ಬೆಂಗಳೂರು:ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಜಗತ್ತಿನಾದ್ಯಂತ ಮಹಿಳೆಯರು ಸಂಭ್ರಮಿಸುತ್ತಿದ್ದು, ಪುರುಷರು ಕೂಡ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಇನ್ನೊಂದಷ್ಟು ಪುರುಷರು ಇಂದು ಇನ್ನೊಂದು ದಿನವನ್ನು ಆಚರಣೆ ಮಾಡುತ್ತಿದ್ದಾರೆ.
ಹೌದು.. ನೊಂದ ಪುರುಷರು ಒಂದಷ್ಟು ಮಂದಿ ಸೇರಿಕೊಂಡು ಇಂದು ಅಂತಾರಾಷ್ಟ್ರೀಯ ಸುಳ್ಳು ಮೊಕದ್ದಮೆ ದಿನ (ಇಂಟರ್​ನ್ಯಾಷನಲ್​ ಫಾಲ್ಸ್​ ಕೇಸ್​ ಡೇ) ಆಚರಣೆ ಮಾಡುತ್ತಿದ್ದಾರೆ. ಮದುವೆ ಬಳಿಕ ವರದಕ್ಷಿಣೆ ಕಿರುಕುಳ ಸೇರಿ ಹಲವು ಆರೋಪಗಳೊಂದಿಗೆ ಸುಳ್ಳು ಕೇಸ್​ಗಳನ್ನು ಎದುರಿಸಿ ನೊಂದು ಬೇಸತ್ತ ಕೆಲವು ಪುರುಷರು ಈ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್​ ಸಂಘಟನೆ ಮೂಲಕ ಇಂಥದ್ದೊಂದು ದಿನ ಆಚರಣೆ ಆಗುತ್ತಿದೆ.
ಇದನ್ನೂ ಓದಿ:ನಾರಿ ಶಕ್ತಿ ಜೀವನ್ಮುಖಿ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
#FalseCaseDay #FakeFeminism ಮುಂತಾದ ಹ್ಯಾಷ್​ಟ್ಯಾಗ್​ಗಳೊಂದಿಗೆ ಟ್ವಿಟರ್​ನಲ್ಲಿ ಬಹಳಷ್ಟು ಮಂದಿ ಈ ದಿನವನ್ನು ಆಚರಿಸುತ್ತ ಸುಳ್ಳು ಆರೋಪಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಮಹಿಳೆಯರ ದಿನದ ಸಂದರ್ಭದಲ್ಲಿ ಇಂಥದ್ದೊಂದು ದಿನ ಆಚರಣೆ ಆಗುತ್ತಿದ್ದು, ನಿಜವಾದ ಮಹಿಳೆ ಸುಳ್ಳು ಕೇಸು ದಾಖಲಿಸುವುದಿಲ್ಲ ಎನ್ನುವ ಮೂಲಕ ನೊಂದ ಪುರುಷರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ #MarriageStrike ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಇದೇ ಥರದ ದಿನವೊಂದು ಆಚರಣೆ ಆಗಿತ್ತು.

ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eighteen =
Remember me
