ಎಲ್​ಪಿಜಿ ದುಬಾರಿ?:ಪ್ರತಿ ಮಾಹೆಯಾನ ಅಡುಗೆ ಅನಿಲದ ಸಿಲಿಂಡರ್ ದರ ಪರಿಷ್ಕರಣೆ ಆಗಲಿದೆ. ಈ ಸಾರಿ ದರ ಹೆಚ್ಚು ಹೊರೆಯಾಗುವ ಸಂಭವ ಇದೆ. ದೆಹಲಿಯಲ್ಲಿ ಸದ್ಯ 809 ರೂ. ಇದ್ದು, 50ರಿಂದ 100 ರೂ. ಹೆಚ್ಚಳದ ಸಾಧ್ಯತೆ ಇದೆ.
ಬಡ್ಡಿ ದರ ಪರಿಷ್ಕರಣೆ:ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಎನ್​ಎಸ್​ಸಿ, ಸುಕನ್ಯಾ ಸಮೃದ್ಧಿ, ಆರ್​ಡಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಇನ್ನಿತರ ಸ್ಕೀಂಗಳ ಬಡ್ಡಿ ದರದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ. ಕಳೆದ ಏಪ್ರಿಲ್ 1ರಿಂದಲೇ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಿರುವುದನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಇದು ಕಣ್ತಪ್ಪಿನಿಂದ ಹೊರಡಿಸಿದ ಆದೇಶ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿ, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದರು. ಆದರೆ, ಐದು ರಾಜ್ಯಗಳ ಚುನಾವಣೆಯ ಕಾರಣ ಬಡ್ಡಿ ದರ ಪರಿಷ್ಕರಣೆಯನ್ನು ಸರ್ಕಾರ ತಡೆಹಿಡಿತ್ತು. ಈಗ ಅದನ್ನು ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ನಿಯಮದಲ್ಲಿ ಬದಲು:ಬ್ಯಾಂಕ್ ಆಫ್ ಬರೋಡಾ ಚೆಕ್ ಪಾವತಿ ನಿಯಮವನ್ನು ಮಾರ್ಪಡಿಸಿದ್ದು, 50 ಸಾವಿರ ರೂ. ಅಥವಾ ಅದಕ್ಕೂ ಅಧಿಕ ಮೊತ್ತ ಚೆಕ್ ನೀಡಿದ ಗ್ರಾಹಕರು ಅದನ್ನು ಮತ್ತೊಮ್ಮೆ ಖಾತ್ರಿ ಮಾಡಬೇಕಿದೆ. ನಂತರವಷ್ಟೇ ಆ ಚೆಕ್ ನಗದಾಗಲಿದೆ. ಚೆಕ್ ವಂಚನೆಯನ್ನು ತಡೆಯಲು ಈ ‘ಪಾಸಿಟಿವ್ ಪೇ ಕನ್​ಫಮೇಷನ್’ ಜಾರಿಗೆ ತರಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್​ಬಿಐ ಬ್ಯಾಂಕ್ ಎಟಿಎಂ ಮತ್ತು ಚೆಕ್ ಮೂಲಕ ಮಾಡುವ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ ಆಗಲಿದ್ದು, ನಿಗದಿತ ಮಿತಿ ವಹಿವಾಟಿನ ನಂತರ ನಡೆಸಿದ ವಹಿವಾಟಿಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ. ಚೆಕ್ ಬುಕ್ ಪಡೆಯುವಿಕೆಗೂ ಶುಲ್ಕದ ಹೊಸ ನಿಯಮ ಜಾರಿಯಾಗಲಿದೆ.
ಪಿಎಫ್ ಹೊಸ ನಿಯಮ:ಕಾರ್ವಿುಕರ ಭವಿಷ್ಯ ನಿಧಿಯ (ಇಪಿಎಫ್) ಚಂದಾದಾರರು ತಮ್ಮ ಖಾತೆಗೆ ಆಧಾರ್ ಸಂಖ್ಯೆಯ ಜೋಡಣೆ ಮಾಡುವುದು ಕಡ್ಡಾಯ. ಈ ಕಾರ್ಯವನ್ನು ಉದ್ಯೋಗದಾತ ಸಂಸ್ಥೆಗಳು ಮಾಡಬೇಕು ಎಂದು ಇಪಿಎಫ್​ಒ ಸೂಚಿಸಿದೆ.
ವಿಮಾನಯಾನ ದರ ತುಟ್ಟಿ:ದೇಶದೊಳಗಿನ ವಿಮಾನಯಾನ ದರ ಶೇ. 13ರಿಂದ 16 ಏರಿಕೆ ಆಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಈಗಾಗಲೇ ಘೋಷಿಸಿದೆ.
ಹಾಲ್​ವಾರ್ಕ್​ಗೆ ಅವಕಾಶ:ಚಿನ್ನಾಭರಣಗಳಿಗೆ ಜೂನ್ 1ರಿಂದ ಕಡ್ಡಾಯ ಮಾಡಲಾಗಿದ್ದ ಹಾಲ್​ವಾರ್ಕ್ ನಿಯಮವನ್ನು ಕೇಂದ್ರ ಸರ್ಕಾರ 15 ದಿನ ಮುಂದೂಡಿದೆ. ಎಲ್ಲ ಚಿನ್ನಾಭರಣ ಮಳಿಗೆಗಳೂ ಹಾಲ್ ಮಾರ್ಕ್ ಇರುವ ಆಭರಣಗಳನ್ನೇ ಮಾರಾಟ ಮಾಡಬೇಕು ಎಂಬ ನಿಯಮವನ್ನು ಸರ್ಕಾರ 2019ರಲ್ಲಿ ಘೋಷಣೆ ಮಾಡಿತ್ತು. ಕೋವಿಡ್ ಕಾರಣ ಇದು 2021ರ ಜನವರಿಯಿಂದ ಜಾರಿ ಬರಲಿದೆ ಎಂದು ತಿಳಿಸಿತ್ತು. ಆಭರಣ ತಯಾರಕರು ಮತ್ತು ಮಾರಾಟಗಾರರ ಮನವಿ ಮೇರೆಗೆ ಇದನ್ನು ಜೂನ್ 1ಕ್ಕೆ ಮುಂದೂಡಿತ್ತು. ಈಗ ಅನೇಕ ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿರುವ ಕಾರಣ ಗಡುವನ್ನು ಮತ್ತೆ 15 ದಿನ ಮುಂದೂಡಿದೆ.
ಐಟಿಆರ್ ಹೊಸ ನಿಯಮ:ಆದಾಯ ತೆರಿಗೆ ವಿವರ ಸಲ್ಲಿಕೆಯ (ಐಟಿಆರ್) ವೆಬ್​ಸೈಟ್http://www.incometaxindiaefilling.gov.inಜೂನ್ 1ರಿಂದ 6ವರೆಗೆ ಸ್ಥಗಿತವಾಗಿರಲಿದೆ. 7ನೇ ತಾರೀಖು ಹೊಸ ವೆಬ್​ಸೈಟ್http://www.incometaxgov.inಚಾಲನೆ ಆಗಲಿದೆ.
ಕರೊನಾ ಸೋಂಕಿತನ ಶವ ಊರಿಗೆ ತರದಂತೆ ವಿರೋಧ; ಸ್ವತಃ ಆಂಬುಲೆನ್ಸ್ ಚಲಾಯಿಸಿಕೊಂಡು ಸ್ಮಶಾನಕ್ಕೆ ಕೊಂಡೊಯ್ದ ಶಾಸಕ
ಪತಿಯನ್ನು ಹೋಮಕುಂಡದಲ್ಲಿ ಹಾಕಿ ಕೊಲೆ ಮಾಡಿದ್ದ ಪತ್ನಿ; ಬೆಚ್ಚಿಬೀಳಿಸಿದ್ದ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
