ಬೆಂಗಳೂರು:ಈ ಸಲದ ಏಕದಿನ ವಿಶ್ವಕಪ್​ ಹೊಸ ಇತಿಹಾಸ ಬರೆಯುವ ಸೂಚನೆಯನ್ನು ಮೊದಲ ವಾರದಲ್ಲೇ ರವಾನಿಸಿದೆ. ಟೂರ್ನಿ ಆರಂಭದ ಮೊದಲ 9 ಪಂದ್ಯಗಳಲ್ಲೇ ಹಲವು ದಾಖಲೆಗಳು ಧೂಳೀಪಟವಾಗಿವೆ. ರನ್​ಪ್ರವಾಹ ಹರಿಯುತ್ತಿದ್ದರೆ, ಶತಕಗಳ ಸುರಿಮಳೆಯೂ ಆಗುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿಶ್ವಕಪ್​ ಇನ್ನಷ್ಟು ಕುತೂಹಲ ಕೆರಳಿಸುವುದು ನಿಶ್ಚಿತವೆನಿಸಿದೆ.
13ನೇ ಆವೃತ್ತಿಯ ಏಕದಿನ ವಿಶ್ವಕಪ್​ ಟೂರ್ನಿಯ ಆರಂಭಿಕ 9 ಪಂದ್ಯಗಳಲ್ಲಿ ಒಟ್ಟು 11 ಶತಕಗಳು ದಾಖಲಾಗಿವೆ. ಈ ಪೈಕಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಬ್ಯಾಟರ್​ಗಳು ಶತಕ ಸಿಡಿಸಿದ್ದರು. ವಿಶ್ವಕಪ್​ನ ಇನಿಂಗ್ಸ್​ ಒಂದರಲ್ಲಿ ಮೂರು ಶತಕ ದಾಖಲಾಗಿದ್ದು ಇದೇ ಮೊದಲಾಗಿತ್ತು. ಇನ್ನು ಶ್ರೀಲಂಕಾ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಒಟ್ಟು 4 ಶತಕಗಳು ದಾಖಲಾದವು. ಇದೂ, ಏಕದಿನ ವಿಶ್ವಕಪ್​ ಪಂದ್ಯವೊಂದರಲ್ಲಿ 4 ಶತಕ ಸಿಡಿದ ಮೊದಲ ದೃಷ್ಟಾಂತವೆನಿಸಿದೆ.
ದಕ್ಷಿಣ ಆಫ್ರಿಕಾದ ಏಡನ್​ ಮಾರ್ಕ್ರಮ್​ 49 ಎಸೆತಗಳಲ್ಲೇ ಶತಕ ಸಿಡಿಸಿದ ವಿಶ್ವಕಪ್​ನ ಅತಿವೇಗದ ಶತಕ ಸಾಧಕ ಎನಿಸಿದ್ದರೆ, ರೋಹಿತ್​ ಶರ್ಮ 63 ಎಸೆತಗಳಲ್ಲೇ ಶತಕ ಬಾರಿಸಿ ವಿಶ್ವಕಪ್​ನಲ್ಲಿ ಭಾರತ ಪರ ಅತಿವೇಗದ ಶತಕ ಸಾಧಕ ಎನಿಸಿದರು. ಇನ್ನು ರೋಹಿತ್​ ಶರ್ಮ 7ನೇ ಶತಕದೊಂದಿಗೆ ಸಚಿನ್​ ತೆಂಡುಲ್ಕರ್​ರನ್ನು (6) ಹಿಂದಿಕ್ಕಿ ವಿಶ್ವಕಪ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್​ ಎನಿಸಿದರು.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 344 ರನ್​ ಮೊತ್ತವನ್ನು ಬೆನ್ನಟ್ಟುವ ಮೂಲಕ ಪಾಕಿಸ್ತಾನ ವಿಶ್ವಕಪ್​ ಇತಿಹಾಸದ ಸರ್ವಾಧಿಕ ಮೊತ್ತದ ಚೇಸಿಂಗ್​ ದಾಖಲೆ ಬರೆಯಿತು. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಣ ಆಫ್ರಿಕಾ 428 ರನ್​ ಪೇರಿಸುವ ಮೂಲಕ ವಿಶ್ವಕಪ್​ನಲ್ಲಿ ಬೃಹತ್​ ಮೊತ್ತದ ದಾಖಲೆ ಬರೆಯಿತು. ವಿಶ್ವಕಪ್​ನಲ್ಲಿ ಮೊದಲ ವಾರದಲ್ಲೇ ಇಷ್ಟೊಂದು ದಾಖಲೆಗಳು ಪತನಗೊಂಡಿದ್ದರೆ, ಇನ್ನುಳಿದ 36 ಪಂದ್ಯಗಳಲ್ಲಿ ಎಷ್ಟೊಂದು ದಾಖಲೆಗಳು ನಿರ್ಮಾಣವಾಗಬಹುದು ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳದ್ದಾಗಿದೆ.
ಏಷ್ಯನ್​ ಗೇಮ್ಸ್​ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ದೊರೆತ ಬಹುಮಾನವೆಷ್ಟು? ಇಲ್ಲಿದೆ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
