ಬೆಂಗಳೂರು:ಇದು ಅಕ್ಷರಶಃ ಆನ್‌ಲೈನ್‌ ದಿನಗಳು. ಶಾಲೆಯಲ್ಲಿ ಒಟ್ಟಿಗೆ ಸೇರಬಾರದು ಎಂದು ಶಾಲಾ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಕ್ಲಾಸ್‌ ಆಗುತ್ತಿದೆ, ದೂರ ದೂರದ ಊರುಗಳಿಗೆ ಹೋಗಲಾಗದೇ ಆನ್‌ಲೈನ್‌ನಲ್ಲಿಯೇ ಮಾತುಕತೆ ನಡೆಯುತ್ತಿದೆ… ಇವೆಲ್ಲವೂ ಈಗ ಹಳೆಯದಾಯಿತು.
ಹೊಸ ವಿಷಯ ಎಂದರೆ ಇಲ್ಲೊಂದು ಜೋಡಿ ಆನ್‌ಲೈನ್‌ನಲ್ಲಿಯೇ ಮದುವೆಯಾಗಿ ಈಗ ಇತಿಹಾಸ ಸೃಷ್ಟಿಮಾಡಿದ್ದಾರೆ. ಆನ್‌ಲೈನ್‌ನಲ್ಲಿಯೇ ಪ್ರೀತಿ ಮಾಡಿದವರ ಸುದ್ದಿ ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ. ಆದರೆ ಅಪರೂಪದಲ್ಲಿ ಅಪರೂಪ ಪ್ರಕರಣ ಎನ್ನುವಂತೆ ಈ ಜೋಡಿ ಆನ್‌ಲೈನ್‌ನಲ್ಲಿಯೇ ಮದುವೆಯಾಗಿದ್ದಾರೆ.
ಇಂಥದ್ದೊಂದು ಹೊಸ ಸಾಹಸಕ್ಕೆ ಕೈ ಹಾಕಿರುವ ಯುವಕ ಭಟ್ಕಳ ಮೂಲದ ಮೊಹಮ್ಮದ್ ಆದಿಲ್ ಕೌಡ. ಈತ ಭಟ್ಕಳದ ಮೊದಲ ಸಚಿವರಾಗಿದ್ದ ಜುಕಾಕೋ ಶಮ್ಸುದ್ದೀನ್ ಅವರ ಮರಿಮೊಮ್ಮೊಗ. ವಧು ಚೈನ್ನೈ ಮೂಲದ ಆಂಬೂರು ನಿವಾಸಿ ಆಫಿಯಾ ಮರಿಯಮ್ಮ. ಮೊಹಮ್ಮದ್‌ ಮಾಲ್ದೀವ್ಸ್‌ನಲ್ಲಿ ಪೈಲಟ್ ಆಗಿದ್ದು, ಮದುವೆಗಾಗಿ ಬೆಂಗಳೂರಿಗೆ ಬಂದಿದ್ದರು. ಲಾಕ್‍ಡೌನ್ ಘೋಷಣೆಯಾದ ಬಳಿಕ ಅವರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಇದನ್ನೂ ಓದಿ:ಇರಾನ್, ಅರಬ್‌ನಲ್ಲೂ ಮೋಡಿ ಮಾಡಿದೆ ಮೋದಿ- ಅಮ್ಮನ ಈ ವಿಡಿಯೋ
ಅವರ ನಿಶ್ಚಿತಾರ್ಥ ಆಫಿಯಾ ಅವರೊಂದಿಗೆ ನಡೆದಿತ್ತು. ಇದೀಗ ಎಲ್ಲಿಯಾದರೂ ಮದುವೆ ಮಾಡಿಕೊಂಡರೆ ಲಾಕ್‌ಡೌನ್‌ ನಿಯಮದಂತೆ ಹೆಚ್ಚುಜನ ಸೇರುವಂತಿಲ್ಲ, ಇದರಿಂದಾಗಿ ಅನೇಕ ಬಂಧು-ಬಳಗದವರಿಗೆ ಮದುವೆ ನೋಡಲು ಆಗುವುದಿಲ್ಲ. ಅಷ್ಟೇ ಅಲ್ಲದೇ ಸ್ವಲ್ಪ ಜನ ಸೇರಿದರೂ ಅಪಾಯಕಟ್ಟಿಟ್ಟದ್ದೇ ಎಂದು ಅರಿತ ಎರಡೂ ಕುಟುಂಬಸ್ಥರು ಆನ್‌ಲೈನ್‌ ಮೂಲಕ ವಿವಾಹ ಮಾಡುವುದಕ್ಕೆ ಏರ್ಪಾಡು ಮಾಡಿದ್ದರು.
ಸಿಸ್ಕೋ ಎಂಬ ಆ್ಯಪ್‌ ಮೂಲಕ ಇವರ ವಿವಾಹ ನೆರವೇರಿದೆ. ಇವರ ಕುಟುಂಬಸ್ಥರು ವಿವಿಧ ದೇಶಗಳಲ್ಲಿ ನೆಲೆಸಿದ್ದು, ಎಲ್ಲರೂ ಮದುವೆಗೆ ಆನ್‌ಲೈನ್‌ ಮೂಲಕ ಸಾಕ್ಷಿಯಾಗಿದ್ದಾರೆ. ವಿವಾಹಕ್ಕೆ ಖಾಜಿ ಸಾಹಿಬ್‌ರನ್ನು ತಮ್ಮ ಮನೆಗೆ ಆಹ್ವಾನಿಸಿರು ಆದಿಲ್ ಆನ್‍ಲೈನ್‍ನಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಿದ್ದರು.
ವಿವಾಹದ ನಂತರ ‌ಎಲ್ಲ ರೀತಿಯ ದಾಖಲೆಗಳನ್ನು ಪೂರ್ಣಗೊಳಿಸಲಾಗಿದೆ. ಇದರ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿದೆ. ಸಾಮಾನ್ಯ ವಿವಾಹವಾದರೆ ಏನೆಲ್ಲಾ ಪ್ರೊಸೀಜರ್‌ಗಳನ್ನು ಅನುಸರಿಸಬೇಕಿತ್ತೋ ಎಲ್ಲವನ್ನೂ ಮಾಡಿದ್ದೇವೆ. ಖಾಜಿ ಸಾಹಿಬ್ ಮತ್ತು ಅವರ ಮುಂದೆ ಸಹಿ ಹಾಕುವ ಮೂಲಕ ವಿವಾಹ ನೆರವೇರಿಸಲಾಗಿದೆ ಎಂದರು.
ಇಂಥ ಮದುವೆ ಇಂದಿನ ಅನಿವಾರ್ಯತೆಯಾಗಿದೆ. ಸುಮ್ಮನೆ ಮದುವೆ ಮುಂದೂಡುತ್ತಾ ಇರುವಲ್ಲಿ ಅರ್ಥವಿಲ್ಲ. ಕರೊನಾ ವೈರಸ್‌ ಮುಗಿಯುವುದೇ ಸಂದೇಹ ಇರುವಂಥ ಇಂಥ ಸ್ಥಿತಿಯಲ್ಲಿ ಅತ್ಯಂತ ಸರಳವಾಗಿ, ಎಲ್ಲ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗುವುದೇ ಲೇಸು ಎನ್ನುತ್ತಾರೆ ಮೊಹಮ್ಮದ್‌ ಆದಿಲ್‌.
₹100 ಲಂಚ ಕೊಡದ ಹುಡುಗನಿಗೆ ಸಿಕ್ಕಿತು ಮನೆ, ಉಚಿತ ಶಿಕ್ಷಣ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 16 =
Remember me
