ಕೊಚ್ಚಿ:ಸುಮಾರು 350 ಫ್ಲ್ಯಾಟ್​ಗಳು ಹಾಗೂ 240 ಕುಟುಂಬಗಳು ವಾಸವಿದ್ದ ಕೊಚ್ಚಿಯ ಎಚ್​2ಒ ಹೋಲಿ ಫೈತ್​​ ಅಪಾರ್ಟ್​ಮೆಂಟ್ ಟವರ್​ ಅನ್ನು ಕೇರಳ ಸರ್ಕಾರ ಶನಿವಾರ ಬೆಳಗ್ಗೆ ಧರೆಗುರುಳಿಸಿದೆ.​
ಕರಾವಳಿ ನಿಯಂತ್ರಣಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿ ಕೊಚ್ಚಿಯ ತೀರ ಪ್ರದೇಶದ ಬಳಿಯಿದ್ದ 4 ಲಕ್ಸುರಿ​ ವಸತಿ ಕಟ್ಟಡವನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್​ ನಾಲ್ಕು ತಿಂಗಳ ಹಿಂದೆಯೇ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಟ್ಟಡ ಉರುಳಿಸುವ ಕೆಲಸವನ್ನು ಕೈಗೆತ್ತಿಕೊಂಡ ಕೇರಳ ಸರ್ಕಾರ, ನಿಯಂತ್ರಿತ ಒಳಸ್ಫೋಟಕಗಳನ್ನು ಬಳಸಿಕೊಂಡು ಬಹು ಎತ್ತರದ ಅಪಾರ್ಟ್​ಮೆಂಟ್​ ಅನ್ನು ನೆಲಸಮ ಮಾಡಿತು. ವಸತಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಕಟ್ಟಡ ನೆಲಸಮ ಕಾರ್ಯಾಚರಣೆ ಇದಾಗಿದೆ.
ಇದಕ್ಕಾಗಿ ಮೊದಲೇ ಸಾಕಷ್ಟು ಪೂರ್ವ ತಯಾರಿಯನ್ನು ಕೇರಳ ಸರ್ಕಾರ ಮಾಡಿಕೊಂಡಿತ್ತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಪ್ರಕ್ರಿಯೆಯಲ್ಲಿ ಕೆಲವೇ ಸೆಕೆಂಡ್​ಗಳಲ್ಲಿ ಮೊದಲನೇ ಕಟ್ಟಡವನ್ನು ನೆಲಕ್ಕುರುಳಿಸಿತು. ಅದಾದ 5 ನಿಮಿಷದ ಅಂತರದಲ್ಲಿ ಎರಡನೇ ಕಟ್ಟಡವನ್ನು ಧ್ವಂಸ ಮಾಡಲಾಯಿತು. ಉಳಿದಂತೆ ಇನ್ನೆರಡು ಕಟ್ಟಡಗಳನ್ನು ಸರ್ಕಾರ ನಾಳೆ ತೆರವುಗೊಳಿಸಲಿದೆ.
ಕಟ್ಟಡ ಉರುಳಿಸಲು ಸುಮಾರು 800 ಕೆ.ಜಿ ಸ್ಫೋಟಕಗಳನ್ನು ಕಟ್ಟಡದಲ್ಲಿ ಇಡಲಾಗಿತ್ತು. ಅವಶೇಷಗಳು ಕಟ್ಟಡದ ಆವರಣದ ಒಳಗೆ ಬೀಳುವಂತೆ ಅತ್ಯಂತ ನಿಯಂತ್ರಿತವಾಗಿ ಸ್ಫೋಟಿಸಲಾಯಿತು. ಇನ್ನು ಸ್ಫೋಟದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ಸಂಜೆ 4 ಗಂಟೆವರೆಗೆ ನಿಷೇಧಿಸಲಾಗಿದೆ. ಕಟ್ಟಡ ಅವಶೇಷಗಳನ್ನು ಸಾಗಿಸಲು ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ಸುತ್ತಮುತ್ತ ಇದ್ದ ಇನ್ನಿತರ ವಸತಿ ನಿವಾಸಿಗಳನ್ನು ಮನೆ ಬಿಡುವ ಮುನ್ನ ವಿದ್ಯುತ್​ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿತ್ತು. ಅಲ್ಲದೆ, ಧೂಳು ತುಂಬದಿರಲೆಂದು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಲು ಹೇಳಲಾಗಿತ್ತು. ಸಮೀಪದ ನಿವಾಸಿಗಳಿಗೆ ಸದ್ಯ ತಾತ್ಕಾಲಿಕ ಶಿಬಿರನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕಟ್ಟಡ ತೆರವಿಗೆ ಸುಪ್ರೀಂಕೊರ್ಟ್​ ಆದೇಶ ನೀಡಿತ್ತು. ಕರಾವಳಿ ನಿಯಂತ್ರಣಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಮಾರಾಡುವಿನಲ್ಲಿರುವ ಕಟ್ಟಡಗಳನ್ನು ನೆಲಕ್ಕುರುಳಿಸಲು ಕೇರಳ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕಾಗಿ ನ್ಯಾಯಾಲಯ 138 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಇದಲ್ಲದೆ, ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್​ ಆದೇಶಿಸಿತ್ತು.(ಏಜೆನ್ಸೀಸ್​)
#WATCHMaradu flats demolition: H2O Holy Faith apartment tower demolished through controlled implosion#Keralapic.twitter.com/fKbciLGH14— ANI (@ANI)January 11, 2020
#WATCHMaradu flats demolition: H2O Holy Faith apartment tower demolished through controlled implosion#Keralapic.twitter.com/fKbciLGH14
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − ten =
Remember me
