ನವದೆಹಲಿ:ನಿನ್ನೆ ರಾತ್ರಿ ದಿಢೀರನೇ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸರ್ವರ್​ ಡೌನ್​ ಆದ ಪರಿಣಾಮ ಬಳಕೆದಾರರು ಸಾಕಷ್ಟು ಅಡಚಣೆ ಎದುರಿಸಬೇಕಾಯಿತು. ಆಟೋಮ್ಯಾಟಿಕ್​ ಲಾಗೌಟ್​ ಆದ್ದರಿಂದ ತಮ್ಮ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಿಗೆ ಏನಾಯ್ತಪ್ಪ ಎಂದು ಅನೇಕರು ಚಿಂತಾಕ್ರಾಂತರಾದರು. ಎಕ್ಸ್​ನಲ್ಲೂ ಈ ವಿಚಾರ ಟ್ರೆಂಡ್​ ಆಯಿತು. ಸಾಕಷ್ಟು ಮಂದಿ ಫೇಸ್​ಬುಕ್​, ಇನ್​ಸ್ಟಾಗ್ರಾಂ ಒಡೆತನ ಹೊಂದಿರುವ ಮೆಟಾ ಕಂಪನಿ ಸಿಇಒ ಮಾರ್ಕ್​ ಜುಕರ್​ಬರ್ಗ್​ ಅವರನ್ನು ಶಪಿಸಿದರು. ಕೆಲ ಸಮಯದ ಬಳಿಕ ಸಮಸ್ಯೆ ಬಗೆಹರಿದು ಬಳಕೆದಾರರು ಎಂದಿನಂತೆ ತಮ್ಮ ಖಾತೆಗಳಲ್ಲಿ ಸಕ್ರಿಯರಾದರು.
ತಾಜಾ ಸಂಗತಿ ಏನೆಂದರೆ, ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಜಾಗತಿಕವಾಗಿ ಡೌನ್​ ಆದ ಬೆನ್ನಲ್ಲೇ ಮಾರ್ಕ್​ ಜುಕರ್​ಬರ್ಗ್ ಅವರ ಮೆಟಾ ಕಂಪನಿ ಬರೋಬ್ಬರಿ 3 ಬಿಲಿಯನ್​ ಡಾಲರ್​ ನಷ್ಟ ಅನುಭವಿಸಿದೆ.​ 3 ಬಿಲಿಯನ್​ ಅಂದರೆ 300 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಒಂದು ದಿನದಲ್ಲಿ 2.79 ಶತಕೋಟಿ ಡಾಲರ್​ ಕುಸಿತದೊಂದಿಗೆ 176 ಶತಕೋಟಿ ಡಾಲರ್​ಗೆ ಕುಸಿದಿದೆ. ಆದರೂ ಜುಕರ್​ಬರ್ಗ್​ ಅವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಸುದೀರ್ಘ ಒಂದು ಗಂಟೆಗಳ ಕಾಲ ಜಾಗತಿಕ ಸ್ಥಗಿತದ ಪರಿಣಾಮ ಮೆಟಾ ಕಂಪನಿಯ ಷೇರುಗಳು 1.6ರಷ್ಟು ಕುಸಿದಿದೆ. ಇದು ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯದಲ್ಲಿ ಕುಸಿತಕ್ಕೆ ಕಾರಣವಾಗಿದೆ. ನಿನ್ನೆ ಮೆಟಾ ಷೇರುಗಳು ವಾಲ್ ಸ್ಟ್ರೀಟ್‌ನಲ್ಲಿ ರಾತ್ರಿಯ ವಹಿವಾಟಿನ ಅವಧಿಯಲ್ಲಿ 490.22 ಡಾಲರ್​ಗೆ ಅಂತ್ಯಗೊಂಡಿತು.
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಥ್ರೆಡ್ಸ್​ ಬಳಕೆದಾರರು ಮಂಗಳವಾರ ರಾತ್ರಿ ಲಾಗಿನ್​ ಆಗಲು ಸಾಕಷ್ಟು ಪರದಾಡಿದರು. ಹೆಚ್ಚುವರಿಯಾಗಿ ಮೆಟಾ ಕ್ವೆಸ್ಟ್ ಬಳಕೆದಾರರು ಕೂಡ ತಮ್ಮ ಹೆಡ್‌ಸೆಟ್‌ಗಳಿಗೆ ಲಾಗಿನ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಅನೇಕ YouTube ಬಳಕೆದಾರರು ಸಹ ಪ್ಲಾಟ್‌ಫಾರ್ಮ್ ಬಳಸುವಾಗ ದೋಷವನ್ನು ಎದುರಿಸಿದ್ದನ್ನು ಗಮನಿಸಿದ್ದಾರೆ.
ನಿನ್ನೆ 9 ಗಂಟೆ ಸುಮಾರಿಗೆ ಶುರುವಾದ ಈ ಸಮಸ್ಯೆ ಒಂದು ಗಂಟೆಯವರೆಗೂ ಕಾಡಿತು. ಸ್ಥಗಿತದ ಸಮಯದಲ್ಲಿ ಬಳಕೆದಾರರು Instagram ಮತ್ತು Facebook ಎರಡರಲ್ಲೂ “ಫೇಲ್ಯೂರ್​ ಟು ಲೋಡ್” ಎಂಬ ಎರರ್​ ಪೇಜ್​ ಎದುರಿಸಿದ್ದಾಗಿ ಹಲವರು ವರದಿ ಮಾಡಿದ್ದಾರೆ. ಕೆಲವು Instagram ಬಳಕೆದಾರರು ದೋಷದ ಹೊರತಾಗಿಯೂ ಹಳೆಯ ಸ್ಟೋರಿಗಳನ್ನು ವೀಕ್ಷಿಸಬಹುದು ಎಂಬುದನ್ನು ಗಮನಿಸಿದರು. ಆದಾಗ್ಯೂ, ಸ್ಥಗಿತದ ಸಮಯದಲ್ಲಿ ಅನೇಕ ಫೇಸ್‌ಬುಕ್ ಖಾತೆಗಳು ಆಟೋಮ್ಯಾಟಿಕ್​ ಆಗಿ ಲಾಗ್ ಔಟ್ ಆಗಿವೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​ (ಈ ಹಿಂದೆ ಟ್ವಿಟರ್​)ನಲ್ಲಿ #Zuckerberg, #facebookDown, #InstagramDown ಎಂಬ ಹ್ಯಾಶ್​​ಟ್ಯಾಗ್ ಟ್ರೆಂಡ್​ ಆಯಿತು.(ಏಜೆನ್ಸೀಸ್​)
ಲೆಮನ್​ ಜ್ಯೂಸ್ ಕುಡಿಯುವಾಗ ಅಪ್ಪಿತಪ್ಪಿ ಈ ತಪ್ಪನ್ನು ಮಾಡ್ಬೇಡಿ​… ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್​!

ಖ್ಯಾತ ನಟಿಗೆ ದುಬೈನಲ್ಲಿ 50 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ರಾ ಉದಯನಿಧಿ?! ಸಂಚಲನ ಸೃಷ್ಟಿಸಿದ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
