ನವದೆಹಲಿ:ಡಿಸೆಂಬರ್ 1ರಿಂದ ದೇಶಾದ್ಯಂತ ಹಲವು ಹೊಸ ನಿಯಮ ಜಾರಿಗೆ ಬರುತ್ತಿದ್ದು, ಕೋಟ್ಯಂತರ ಗ್ರಾಹಕರ ಮೇಲೆ ಇದರ ಪರಿಣಾಮ ಉಂಟಾಗಲಿದೆ. ಕ್ರೆಡಿಟ್ ಕಾರ್ಡ್​ನಿಂದ ಹಿಡಿದು ಗ್ಯಾಸ್ ಸಿಲಿಂಡರ್, ಪಿಎಫ್ ಖಾತೆ ವರೆಗೆ ಹಲವು ಬದಲಾವಣೆಗಳು ಆಗಲಿವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ಶುಲ್ಕ:ಎಸ್​ಬಿಐ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಗ್ರಾಹಕರು ಮುಂದಿನ ತಿಂಗಳಿಂದ ತುಸು ಹೆಚ್ಚಿನ ಮೊತ್ತ ತೆರಬೇಕಾಗುತ್ತದೆ. ಎಸ್​ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐನಲ್ಲಿ ವಸ್ತುಗಳನ್ನು ಖರೀದಿ ಮಾಡುವುದು ಡಿ.1ರ ಬಳಿಕ ದುಬಾರಿ ಆಗಲಿದೆ. ಪ್ರಸ್ತುತ ಇರುವ ಬಡ್ಡಿಯ ಜತೆಗೆ ಸಂಸ್ಕರಣಾ ಶುಲ್ಕವನ್ನೂ ನೀಡಬೇಕಾಗುತ್ತದೆ. ಇಎಂಐ ಯೋಜನೆ ಅಡಿ ಮಾಡುವ ಪ್ರತಿ ಖರೀದಿಗೆ 99 ರೂ. ಶುಲ್ಕವನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಪಿಎಫ್​ಗೆ ಆಧಾರ್ ಜೋಡಣೆ:ಈ ಮಾಸಾಂತ್ಯದ ಒಳಗೆ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಅವರ ಪಿಎಫ್ ಮೊತ್ತ ಖಾತೆಗೆ ಜಮಾ ಆಗುವುದಿಲ್ಲ. ಈ ಹೊಸ ನಿಯಮ ಡಿ. 1ರಿಂದಲೇ ಜಾರಿಗೆ ಬರಲಿದೆ. ಯುಎಎನ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡದ ಸದಸ್ಯರು ಮುಂದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಉಳಿತಾಯ ಖಾತೆ ಬಡ್ಡಿ ಇಳಿಕೆ:ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಹಣ ಠೇವಣಿ ಇಟ್ಟವರಿಗೆ ಮುಂದಿನ ತಿಂಗಳಿಂದ ಬಡ್ಡಿ ಮೊತ್ತ ಇಳಿಕೆಯಾಗಲಿದೆ. ಉಳಿತಾಯ ಖಾತೆಯ ಬಡ್ಡಿಮೊತ್ತ ಪ್ರಸ್ತುತ ಇರುವ ಶೇ. 2.90ನ್ನು ಶೇ. 2.80ಕ್ಕೆ ಇಳಿಕೆ ಮಾಡಲಾಗುತ್ತದೆ.
ಬೆಂಕಿ ಪೊಟ್ಟಣ ಬೆಲೆ ಏರಿಕೆ:ಬೆಂಕಿ ಪೊಟ್ಟಣಗಳ ಬೆಲೆ 14 ವರ್ಷದಲ್ಲಿ ಇದೇ ಮೊದಲ ಬಾರಿಗೆ ಏರಿಕೆಯಾಗುತ್ತಿದೆ. ಈವರೆಗೆ ಪ್ರತಿ ಪೊಟ್ಟಣಕ್ಕೆ ಇದ್ದ 1 ರೂ. ಮುಂದಿನ ತಿಂಗಳ ಆರಂಭದಿಂದ 2 ರೂ. ಆಗಲಿದೆ. 2007ರಲ್ಲಿ 50 ಪೈಸೆ ಇದ್ದ ಬೆಲೆಯನ್ನು 1 ರೂ.ಗೆ ಏರಿಕೆ ಮಾಡ ಲಾಗಿತ್ತು. ಕಚ್ಚಾವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ಕಾರಣ ಉತ್ಪನ್ನದ ದರ ಏರಿಕೆ ಮಾಡುವುದಾಗ ಇತ್ತೀಚೆಗೆ ಕಂಪನಿಗಳು ಘೋಷಣೆ ಮಾಡಿದ್ದವು.
ಗೃಹ ಸಾಲಕ್ಕೆ ಶುಲ್ಕ:ಡಿ.1ರಿಂದ ಹೊಸದಾಗಿ ಗೃಹ ಸಾಲ ಪಡೆಯುವ ಗ್ರಾಹಕರು ಹೆಚ್ಚಿನ ಮೊತ್ತ ಪಾವತಿ ಮಾಡಬೇಕಾಗುತ್ತದೆ. ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಬಹುತೇಕ ಬ್ಯಾಂಕ್​ಗಳು ಹಲವು ರಿಯಾಯಿತಿ, ಸಂಸ್ಕರಣಾ ಶುಲ್ಕದಲ್ಲಿ ವಿನಾಯಿತಿ ಘೋಷಣೆ ಮಾಡಿದ್ದವು. ಕೆಲವು ಬ್ಯಾಂಕ್​ಗಳು ಕಡಿಮೆ ಬಡ್ಡಿದರದಲ್ಲಿ ಸಾಲದ ಆಫರ್ ನೀಡಿದ್ದವು. ಇವು ಕೂಡ ನ.30ಕ್ಕೆ ಮುಕ್ತಾಯವಾಗಲಿದೆ.
ಇಳಿಯುತ್ತಾ ಅಡುಗೆ ಅನಿಲ ದರ?:ಸಾಮಾನ್ಯವಾಗಿ ತಿಂಗಳ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಏರಿಕೆ ಅಥವಾ ಇಳಿಕೆ ಮಾಡಲಾಗುತ್ತದೆ. ಈಗಾಗಲೇ ಅನಿಲ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇತ್ತೀ ಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿರುವ ಕೇಂದ್ರ ಸರ್ಕಾರ ಈಗ ಅಡುಗೆ ಅನಿಲ ಬೆಲೆ ಇಳಿಕೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಕಚೇರಿಯಲ್ಲೇ ಕಾಮದಾಟ, ಡಾ.ರತ್ನಾಕರ್ ಬಂಧನ; ಮಹಿಳೆಯರನ್ನು ಕರೆದುಕೊಂಡು ರಾಜ್ಯದ ಹಲವೆಡೆಗಷ್ಟೇ ಅಲ್ಲ, ಹೊರಜಿಲ್ಲೆಗೂ ಹೋಗಿದ್ದ..

ರಾಜ್ಯದಲ್ಲಿ ಹೆಚ್ಚಾದ ಕರೊನಾ ಆತಂಕ; ಸಿಎಂ ಸಭೆಯಲ್ಲಿ ಹೊರಬಿತ್ತು ಹೊಸ ಗೈಡ್​​ಲೈನ್ಸ್​: ಇಲ್ಲಿದೆ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
