ಹೈದರಾಬಾದ್​:ಇಲ್ಲೊಬ್ಬಳು ಯುವತಿಗೆ ಮದುವೆ ತನ್ನ ದೇಶದಲ್ಲೇ ಆಗಿದ್ದರೂ ವಿದೇಶದಲ್ಲಿ ರಿಸೆಪ್ಷನ್​ ಮಾಡಿಕೊಳ್ಳುವಂತಾಗಿದೆ. ಅಷ್ಟಕ್ಕೂ ಈಕೆಯ ಮದುವೆ ನಡೆದಿದ್ದು ಯೂಕ್ರೇನ್​ನಲ್ಲಿ, ಆದರೆ ರಿಸೆಪ್ಷನ್​ ನಡೆದಿದ್ದು ಭಾರತದ ಹೈದರಾಬಾದ್​ನಲ್ಲಿ. ಅದಕ್ಕೆ ಕಾರಣ ಯೂಕ್ರೇನ್​ನಲ್ಲಿನ ಯುದ್ಧ.
ಹೌದು.. ತನ್ನ ದೇಶದಲ್ಲಿನ ಯುದ್ಧಕ್ಕೆ ಹೆದರಿದ ಯುವತಿಯೊಬ್ಬಳು ಮದುವೆ ಆಗುತ್ತಿದ್ದಂತೆ ಯೂಕ್ರೇನ್​ನಿಂದ ಭಾರತಕ್ಕೆ ಬಂದು ಇಲ್ಲಿನ ಹೈದರಾಬಾದ್​ನಲ್ಲಿ ರಿಸೆಪ್ಷನ್​ನಲ್ಲಿ ಪಾಲ್ಗೊಂಡಿದ್ದಾಳೆ. ರಷ್ಯಾ ಯೂಕ್ರೇನ್​ ಮೇಲೆ ದಾಳಿ ಮಾಡಿದ ಹಿಂದಿನ ದಿನವಷ್ಟೇ ಇವರು ಅಲ್ಲಿ ಮದುವೆಯಾಗಿದ್ದರು.
ಇದನ್ನೂ ಓದಿ:ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ; ಇದು ಬಿಜೆಪಿಯ ಸಂಕಲ್ಪ ಎಂದ ಶಾಸಕ
ಲ್ಯೂಬೊವ್ ಎಂಬ ಈ ಯೂಕ್ರೇನ್​ ಯುವತಿ ಅಲ್ಲಿ ಪ್ರತೀಕ್ ಎಂಬಾತನನ್ನು ಕೆಲವು ತಿಂಗಳ ಹಿಂದೆ ಭೇಟಿಯಾದ ಬಳಿಕ ಇಬ್ಬರೂ ಮದುವೆಯಾಗಲು ನಿಶ್ಚಯಿಸುತ್ತಾರೆ. ಅದರಂತೆ ಫೆ. 23ರಂದು ಯೂಕ್ರೇನ್​ನಲ್ಲಿ ಮದುವೆಯಾದ ಈಕೆ ಯುದ್ಧದ ಹಿನ್ನೆಲೆಯಲ್ಲಿ ವರನ ಊರಾದ ಹೈದರಾಬಾದ್​ಗೆ ಆಗಮಿಸಿದ್ದು, ಇಲ್ಲಿ ವರನ ಸ್ನೇಹಿತರು, ಬಂಧು-ಬಳಗದ ಸಮ್ಮುಖದಲ್ಲಿ ರಿಸೆಪ್ಷನ್​ ಮಾಡಿಕೊಂಡಿದ್ದಾರೆ.
70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
