ಗೃಹ ಬಳಕೆ ಉಚಿತ ವಿದ್ಯುತ್ ಯೋಜನೆ ಜುಲೈನಿಂದ ಜಾರಿಯಲ್ಲಿದ್ದು, ಆಗಸ್ಟ್​ನಲ್ಲಿ ಬರುವ ಬಿಲ್​ನಲ್ಲಿ ಹೊಸಯೋಜನೆಯು ಅನ್ವಯವಾಗಿರಲಿದೆ. ಅಂದರೆ, ಜುಲೈನಲ್ಲಿ ಸರ್ಕಾರ ಹಾಕಿದ ಷರತ್ತುಗಳಿಗೆ ಅನ್ವಯವಾಗಿ ಬಿಲ್ ಬಂದಿದ್ದರೆ ಯೋಜನೆಯ ಲಾಭ ಸಿಗಲಿದೆ. ಗರಿಷ್ಠ 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದರೆ ವಿದ್ಯುತ್ ಹೊರೆ ಕಡಿಮೆಯಾಗುವುದು. ಷರತ್ತಿನ ಪ್ರಕಾರ ಕಳೆದ ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ.10ರಷ್ಟನ್ನು ಸೇರಿಸಿದ ಮಿತಿಯೊಳಗೆ ವಿದ್ಯುತ್ ಬಳಸಿದರೆ ವಿದ್ಯುತ್ ಬಿಲ್ ಬರುತ್ತದೆ, ಇದಕ್ಕೆ ಯಾವುದೇ ಹಣ ಕಟ್ಟಬೇಕಿಲ್ಲ.
ಹಾಲು, ಅಕ್ಕಿ, ತರಕಾರಿ ಸೇರಿ ವಿವಿಧ ಪದಾರ್ಥಗಳ ಬೆಲೆ ಏರಿಕೆಯನ್ನು ತೂಗಿಸಲು ಹೋಟೆಲ್​ಗಳು ದರ ಏರಿಸಲು ಮುಂದಾಗಿವೆ. ಕೆಲವು ಹೋಟೆಲ್​ಗಳು ಈಗಾಗಲೇ ದರ ಪರಿಷ್ಕರಣೆ ಮಾಡಿವೆ. ಆಗಸ್ಟ್ 1ರಿಂದ ಅನ್ವಯವಾಗುವಂತೆ ಟೀ, ಕಾಫಿ ಬೆಲೆ ಕೂಡ ಹೆಚ್ಚಳವಾಗಲಿದೆ. ಅಕ್ಕಿ ದರ ಏರಿರುವುದರಿಂದ ಇಡ್ಲಿ, ದೋಸೆ ಬೆಲೆ ಕೂಡ ದುಬಾರಿಯಾಗಲಿದೆ.
ಹಾಲು ಒಕ್ಕೂಟಗಳ ಒತ್ತಡಕ್ಕೆ ಮಣಿದ ಸರ್ಕಾರ ಹಾಲಿನ ದರವನ್ನು 3 ರೂಪಾಯಿ ಏರಿಸಲು ಒಪ್ಪಿಗೆ ಸೂಚಿಸಿತು. ಹೊಸ ಆದೇಶ ಆಗಸ್ಟ್ 1ರಿಂದ ಜಾರಿಗೆ ಬರುತ್ತಿದೆ. ಒಂದೊಂದು ಹಾಲು ಮಹಾಮಂಡಳದಲ್ಲಿ ಪ್ರತಿ ಲೀಟರ್ ಹಾಲಿಗೆ ಒಂದೊಂದು ದರ ಇದ್ದು, ಹಾಲಿನ ದರಕ್ಕೆ ಹೆಚ್ಚುವರಿ ಮೂರು ರೂ. ಸೇರಿಸಿ ಮಾರಾಟ ಮಾಡಲಾಗುತ್ತದೆ. ಈ ಹೆಚ್ಚುವರಿಯನ್ನು ಹಾಲು ಉತ್ಪಾದಕರಿಗೆ ನೀಡಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಹೀಗಾಗಿ ಜನಸಾಮಾನ್ಯರಿಗೆ ಹಾಲು ಕೊಂಚ ತುಟ್ಟಿಯಾಗಲಿದ್ದು, ಹಾಲು ಉತ್ಪಾದಕರಿಗೆ ಹೆಚ್ಚುವರಿ ಮೊತ್ತ ಸಿಗಲಿದೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ಶಾಸನ ಸಭೆ ಅನುಮೋದನೆ ನೀಡಿದ ಬಳಿಕ ರಾಜ್ಯಪಾಲರು ಜು.27ರಂದು ಅಂಕಿತ ಹಾಕಿದ್ದಾರೆ. ಹೊಸ ತೆರಿಗೆ ಪದ್ಧತಿ ಆಗಸ್ಟ್ ನಿಂದ ಜಾರಿಗೆ ಬರುತ್ತಿದೆ. ಅತಿ ಭಾರದ ಸರಕು ವಾಹನಗಳು, ಮೋಟಾರು ಕ್ಯಾಬ್, ಶಾಲಾ ಕಾಲೇಜು ವಾಹನಗಳ ತೆರಿಗೆ ಹೆಚ್ಚಳವಾಗಲಿದೆ. ಶಾಲಾ ಮಕ್ಕಳು ತೆರಳುವ ಶಾಲೆಯ ಒಡೆತನದ ವಾಹನಗಳ ಪ್ರತಿ ಚದರ ಮೀಟರ್ ತೆರಿಗೆಯನ್ನು 20 ರೂ.ನಿಂದ 100ಕ್ಕೆ ಏರಿಕೆ ಮಾಡಲಾಗಿದೆ. 10-15 ಲಕ್ಷದವರೆಗಿನ ಕ್ಯಾಬ್​ಗಳಿಗೆ ವಾಹನದ ಮೌಲ್ಯದ ಮೇಲೆ ಶೇ.9ರಷ್ಟು ತೆರಿಗೆ ವಿಧಿಸಲಾಗುತ್ತದೆ.
ನಿಗದಿತ ಗಡುವಾದ ಜುಲೈ 31ರೊಳಗೆ ಆದಾಯ ತೆರಿಗೆ ವಿವರಗಳನ್ನು (ಐಟಿಆರ್) ಸಲ್ಲಿಸದವರು ದಂಡ ಕಟ್ಟುವುದು ಅನಿವಾರ್ಯ ಆಗಲಿದೆ. ವಾರ್ಷಿಕ 5 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು ಗಡುವಿನೊಳಗೆ ಐಟಿಆರ್ ಸಲ್ಲಿಸದಿದ್ದರೆ 5,000 ರೂಪಾಯಿ ದಂಡ ತೆರಬೇಕು.
ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಅಧಿನಿಯಮ, 2023ಕ್ಕೆ ಶಾಸನ ಸಭೆ ಒಪ್ಪಿಗೆ ನೀಡಿದ್ದು, ರಾಜ್ಯಪತ್ರ ಕೂಡ ಪ್ರಕಟವಾಗಿದೆ. ಆಗಸ್ಟ್​ನಲ್ಲಿ ನಿಯಮಾವಳಿ ಪ್ರಕಟವಾಗಲಿದ್ದು, ಈ ಮೂಲಕ ಎತ್ತರದ ಕಟ್ಟಡಗಳು ಇನ್ನು ಮುಂದೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಅಂದರೆ, ರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ಎತ್ತರದ ಕಟ್ಟಡ ಎಂದರೆ ಯಾವುದೆಂದು ಪ್ರಸ್ತಾಪವಿದೆ. ಅದರ ಪ್ರಕಾರ ನಿರಾಕ್ಷೇಪಣಾ ಪತ್ರ ಪಡೆಯುವಾಗ ನಿಯಮ ಪಾಲಿಸುವ ಜತೆ ಕಟ್ಟಡ ಮಾಲಿಕರು ಶುಲ್ಕವನ್ನೂ ಕಟ್ಟಬೇಕಾಗುತ್ತದೆ. ಶುಲ್ಕ, ನಿಯಮ, ವಿಧಾನದ ಮಾಹಿತಿ ಶೀಘ್ರವೇ ಹೊರಬರುವ ನಿಯಮಗಳಲ್ಲಿ ಸ್ಪಷ್ಟವಾಗಲಿದೆ.
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
