ್ತಿದ್ದೆವು. ಈಗ ಚೀಲದ ತುಂಬ ರೂಪಾಯಿ ಒಯ್ದು ಪ್ಯಾಕೆಟ್​ನಲ್ಲಿ ದಿನಸಿ ತರುತ್ತೇವೆ’ ಎಂದು. ನಾವು ಯಾವಾಗಲೂ ಹಾಗೆಯೇ ಹಿಂದಿನ ವಿಷಯ ಚರ್ಚಿಸುತ್ತಿರುತ್ತೇವೆ. 10 ವರ್ಷದ ಹಿಂದೆ ಪೆಟ್ರೋಲ್​ ಬೆಲೆ ಲೀಟರ್​ಗೆ 45 ರೂ. ಇತ್ತು. 10 ಗ್ರಾಂ ಬಂಗಾರ 10 ಸಾವಿರ ರೂ. ಆಸುಪಾಸಿನಲ್ಲಿತ್ತು. ತೊಗರಿ ಬೇಳೆ 25 ರಿಂದ 30 ರೂ. ಇತ್ತು. ಹಾಗೆಯೇ ಈ ಅವಧಿಯಲ್ಲಿ ನಮ್ಮ ಆದಾಯವೂ ಹೆಚ್ಚಾಗಿರುತ್ತದೆ. ಆದರೆ ಅದರ ಬಗ್ಗೆ ಗಮನಹರಿಸಲ್ಲ. ಈ ಪ್ರಕ್ರಿಯೆಯೇ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರವೆಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಸದ್ಯ ಎಲ್ಲ ಸರಕು, ಖಾದ್ಯ ತೈಲ, ಇಂಧನ ಹಾಗೂ ಸಾಗಾಣಿಕೆ ದರ ಹೆಚ್ಚಾಗಿದೆ. ಇದಕ್ಕೆ ಕಾರಣ ಹಣದುಬ್ಬರ. ಇತ್ತೀಚಿನ ಅಂದರೆ ಏಪ್ರಿಲ್​ನ ಚಿಲ್ಲರೆ ಹಣದುಬ್ಬರದ ದರ ಶೇ.7.79 ಕ್ಕೆ ತಲುಪಿದೆ. ಮೇ 2014ರಲ್ಲಿ ಶೇ.8.78 ದಾಖಲಾಗಿತ್ತು. ವಿಶ್ಲೇಷಕರ ಪ್ರಕಾರ 2022ರ ಮಾರ್ಚ್​ನಲ್ಲಿ ಶೇ.6.95 ಇದ್ದ ಹಣದುಬ್ಬರ, ಏಪ್ರಿಲ್​ಗೆ ಶೇ.7.5 ಹಂತದಲ್ಲಿ ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅದು ಶೇ.7.79ಕ್ಕೆ ತಲುಪಿದೆ. ಹಾಗೆಯೇ ಭಾರತೀಯ ರಿಸರ್ವ್​ ಬ್ಯಾಂಕ್​ ಅಂದಾಜಿಸಿದ್ದ ಶೇ.6 ದರವನ್ನು ಸತತ 4 ತಿಂಗಳಿನಿಂದ ದಾಟಿದೆ.
ಏರಿಕೆ ಹಂತ:ಗ್ರಾಮೀಣ ಹಣದುಬ್ಬರ ಮಾರ್ಚ್​ನಲ್ಲಿ ಶೇ.7.66 ಇದ್ದರೆ, ಏಪ್ರಿಲ್​ನಲ್ಲಿ ಶೇ.8.33 ಏರಿಕೆಯಾಗಿದೆ. ಅಲ್ಲದೆ, ನಗರ ಹಣದುಬ್ಬರ ಮಾರ್ಚ್​ನಲ್ಲಿ ಶೇ.6.12 ಇದ್ದರೆ, ಏಪ್ರಿಲ್​ನಲ್ಲಿ ಶೇ.7.09ಕ್ಕೆ ಹೆಚ್ಚಿದೆ. ಅದೇ 2021ರ ಏಪ್ರಿಲ್​ನಲ್ಲಿ ಶೇ.3.75 ಹಾಗೂ ಶೇ.4.71 ಅನುಕ್ರಮವಾಗಿ ಇದ್ದದ್ದು ಗಮನಿಸಬೇಕಾದ ಸಂಗತಿ. ಆಹಾರ ಹಣದುಬ್ಬರವು ಮಾರ್ಚ್​ನಲ್ಲಿ ಶೇ.7.68 ಇದ್ದರೆ, ಏಪ್ರಿಲ್​ನಲ್ಲಿ ಶೇ.8.38 ದಾಖಲಾಗಿದೆ. ಇನ್ನು ಕೋರ್​ ಹಣದುಬ್ಬರ ಅಂದರೆ ಆಹಾರ ಮತ್ತು ಪಾನೀಯ ಹಾಗೂ ಇಂಧನ ಮತ್ತು ವಿದ್ಯುತ್​ ಹೊರತುಪಡಿಸಿ ಏಪ್ರಿಲ್​ನಲ್ಲಿ ಶೇ.6.8 ಇದೆ. ಹಣದುಬ್ಬರ ನಿಯಂತ್ರಿಸುವುದಕ್ಕಾಗಿ ಆರ್​ಬಿಐ ಆರ್ಥಿಕ ನೀತಿ ನಿರೂಪಣಾ ಸಮಿತಿ ಅಥವಾ ವಿತ್ತೀಯ ನೀತಿ ಸಮಿತಿ ಸಭೆ ಇತ್ತೀಚೆಗೆ ನಡೆಯಿತು. ಸಮಿತಿಯ ಶಿಫಾರಸಿನಂತೆ ಆರ್​ಬಿಐ ಗವರ್ನರ್​, ರೆಪೋ ದರವನ್ನು 40 ಮೂಲಾಂಶ ಏರಿಸುವ ನಿರ್ಧಾರ ಪ್ರಕಟಿಸಿದ್ದು, (ಶೇ.4.4 ಆಗಿದೆ) ಇದು ತಕ್ಷಣದಿಂದ ಜಾರಿ ಮಾಡಲಾಗಿದೆ. ಪ್ರಸ್ತುತ ಜಾಗತಿಕ ಸಂಕಷ್ಟಗಳು ಮುಂದುವರಿದಿರುವ ಹಾಗೂ ಸರಕುಗಳ ಬೆಲೆ ಏರಿಕೆಯ ಕಾರಣ, ಮುಂದಿನ ದಿನಗಳಲ್ಲಿ ಹಣದುಬ್ಬರದ ಮೇಲೆ ಬೀಳುವ ಹೆಚ್ಚಿನ ಒತ್ತಡವನ್ನು ನಿಭಾಯಿಸಲು ಜೂನ್​ನಲ್ಲಿ ಆರ್​ಬಿಐ ನಡೆಸುವ ವಿತ್ತಿಯ ಸಮಿತಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಶ ಹೆಚ್ಚಿಸುವ ನಿರೀೆಯಿದೆ ಎಂದು ಕೇರ್​ ರೇಟಿಂಗ್ಸ್​ನ ಆರ್ಥಿಕ ತ ರಜನಿ ಸಿನ್ಹಾ ಅಭಿಪ್ರಾಯ ಪಡುತ್ತಾರೆ.
4 ದೇಶಗಳಿಗೆ ಸಮಸ್ಯೆನೊಮ್ಯುರಾ ಸಂಶೋಧನಾ ಸಂಸ್ಥೆ ಪ್ರಕಾರ ಏಷ್ಯಾದ ಭಾರತ, ಸಿಂಗಾಪುರ್​, ದಣ ಕೋರಿಯಾ ಮತ್ತು ತೈವಾನ್​ ತೀವ್ರ ಹಣದುಬ್ಬರ ಎದುರಿಸಲಿವೆ.
ಪೂರೈಕೆಯಲ್ಲಿ ಕೊರತೆ* ಉತ್ಪಾದನೆ ಕುಂಠಿತವಾದಾಗ ಪೂರೈಕೆ ಕಡಿಮೆಯಾಗುತ್ತದೆ. ಕಚ್ಚಾ ವಸ್ತುಗಳ ಪೂರೈಕೆ, ಕಾರ್ಮಿಕರ ಕೊರತೆಯಿಂದ ಉತ್ಪಾದನೆ ಕುಂಠಿತವಾಗುವುದರಿಂದ ಮಾರುಕಟ್ಟೆಗೆ ಸರಕುಗಳು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬಾರದೇ ಬೆಲೆ ಏರಿಕೆ ಕಾಣುತ್ತೇವೆ.* ಉದ್ಯೋಗಕ್ಕೆ ಸಂಬಂಧಿಸಿದ ವ್ಯಾಜ್ಯ ಸಹ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ. ಕಾರ್ಮಿಕ ಒಕ್ಕೂಟಗಳ ಸತ್ಯಾಗ್ರಹ ಅಥವಾ ಉದ್ಯೋಗದಾತರು ಲಾಕ್​ಔಟ್​ ಮಾಡುವ ಪ್ರಸಂಗ ಬಂದಾಗ ಉತ್ಪಾದನೆ ಸ್ಥಗಿತವಾಗುತ್ತದೆ.* ಪ್ರವಾಹ, ಯುದ್ಧ ಹಾಗೂ ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ. ಕೃಷಿಉತ್ಪನ್ನಗಳ ಉತ್ಪಾದನೆಯಲ್ಲಿ ಪ್ರಗತಿ ಕಾಣದೇ ಇರುವುದರಿಂದ, ನಿರೀತ ಮಟ್ಟದಲ್ಲಿ ಆಹಾರ ಧಾನ್ಯ ಪೂರೈಸಲಾಗದ ಕಾರಣ ಬೆಲೆ ಏರಿಕೆ.* ವಿದೇಶಿವಿನಿಮಯ ಗಳಿಕೆಗಾಗಿ ರಫ್ತು ವಹಿವಾಟು ಹೆಚ್ಚಿಸುವುದರಿಂದಲೂ ದೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಸರಕು ಲಭ್ಯವಾಗದೇ ಮಾರುಕಟ್ಟೆಯಲ್ಲಿ ಕೊರತೆ ಕಾಣುತ್ತೇವೆ.* ಕೃತಕ ಅಭಾವ ಸೃಷ್ಟಿ, ಕಾಳಸಂತೆಯಲ್ಲಿ ಹಾಗೂ ಅಕ್ರಮ ದಾಸ್ತಾನು ಮಾಡಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದರಿಂದ ಪೂರೈಕೆಯಲ್ಲಿ ಕೊರತೆ ಕಾಣುತ್ತೇವೆ.* ತೈಲ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಚಿನ್ನ ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರಿಂದ.* ರಾಜಕೀಯ ಅಸ್ಥಿರತೆ.
ಸೂಚ್ಯಂಕದ ಲೆಕ್ಕಾಚಾರನಾವು ದಿನನಿತ್ಯ ಖರೀದಿಸುವ ಅಗತ್ಯ ವಸ್ತುಗಳ ಬೆಲೆ ಹಣದುಬ್ಬರದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಗುಂಪಿನ ಸರಕುಗಳ ಸಗಟು ಧಾರಣೆಯ ಬೆಲೆಯ ಆಧಾರದ ಮೇಲೆ ಹಣದುಬ್ಬರದ ಸೂಚ್ಯಂಕ ನಿರ್ಧಾರವಾಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದಾಗ ಹಾಗೂ ಪೂರೈಕೆ ಕಡಿಮೆಯಾದಾಗ ಹಣದುಬ್ಬರವೂ ಏರಿಕೆಯಾಗುತ್ತದೆ. ನಮ್ಮ ದೇಶದಲ್ಲಿ ಸರಕುಗಳ ಗುಂಪನ್ನು ಈ ರೀತಿ ವಿಂಗಡಿಸಲಾಗಿದೆ. ? ಪ್ರಾಥಮಿಕ ಹಂತದ ಸರಕುಗಳು ಶೇ.20.1 ? ಇಂಧನ ಮತು ವಿದ್ಯುತ್​ ಶೇ.1.3 ? ತಯಾರಿಸಿದ ವಸ್ತುಗಳು ಶೇ.65 ? ಮೂಲ ಲೋಹ, ಮಿಶ್ರ ಲೋಹ ಹಾಗೂ ಲೋಹಯುಕ್ತ ಉತ್ಪನ್ನಗಳು ಶೇ.10.8 ? ಯಂತ್ರೋಪಕರಣ ಮತ್ತು ಬಿಡಿಭಾಗ ಶೇ.8.9 ? ಜವಳಿ ಶೇ.7.30 ? ಸಾರಿಗೆ, ಸಾಧನ ಸಲಕರಣೆ, ಬಿಡಿ ಭಾಗ ಶೇ.5.2.
ಪ್ರಭಾವ ಬೀರುವ ಅಂಶಗಳು* ಜನರ ಬಳಿ ಹಣದ ಹರಿವು ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಸರಕು ಖರೀದಿ, ಬೇಡಿಕೆ ಹೆಚ್ಚಳ.* ಅಗತ್ಯಕ್ಕಿಂತ ಹೆಚ್ಚಾಗಿ ಸಾಲ ಲಭ್ಯವಾಗುವುದರಿಂದಲೂ ಜನರ ಬಳಿಗೆ ಹೆಚ್ಚಿನ ಹಣ ಬರುತ್ತದೆ.* ಕಪ್ಪು ಹಣ ಧಾರಾಳವಾಗಿ ಪ್ರಸರಣಗೊಳ್ಳುವುದರಿಂದಲೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ.* ಸಾರ್ವಜನಿಕ ಸಾಲ ಮರುಪಾವತಿ. ಸರ್ಕಾರ ಆಂತರಿಕ ಸಾಲಗಳನ್ನು ಮರುಪಾವತಿ ಮಾಡುವುದರಿಂದಲೂ ಹಣದ ಹರಿವು ಹೆಚ್ಚಳ.* ಖಾಸಗಿ ಸಂಸ್ಥೆಗಳ ಸಾಮರ್ಥ್ಯ ವಿಸ್ತರಣೆಯೂ ಹಣದುಬ್ಬರದ ಹೆಚ್ಚಳಕ್ಕೆ ಕಾರಣ.* ಖಾಸಗಿ ಸಂಸ್ಥೆಗಳು ದೊಡ್ಡ ಪ್ರಮಾಣದ ಬಂಡವಾಳ ತೊಡಗಿಸುವುದರಿಂದ ಹಾಗೂ ಉದ್ಯೋಗದ ಅವಕಾಶ ಹೆಚ್ಚಾಗುವುದರಿಂದಲೂ ಜನರ ಆದಾಯ ಹೆಚ್ಚಾಗಿ ಸರಕು ಹಾಗೂ ಸೇವೆಗಳ ಬೇಡಿಕೆ ಹೆಚ್ಚುವಂತೆ ಮಾಡುತ್ತದೆ.
ವಿಶ್ವರಾಷ್ಟ್ರಗಳಿಗೂ ಬರೆ* ಪಾಕಿಸ್ತಾನ & ರಾಜಕೀಯ ಅಸ್ಥಿರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಹಣದುಬ್ಬರ ಭಾರಿ ಆಘಾತ ತಂದಿದೆ. 2022ರ ಜನವರಿಯಲ್ಲಿ 24 ತಿಂಗಳ ಗರಿಷ್ಠ ಶೇ.13ಕ್ಕೆ ತಲುಪಿತ್ತು. ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ.* ಶ್ರೀಲಂಕಾ & ರಾಜ ಕೀಯ ಅಸ್ಥಿರತೆ, ಆರ್ಥಿಕತೆಗೆ ಆಘಾತ, ಆಡಳಿತ ವಿರೋಧಿ ಸಂರ್ಷದಿಂದ ಲಂಕಾದ ಸ್ಥಿತಿ ಚಿಂತಾಜನಕವಾಗಿದೆ. ಹಣದುಬ್ಬರ ಪ್ರಮಾಣ ಶೇ.17.5ಕ್ಕೆ ತಲುಪಿದೆ.* ಚೀನಾ & ಕರೊನಾದಿಂದ ಕಂಗೆಟ್ಟಿರುವ ಚೀನಾದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ೆಬ್ರವರಿಯಲ್ಲಿ ಶೇ.0.9 ದಾಖಲಿಸಿ ಮಾರ್ಚ್​ನಲ್ಲಿ ಶೇ.1.5 ಏರಿಕೆ ಕಂಡಿದೆ. ಯೂಕ್ರೇನ್​ ಮೇಲೆ ರಷ್ಯಾ ಆಕ್ರಮ, ಕೋವಿಡ್​ ಪರಿಣಾಮಗಳಿಂದ ಚೀನಾ ಹೈರಾಣಾಗಿದೆ.* ಬ್ರಿಟನ್​ & ಮಾರ್ಚ್​ವರೆಗಿನ 12 ತಿಂಗಳಲ್ಲಿ ಬ್ರಿಟನ್​ನಲ್ಲಿ ಹಣದುಬ್ಬರ ದರ ಶೇ.7ಕ್ಕೆ ತಲುಪಿತ್ತು. 1950ರ ದಶಕದ ಮಧ್ಯಭಾಗದ ಬಳಿಕ ಜೀವನಮಟ್ಟದಲ್ಲಿ ಅತಿದೊಡ್ಡ ಕುಸಿತ ಇದೆಂದೇ ವಿಶ್ಲೇಷಿಸಲಾಗಿದೆ.* ಅಮೆರಿಕ & ವಿಶ್ವದ ಹಿರಿಯಣ್ಣ ಅಮೆರಿಕವನ್ನೂ ಹಣದುಬ್ಬರ ಬಿಟ್ಟಿಲ್ಲ. ಮಾರ್ಚ್​ ಅಂತ್ಯದ ವೇಳೆಗೆ ಅಲ್ಲಿನ ಹಣದುಬ್ಬರ ಪ್ರಮಾಣ ಶೇ.8.5ಕ್ಕೆ ಏರಿಕೆ ಕಂಡಿತ್ತು. ಆಹಾರ, ವಸತಿ ಮತ್ತು ಇತರ ಅಗತ್ಯತೆಗಳ ವೆಚ್ಚ ಇದಕ್ಕೆ ಕಾರಣ. 1981ರ ಡಿಸೆಂಬರ್​ನಿಂದ ಅಮೆರಿಕದ ಹಣದುಬ್ಬರ ಪ್ರಮಾಣ ಏರಿಕೆ ಆಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − twelve =
Remember me
