ನವದೆಹಲಿ :ಇಡೀ ದೇಶದಲ್ಲಿ ಮೇ 1 ರಿಂದ ಎಲ್ಲಾ ವಯಸ್ಕರಿಗೂ ಕರೊನಾ ಲಸಿಕೆ ನೀಡುವ ಮೂರನೇ ಹಂತದ ಲಸಿಕಾ ಅಭಿಯಾನ ಬೃಹತ್ ಪ್ರಮಾಣದಲ್ಲಿ ಆರಂಭವಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ನಿನ್ನೆ ಕೋವಿನ್​ ಪೋರ್ಟಲ್​ನಲ್ಲಿ ನೋಂದಾವಣಿ ಆರಂಭವಾದ ಸಮಯದಲ್ಲಿ ಹಲವು ರಾಜ್ಯಗಳು ಈ ಯೋಜನೆಯನ್ನು ಮುಂದಕ್ಕೆ ಹಾಕುವ ಸೂಚನೆಗಳನ್ನು ನೀಡಿವೆ.
ರಾಜ್ಯಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿದ್ದರೆ, ಜನರು ಕೋವಿನ್ ಪೋರ್ಟಲ್​ನಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೆಲವರು ನೋಂದಣಿಗೇ ಕಷ್ಟ ಪಡುತ್ತಿದ್ದರೆ, ಮತ್ತೆ ಕೆಲವರು ನೋಂದಾಯಿಸಿಕೊಂಡಿದ್ದರೂ, ಲಸಿಕೆ ನೀಡುವ ದಿನಾಂಕ ನಿಗದಿಯಾಗಿಲ್ಲ ಎನ್ನಲಾಗಿದೆ. ದೆಹಲಿ, ಗೋವಾ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ನೋಂದಣಿ ಸಮಸ್ಯೆಗಳು ವರದಿಯಾಗಿವೆ.
ಇದನ್ನೂ ಓದಿ:ರಾಜ್ಯ ಸರ್ಕಾರಗಳಿಗೆ ಅಗ್ಗವಾದ ಕೋವಾಕ್ಸಿನ್
ಮಹಾರಾಷ್ಟ್ರದಲ್ಲಿ ಲಸಿಕಾ ಕಾರ್ಯಕ್ರಮವು ಸದ್ಯಕ್ಕೆ ಆರಂಭವಾಗುವ ಸೂಚನೆಗಳಿಲ್ಲ. ಏಕೆಂದರೆ “ಲಸಿಕೆಗಳನ್ನು ಖರೀದಿಸಲು ಯೋಜನೆ ಮಾಡಿದ ನಂತರ ವಾಕ್ಸಿನೇಷನ್ ಷೆಡ್ಯೂಲ್​ಅನ್ನು ಘೋಷಿಸಲಾಗುವುದು” ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಲಸಿಕೆಗಳ ಕೊರತೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಮೇ 1 ರಂದು ಮೂರನೇ ಹಂತವು ಸಾಂಕೇತಿಕವಾಗಿ ಆರಂಭವಾಗಬಹುದು ಎನ್ನಲಾಗಿದೆ.
ಆದರೆ ಮಧ್ಯಪ್ರದೇಶದಲ್ಲಿ ಮೇ 1 ರಿಂದ 18-45 ವರ್ಷದವರೆಗಿನ ಜನರಿಗೆ ಲಸಿಕೆ ಕಾರ್ಯಕ್ರಮ ಆರಂಭಿಸುವುದಕ್ಕಾಗಿ 45 ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಎರಡು ದಿನಗಳ ಮಟ್ಟಿಗೆ ನಿಲ್ಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಸರ್ಕಾರ 1.3 ಕೋಟಿ ಲಸಿಕೆಗಳ ಖರೀದಿಯನ್ನು ಅನುಮೋದಿಸಿದೆ ಎಂದಿದ್ದಾರೆ. ಆದರೆ ಅಧಿಕೃತ ಮೂಲಗಳ ಪ್ರಕಾರ ಲಸಿಕೆಗಳು ಇನ್ನೂ ಆಗಮಿಸಬೇಕಿದ್ದು, ಮೇ 1 ರಂದು ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನೇಷನ್ ಆರಂಭವಾಗದಿರಬಹುದು ಎನ್ನಲಾಗಿದೆ.
ಇದನ್ನೂ ಓದಿ:ಕೋವಿಶೀಲ್ಡ್​ ಬೆಲೆ ಕಡಿತ : ಒಂದು ಡೋಸ್​ಗೆ 300 ರೂ.
ಬಿಹಾರ, ಒಡಿಶಾ, ಅಸ್ಸಾಂ, ಜಾರ್ಖಂಡ್, ಛತ್ತಿಸಗಢ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ರಾಜಸ್ಥಾನ, ಹಿಮಾಚಲ ಪ್ರದೇಶ ಸರ್ಕಾರಗಳು ಆರ್ಡರ್​ ನೀಡಿದ್ದರೂ ಮೇ 1 ರೊಳಗೆ ಲಸಿಕೆಗಳು ತಲುಪುತ್ತವೆಯೇ ಎಂಬ ಸಂದೇಹವಿದೆ ಎನ್ನಲಾಗಿದೆ. ಗುಜರಾತ್​​ನಲ್ಲಿ ಲಸಿಕೆ ಬರುವ ದಿನ ನಿಗದಿಯಾದ ಮೇಲೆ ಸರ್ಕಾರ ತನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಬಂಗಾಳದಲ್ಲಿ, ಫಲಾನುಭವಿಗಳು ನೋಂದಾಯಿಸಿಕೊಳ್ಳಬಹುದು. ಆದರೆ, ಯಾವುದೇ ನೇಮಕಾತಿ ದಿನಾಂಕಗಳನ್ನು ಒದಗಿಸಲಾಗಿಲ್ಲ ಎನ್ನಲಾಗಿದೆ.
ಈ ನಡುವೆ, ಪಂಜಾಬ್​​ನ ಕಾಂಗ್ರೆಸ್ ಸರ್ಕಾರ ಕೂಡ ಸ್ಟಾಕ್ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಹೊಸ ಲಸಿಕೆ ಕಾರ್ಯಕ್ರಮ ಸಾಧ್ಯವಾಗುವುದಿಲ್ಲ ಎಂದು ನಿನ್ನೆ ಹೇಳಿದೆ. ಲಸಿಕೆಗಾಗಿ ಪಂಜಾಬ್ ಸೀರಮ್ ಇನ್ಸ್​ಟಿಟ್ಯೂಟ್​ಗೆ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ ಎಂದು ಕಾಂಗ್ರೆಸ್ ಪಕ್ಷ ದೂರಿದೆ.(ಏಜೆನ್ಸೀಸ್)
ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !

ಪರಪ್ಪನ ಅಗ್ರಹಾರದಲ್ಲಿ ಕರೊನಾ ಆರ್ಭಟ: 240 ಕೈದಿಗಳಿಗೆ ಪಾಸಿಟೀವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
