ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ, 74 ವರ್ಷದ ಬಿಲ್​ ಕ್ಲಿಂಟನ್​ ಇದೀಗ ಈ ವಯಸ್ಸಲ್ಲಿ ವಧುವಿನ ಕುರಿತು ಮಾತನಾಡಿದ್ದಾರೆ. ಮಾತ್ರವಲ್ಲ, ‘ವಧು ಇನ್ನೂ ಚೆನ್ನಾಗಿದ್ದಾಳೆ, ಐ ಲವ್​ ಯೂ’ ಎಂದು ಕೂಡ ಹೇಳಿದ್ದಾರೆ!
ಹಾಗಂತ ಬಿಲ್ ಕ್ಲಿಂಟನ್​ ಈಗ್ಯಾಕೆ ಹೀಗಂದ್ರು ಅಂತ ಯಾರೂ ಹುಬ್ಬೇರಿಸಬೇಕಿಲ್ಲ. ಏಕೆಂದರೆ ಅವರು ಹೀಗೆ ಹೇಳಿದ್ದು ಅವರ ಪತ್ನಿ ಹಿಲರಿ ಕ್ಲಿಂಟನ್​ ಕುರಿತು. ಇಂದು ಅವರು ಹೀಗೆ ಹೇಳಲು ಕಾರಣ ಅವರ ವಿವಾಹ ವಾರ್ಷಿಕೋತ್ಸವ. ಬಿಲ್ ಹಾಗೂ ಹಿಲರಿ ಮದುವೆಯಾಗಿ ಇದೀಗ ನಾಲ್ಕೂವರೆ ದಶಕಗಳನ್ನು ಪೂರೈಸಿದ್ದಾರೆ.
October 11th was a beautiful day 45 years ago. Still is. The bride was beautiful too. And still is. Happy Anniversary, Hillary. I love you.pic.twitter.com/VMfjEiABD1
— Bill Clinton (@BillClinton)October 11, 2020

ತಮ್ಮ ವೈವಾಹಿಕ ಜೀವನದ ಖುಷಿ, ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಬಿಲ್​ ಕ್ಲಿಂಟನ್​ ಈ ರೀತಿ ವ್ಯಕ್ತಪಡಿಸಿದ್ದಾರೆ. ‘ಅಕ್ಟೋಬರ್ 11, ನಲವತ್ತೈದು ವರ್ಷಗಳ ಹಿಂದಿನ ಒಂದು ಸುಂದರ ದಿನ, ಈಗ ಕೂಡ. ವಧು ಕೂಡ ಸುಂದರಿಯಾಗಿದ್ದಳು, ಈಗ ಸಹ. ಹ್ಯಾಪಿ ಆ್ಯನಿವರ್ಸರಿ ಹಿಲರಿ, ಐ ಲವ್​ ಯೂ’ ಎಂದು ಬಿಲ್​ ಕ್ಲಿಂಟನ್​ ಹೇಳಿಕೊಂಡಿದ್ದಾರೆ. ಪತಿಯ ಟ್ವೀಟ್​ಗೆ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿರುವ ಹಿಲರಿ ಕ್ಲಿಂಟನ್​, ‘ದ ಗ್ರೂಮ್​ ಸ್ಟಿಲ್​ ಕ್ಲೀನ್ಸ್ ಅಪ್​ ಪ್ರೆಟ್ಟಿ ವೆಲ್​, ಟೂ. ಲವ್ ಯೂ, ಬಿಲ್..’ ಎಂದಿದ್ದಾರೆ.
The groom still cleans up pretty well, too. Love you, Bill.https://t.co/2Yx657G9oN
— Hillary Clinton (@HillaryClinton)October 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
