ಚಂಡೀಗಢ:ಮದುವೆಯಾಗಿ ಗಂಡನ ಮನೆ ಸೇರಿದ್ದ ಮಗಳು ತವರಿಗೆ ಬಂದ ನಂತರ ಮಾಡಿದ ಕೆಲಸಕ್ಕೆ ಪೂರ್ತಿ ಕುಟುಂಬವೇ ಕಣ್ಣೀರು ಹಾಕುತ್ತಿರುವ ಘಟನೆ ಪಂಜಾಬ್​ನ ಮುಕ್ತಸರ್​ ಸಾಹಿಬ್​ನ ಕಿಲಿಯನ್ವಾಲಿ ಗ್ರಾಮದಲ್ಲಿ ನಡೆದಿದೆ.
19 ವರ್ಷದವಳಾಗಿದ್ದ ಆ ಹೆಣ್ಣು ಮಗಳಿಗೆ ಮದುವೆ ಮಾಡಿ ಕೇವಲ 9 ದಿನಗಳು ಕಳೆದಿತ್ತು. ತವರಿನಲ್ಲಿ ಒಂದೆರೆಡು ದಿನ ಇದ್ದು ಹೋಗುವುದಕ್ಕಾಗಿ ಆಕೆ ತವರಿಗೆ ಬಂದಿದ್ದಳು. ಅದೊಂದು ದಿನ ಒಂದಿಷ್ಟು ಸಾಮಾನು ತರುವುದಿದೆ, ಅಂಗಡಿಗೆ ಹೋಗಿ ಬರ್ತೀನಿ ಎಂದು ಹೊರ ಹೋದವಳು ಮತ್ತೆ ಮನೆಗೆ ಬರಲೇ ಇಲ್ಲ. ಎಷ್ಟು ಹುಡುಕಿದರೂ ಸಿಗದ ಮಗಳು ಕೊನೆಗೆ ನೀರಿನ ಟ್ಯಾಂಕ್​ನಲ್ಲಿ ಹೆಣವಾಗಿ ಬಿದ್ದಿರುವ ವಿಚಾರ ಕೇಳಿ ಪೂರ್ತಿ ಕುಟುಂಬವೇ ಗೋಳಿಡಲು ಆರಂಭಿಸಿದೆ.
ಅಂದ ಹಾಗೆ ನವವಿವಾಹಿತೆ ಈ ಹಿಂದೆ ಆಕೆಯದ್ದೇ ಗ್ರಾಮದ ಬೇರೊಬ್ಬ ಯುವಕನನ್ನು ಪ್ರೀತಿಸಿದ್ದಳಂತೆ. ಆ ವಿಚಾರವನ್ನು ಮನೆಯಲ್ಲಿ ಹೇಳಬೇಕು ಎನ್ನುವಷ್ಟರಲ್ಲಿ ಕುಟುಂಬದವರು ಅವಳಿಗೆ ಗಂಡೊಂದನ್ನು ಗೊತ್ತು ಮಾಡಿ ಮದುವೆ ಮಾಡಿಬಿಟ್ಟಿದ್ದರು. ಪ್ರೀತಿಯನ್ನು ಮನೆಯವರ ಮುಂದೆ ಹೇಳಿಕೊಳ್ಳಲಾಗದ ಆಕೆ ಕೊರಗಲಾರಂಭಿಸಿದ್ದಳು. ತವರಿಗೆ ಬಂದಾಗ ತನ್ನ ಲವರ್​ ಅನ್ನು ಮತ್ತೆ ಭೇಟಿ ಮಾಡಿದ್ದಾಳೆ. ಇಬ್ಬರೂ ಒಟ್ಟಿಗೆ ಬದುಕುವುದಕ್ಕಂತೂ ಸಾಧ್ಯವಿಲ್ಲ, ಹಾಗಾಗಿ ಇಬ್ಬರೂ ಒಟ್ಟಿಗೆ ಸಾಯೋಣ ಎಂದು ನಿರ್ಧಾರ ಮಾಡಿದ್ದಾರೆ. ಅದರಂತೆ ಇಬ್ಬರೂ ನೀರಿನ ಟ್ಯಾಂಕ್​ಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಸಾಯುವುದಕ್ಕೂ ಮುನ್ನ ತಾನು ಮದುವೆಗೆ ತೊಟ್ಟಿದ್ದ ಬಳೆಯನ್ನು ಸಂಪೂರ್ಣವಾಗಿ ಪುಡಿ ಪುಡಿ ಮಾಡಿದ್ದಾಳೆ. ಈ ವಿಚಾರ ತಿಳಿದ ಕುಟುಂಬ, ಮಗಳಿಗಾದ ಅನ್ಯಾಯ ನೆನೆದು ಕಣ್ಣೀರು ಹಾಕುತ್ತಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಅವರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)
ಮದುವೆಯಾಗಿ ಮೂರೇ ದಿನಕ್ಕೆ ಭಾವಂದಿರಿಂದಲೇ ಗ್ಯಾಂಗ್​ ರೇಪ್! ಗುಪ್ತಾಂಗಕ್ಕೆ ಕೋಲನ್ನಿಟ್ಟು ಬೆಂಕಿ ಕೊಟ್ಟ ಪಾಪಿಗಳು!

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − eight =
Remember me
