ಮುಂಬೈ:ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ ಟೀಮ್​ ಇಂಡಿಯಾ ಬಾರ್ಬಡೋಸ್​ನಿಂದ ಐದು ದಿನಗಳ ಬಳಿಕ ತಾಯ್ನಾಡಿಗೆ ಮರಳಿದ್ದು, ಇಂದು (ಜುಲೈ 04) ಬೆಳಗ್ಗೆ ಭಾರತಕ್ಕೆ ಬಂದಿಳಿದ ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಇದೀಗ ಮುಂಬೈಗೆ ಬಂದು ಇಳಿದಿದ್ದು, ಬಿಸಿಸಿಐ ವಿಜಯೋತ್ಸವ ಮೆರವಣಿಗೆ ಹಮ್ಮಿಕೊಂಡಿದೆ.
ವಿಶ್ವಕಪ್​ ವಿಜೇತರಿಗೆ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ನೋಡಲು ಮುಂಬೈನ ಏರ್​ಪೋರ್ಟ್​ನಿಂದ ವಾಂಖೆಡೆ ಸ್ಟೇಡಿಯಂವರೆಗೆ ರಸ್ತೆಯ ಎರಡೂ ಬದಿಯಲ್ಲಿ ಜಮಾಯಿಸಿದ್ದು, ರಸ್ತೆಯಲ್ಲಾ ನೀಲಿಮಯವಾಗಿತ್ತು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.
17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ಅನ್ನು ಮುಡಿಗೇರಿಸಿಕೊಂಡ ರೋಹಿತ್​ ಪಡೆಯು ಇಂದು ಬೆಳಗ್ಗೆ ದೆಹಲಿಯಲ್ಲಿ ಬಂದಿಳಿದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿದ ಹೊರಟು ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈಗೆ ಅಗಮಿಸಿದೆ. ಟೀಮ್​ ಇಂಡಿಯಾ ಆಟಗಾರರಿಗೆ ಭರ್ಜರಿ ಸ್ವಾಗತ ದೊರೆತಿದ್ದು, ವಾಟರ್​ ಸೆಲ್ಯೂಟ್​ ಮೂಲಕ ಸ್ವಾಗತಿಸಿದ್ದು ಸಖತ್​ ವೈರಲ್​ ಆಗುತ್ತಿದೆ.
#WATCH| Team India greets fans as it conducts their victory parade in Mumbai.#T20WorldCup2024pic.twitter.com/zG4rWVdJHS
ಇದನ್ನೂ ಓದಿ:ಯಾರಾದರೂ ಹಾರ್ದಿಕ್​ ಬಗ್ಗೆ ಮಾತನಾಡಿದರೆ…; ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ
ಟೀಮ್​ ಇಂಡಿಯಾ ಆಟಗಾರರು ಆಗಮಿಸಿದ ವಿಮಾನಕ್ಕೆUK 1845 ಎಂದು ಹೆಸರಿಡಲಾಗಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಜರ್ಸಿ ಸಂಖ್ಯೆಗಳು ಕ್ರಮವಾಗಿ 18 ಮತ್ತು 45 ಆಗಿವೆ. ಏಕೆಂದರೆ ರೋಹಿತ್ ಮತ್ತು ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಹೀಗಾಗಿ, ಅವರಿಗೆ ಗೌರವ ನೀಡುವ ಸಲುವಾಗಿ ಈ ಜೆರ್ಸಿ ಸಂಖ್ಯೆಗಳನ್ನು ವಿಮಾನಕ್ಕೆ ಇಡಲಾಗಿದೆ.
ವಿಮಾನ ನಿಲ್ದಾಣದಿಂದ ಓಪನ್​ ಬಸ್​ನಲ್ಲಿ ವಿಜಯೋತ್ಸವ ಯಾತ್ರೆ ಆರಂಭಿಸಿದ ಆಟಗಾರರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟರು. ಸಂಭ್ರಮಾಚರಣೆ ವೇಳೆ ನೆರದಿದ್ದ ಜನಸ್ತೋಮವು ಅಂಬುಲೆನ್ಸ್​ಗಾಗಿ ದಾರಿ ಮಾಡಿಕೊಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅಭಿಮಾನಿಗಳು ಈ ಗೆಸ್ಚರ್​ ಎಲ್ಲರ ಮನ ಗೆಲ್ಲುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ತಂಡವು ತೆರೆದ ಬಸ್​​ನಲ್ಲಿ ವಾಂಖೆಡೆ ಕ್ರೀಡಾಂಗಣವನ್ನು ತಲುಪಿತು. ಈ ವೇಳೆ ಅಭಿಮಾನಿಯೋರ್ವ ಆಟಗಾರರನ್ನು ನೋಡಲು ಮರವೇರಿದ್ದು, ಬಸ್​ ಹತ್ತಿರ ಬಂದಾಗ ಫೋಟೋ ತೆಗೆದಿದ್ದಾನೆ. ಕೂಡಲೇ ಇದನ್ನು ನೋಡಿದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ನಂತರ ಮೈದಾನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬಿಸಿಸಿಐ 125 ಕೋಟಿ ಬಹುಮಾನದ ಮೊತ್ತದ ಚೆಕ್ ವಿತರಿಸಿತು. ಒಟ್ಟಿನಲ್ಲಿ ಟೀಮ್​ ಇಂಡಿಯಾ ವಿಜಯೋತ್ಸವವನ್ನು ಅಭಿಮಾನಿಗಳು ಸ್ಮರಣೀಯವಾಗಿಸಿದ್ದಾರೆ.
जनसैलाब ने एम्बुलेंस को रास्ता दिया…https://t.co/FLCxVSEvdApic.twitter.com/6myLXeefwk
Madness in Mumbai❌ Fan came so close to players in Victory Parade vehicle by climbing the tree 🌳🚨 Security Failure to be honestpic.twitter.com/AGfmQOpMyh
VIDEO | Fans climb trees to catch a glimpse of Team India during its victory parade at Marine Drive in Mumbai.pic.twitter.com/23nKaYky39
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 17 =
Remember me
