ಉತ್ತರಪ್ರದೇಶ:ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಜೀವನ ಸಂಗಾತಿಯ ಬಗ್ಗೆ ಒಂದಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ಮದುವೆಯಾಗುವ ಗಂಡಿನಲ್ಲಿ ಒಂದಷ್ಟು ದೋಷಗಳಿದ್ದರೂ ಹೆಣ್ಣು ಕೆಲವೊಮ್ಮೆ ಹೊಂಣದಿಕೊಂಡು ಹೋಗಲು ತಯಾರಾಗಿ ಇರುತ್ತಾಳೆ. ಹೆಣ್ಣಿನಲ್ಲಿರುವ ದೋಷಗಳನ್ನೂ ಗಂಡು ಸಹಿಸಲು ಸಿದ್ಧನಾಗಿಯೇ ಇರುತ್ತಾನೆ.
ಆದರೆ ಜೀವನಸಂಗಾತಿಗೆ ಹತ್ತು ರೂ.ಯ ನೋಟುಗಳನ್ನೇ ಎಣಿಸಲು ಬಾರದೇ ಹೋದರೆ ಹೇಗೆ? ಇಂತಹ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು ವಿಷಯ ಗೊತ್ತಾಗುತ್ತಿದ್ದಂತೆಯೇ ವಧು ಮದುವೆಯಾಗಲು ನಿರಾಕರಿಸಿದ್ದಾರೆ.
ಉತ್ತರಪ್ರದೇಶದ ಫರೂಕಾಬಾದ್‌ನಲ್ಲಿ ಈ ಘಟನೆ ನಡೆದಿದ್ದು ರೀಟಾ ಸಿಂಗ್ ಎಂಬ ವಧು, ವರನನ್ನು 10 ರೂಪಾಯಿಯ ಕೆಲವು ನೋಟುಗಳನ್ನು ಎಣಿಸಲು ವಿಫಲ ಆಗಿದ್ದಕ್ಕೆ ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾಳೆ.
ಸಾಧಾರಣವಾಗಿ ಹೆಣ್ಣು ಹುಡುಕುವುದು ಅಥವಾ ಗಂಡು ಹುಡುಕುವುದು ಸಂಬಂಧಿಕರ ಮೂಲಕ ನಡೆಯುತ್ತದೆ. ಹೀಗೆ ಸಂಬಂಧಿಕರ ಮಾತನ್ನು ನಂಬಿದ್ದ ವಧುವಿನ ಕುಟುಂಬಿಕರು ಗಂಡನ್ನು ನೋಡಿರಲಿಲ್ಲ. ವಧು ಹಾಗೂ ವರರು ನೇರವಾಗಿ ಮದುವೆ ಮಂಟಪದಲ್ಲೇ ಭೇಟಿಯಾಗಿದ್ದಾರೆ.
‘ಮದುವೆ ನಡೆಸಲು ಬಂದ ಪುರೋಹಿತರು ವಧುವಿಗೆ ವರನ ವಿಚಿತ್ರ ವರ್ತನೆಯ ಬಗ್ಗೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ವಧುವಿನ ಮನೆಯವರು ಪರೀಕ್ಷಿಸಲು ಎಂದು ವರನಿಗೆ ಹತ್ತು ರೂಪಾಯಿಯ ಮೂರು ನೋಟುಗಳನ್ನು ನೀಡಿದ್ದಾರೆ. ಇದನ್ನು ಎಣಿಸಲು ವಿಫಲನಾದ ವರನನ್ನು ರೀಟಾ, ಮದುವೆಯಾಗಲು ನಿರಾಕರಿಸಿದ್ದಾರೆ’ ಎಂದು ವಧುವಿನ ಸಹೋದರ ಮೋಹಿತ್​ ಮಾಹಿತಿ ನೀಡಿದ್ದಾರೆ.
ಆದರೆ ಮದುವೆಯಾಗಲು ವಧು ನಿರಾಕರಿಸಿದ ಕಾರಣ ಎರಡೂ ಕುಟುಂಬಗಳ ನಡುವೆ ಭಾರೀ ಜಗಳವೂ ಉಂಟಾಗಿದೆ. ಕಡೆಗೆ ಪೊಲೀಸರೇ ಮದುವೆ ಮಂಟಪಕ್ಕೆ ಬಂದು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಕಡೆಗೆ ಇದರಿಂದಾಗಿ ಗಂಡಿನ ಕಡೆಯವರು ಮನೆಗೆ ತೆರಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
