ಲಖನೌ:ವರದಕ್ಷಿಣೆ ವಿಚಾರಕ್ಕೋ ಅಥವಾ ವಧು/ ವರರ ನಡವಳಿಕೆ ವಿಚಾರದಲ್ಲೋ ಇಲ್ಲ ಇನ್ಯಾವುದೋ ವಿಚಾರಗಳಿಗೆ ಮದುವೆ ಕ್ಯಾನ್ಸಲ್​ ಆಗುವುದನ್ನು ನೋಡಿರುತ್ತೀರಿ. ಆದರೆ ಮಗ್ಗಿ ಹೇಳೋದಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಮದುವೆ ಕ್ಯಾನ್ಸಲ್​ ಆಗುತ್ತದೆಯೆಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಇಂತದ್ದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದ ಯುವಕನಿಗೆ ಬೇರೊಂದು ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದು ಯುವತಿ ಮತ್ತು ಯುವನ ಕುಟುಂಬ ಮದುವೆ ಮಂಟಪಕ್ಕೆ ಬಂದು ತಲುಪಿದೆ. ಇನ್ನೇನು ಮದುವೆಯಾಗಿಬಿಡುತ್ತದೆ, ವರ ವಧುವಿನ ಕೊರಳಿಗೆ ಹಾರ ಹಾಕುತ್ತಾನೆ ಎನ್ನುಷ್ಟರಲ್ಲಿ ವಧು, ವರನಿಗೆ ಒಂದು ಸವಾಲು ಹಾಕಿದ್ದಾಳೆ. 2ರ ಮಗ್ಗಿ ಹೇಳಿ, ನನ್ನ ಕೊರಳಿಗೆ ಹಾರ ಹಾಕು ಎಂದಿದ್ದಾಳೆ.
ವರ 2ರ ಮಗ್ಗಿ ಹೇಳುವಲ್ಲಿ ವಿಫಲವಾಗಿದ್ದಾನೆ. ತಕ್ಷಣ ಅಲ್ಲಿಂದ ವಧು ಹೊರನಡೆದಿದ್ದಾಳೆ. ಯಾರು ಏನೇ ಹೇಳಿದರೂ ಕೇಳದೆ ಮದುವೆ ಮುರಿದುಕೊಂಡು ನಡೆದಿದ್ದಾಳೆ.
ಯುವತಿಯ ಬಳಿ ವರನ ಕುಟುಂಬ ಆತ ವಿದ್ಯಾವಂತನೆಂದು ಸುಳ್ಳು ಹೇಳಿತ್ತಂತೆ. ಈ ವಿಚಾರವಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಯುವತಿ ಈ ರೀತಿ ಮಾಡಿ ನಿಜಾಂಶವನ್ನು ಹೊರತೆಗೆದಿದ್ದಾಳೆ. ಈ ವಿಚಾರವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. (ಏಜೆನ್ಸೀಸ್)
ಎಲೆ ಮೇಲೆ ದೂಳು ಕೂತರೆ ಗಿಡಗಳ ಪ್ರಾಣವೇ ಹೋಗಬಹುದು! ಏಕಾಗಿ ಗೊತ್ತಾ?

ಮೇ 15ರವರೆಗೆ ಲಾಕ್​ಡೌನ್​ ಘೋಷಿಸಿದ ರಾಜ್ಯ ಸರ್ಕಾರ! ಅಲ್ಲಿಯವರೆಗೆ ಎಲ್ಲ ಬಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
