ಅಹಮದಾಬಾದ್‌:ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್​ ಪಂದ್ಯ ಭಾರೀ ಸಂಖ್ಯೆಯ ಅಭಿಮಾನಿಗಳಿಂದ ಕೂಡಿತ್ತು.
ಇದನ್ನೂ ಓದಿ:ಚಾಲಕ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ಲಾರಿ ಪಲ್ಟಿ; ಅಡುಗೆ ಎಣ್ಣೆ ಒಯ್ಯೋಕೆ ಮುಗಿ ಬಿದ್ದ ಜನ
ಪಾಕಿಸ್ತಾನ ನಡುವಿನ ಹೈ-ವೊಲ್ಟೇಜ್​ ಪಂದ್ಯ ವೀಕ್ಷಣೆಗೆ ಸಾಕ್ಷಿಯಾಗಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರತ ಪಂದ್ಯವನ್ನು ಗೆಲ್ಲುವ ಮೂಲಕ ಸಂತಸವನ್ನು ಚೆಲ್ಲಿತು. ಈ ವೇಳೆ ಖುಷಿಯೊಟ್ಟಿಗೆ ಮನೆಗೆ ತೆರಳಬೇಕಿದ್ದ ಕ್ರಿಕೆಟ್​ ಫ್ಯಾನ್ಸ್​ ದುಃಖದಿಂದ ಹೋಗಿರುವುದು ಇದೀಗ ಮುನ್ನೆಲೆಗೆ ಬಂದಿದೆ.
https://twitter.com/tricatrio/status/1713492518472646781?ref_src=twsrc%5Etfw%7Ctwcamp%5Etweetembed%7Ctwterm%5E1713492518472646781%7Ctwgr%5E73e69368ae952cf7296f77a00912687554212fa7%7Ctwcon%5Es1_&ref_url=https%3A%2F%2Fwww.freepressjournal.in%2Fsports%2Find-vs-pak-cwc-2023-several-iphones-stolen-during-high-profile-match-at-narendra-modi-stadium
ಅಸಲಿಗೆ ಭಾರತ ಪಂದ್ಯವನ್ನು ವಶಪಡಿಸಿಕೊಂಡರು ಕ್ರಿಕೆಟ್​ ಅಭಿಮಾನಿಗಳು ಏಕೆ ಬೇಸರಗೊಂಡಿದ್ದಾರೆ ಎಂಬುದಕ್ಕೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನವಾದ ಐಫೋನ್​! ಪಂದ್ಯ ವೀಕ್ಷಿಸಲು ಭಾರೀ ಪ್ರಮಾಣದಲ್ಲಿ ಸ್ಟೇಡಿಯಂಗೆ ಆಗಮಿಸಿದ್ದ ಪ್ರೇಕ್ಷಕರು, ಮೋಜು ಮಾಡುವ ಭರದಲ್ಲಿ ತಮ್ಮ ಬಳಿಯಿರುವ ದುಬಾರಿ ಫೋನ್​ಗಳ ಬಗ್ಗೆ ಹೆಚ್ಚು ಗಮನಹರಿಸುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ:ಭಾರತ-ಪಾಕಿಸ್ತಾನ ಕ್ರಿಕೆಟ್; ಪಂದ್ಯ ನೋಡಲು ಬಂದು 24 ಕ್ಯಾರೆಟ್​​ ಚಿನ್ನದ ಐ ಫೋನ್​​ ಕಳೆದುಕೊಂಡ ನಟಿ
ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ತಮ್ಮ ಐಫೋನ್‌ಗಳನ್ನು ಕಳೆದುಕೊಂಡಿರುವ ಬಗ್ಗೆ ಜನರು ಸೋಷಿಯಲ್​ ಮೀಡಿಯಾದಲ್ಲಿ ದೂರು ನೀಡುವ ಮುಖೇನ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
My friend also lost his brand-new iPhone 14 Pro Max at the Narendra Modi Stadium during the IPL final a few months ago. It seems like the stadium has become a hotspot for thieves. 🙁
— Rahul Kumar Pandey (@raaahulpandey)October 14, 2023

ಈ ಕುರಿತಂತೆ ಎಕ್ಸ್‌ನಲ್ಲಿ (ಟ್ವಿಟರ್​) ನೂರಾರು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ಊರ್ವಶಿ ರೌಟೇಲಾ ಕೂಡ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ಅವರ 24 ಕ್ಯಾರೆಟ್​ ಗೋಲ್ಡ್​ ಐಫೋನ್​ ಮೊಬೈಲ್​ ಕೂಡ ಕಳ್ಳತನವಾದ ಬಗ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ ‘ರಾಮಾಯಣದ ಹನುಮಂತ’; ಎಲ್ಲಿ, ಯಾರ ವಿರುದ್ಧ?
ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡ ನಟಿ, “ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ಓರಿಜಿನಲ್ ಚಿನ್ನದ ಐ ಫೋನ್ ಕಳೆದುಹೋಗಿದೆ! ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ಆದಷ್ಟು ಬೇಗ ನನ್ನನ್ನು ಸಂಪರ್ಕಿಸಿ! ಸಹಾಯ ಮಾಡುವವರು ಟ್ಯಾಗ್ ಮಾಡಿ” ಎಂದು ಊರ್ವಶಿ ಟ್ವೀಟ್ ಮಾಡಿದ್ದಾರೆ.
📱 Lost my 24 carat real gold i phone at Narendra Modi Stadium, Ahmedabad! 🏟️ If anyone comes across it, please help. Contact me ASAP! 🙏#LostPhone#AhmedabadStadium#HelpNeeded#indvspak@modistadium@ahmedabadpoliceTag someone who can help
— URVASHI RAUTELA🇮🇳 (@UrvashiRautela)October 15, 2023

ನಟಿ ಊರ್ವಶಿಯ ಬೆನ್ನಲ್ಲೇ ಹಲವರು ತಮ್ಮ ಐಫೋನ್ ಕಾಣೆಯಾದ ಬಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ,(ಏಜೆನ್ಸೀಸ್).
ಹುಡುಕಿದ್ರೂ ಸಿಗ್ತಿಲ್ಲ ನಟ ಪ್ರಭಾಸ್​ ಇನ್​ಸ್ಟಾಗ್ರಾಂ ಖಾತೆ!; ಇದು ಹ್ಯಾಕರ್​ಗಳ ಕೈಚಳಕವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
