ಕೊಡವಲೂರ್​:ಪರಸ್ಪರ ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದು ಪ್ರೇಯಸಿಯನ್ನು ಮದುವೆಯಾಗಿದ್ದ ಪ್ರಿಯಕರ ವರ್ಷ ಕಳೆಯುವಷ್ಟರಲ್ಲೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಕೊಡವಲೂರ್​ ವಲಯದ ಎನ್​ಟಿಆರ್​ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶ್ರಾವಂತಿ (19) ಮೃತ ದುರ್ದೈವಿ. ಬುಚ್ಚಿರೆಡ್ಡಿಪಾಳ್ಯಂ ವಲಯದ ಪಲ್ಲಪ್ರೊಲು ವಾದಿಪಾಳ್ಯಂ ಮೂಲದ ಕೋಡಿ ಹರಿಕೃಷ್ಣ ಕೊವುರ್​ನ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ. ಕೊಡವಲೂರ್​ ವಲಯದ ಗಂದವರಾಮ್​ ಶಿವಪುರಮ್​ ಬುಡಕಟ್ಟು ಕಾಲನಿಯ ನಿವಾಸಿಯಾದ ಶ್ರಾವಂತಿ ನಾರ್ಥ್​ ರಾಜುಪಾಳೆಂನಲ್ಲಿ ಆಕೆಯು ಸಹ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಾಂಕುರವಾಗಿತ್ತು.
ಇದನ್ನೂ ಓದಿರಿ:ಮದುವೆಗೆ ಬಟ್ಟೆ ಖರೀದಿಸಲು ತೆರಳಿದ ವಧುವನ್ನು ಮಾರ್ಗ ಮಧ್ಯೆಯೇ ಹೊತ್ತೊಯ್ದ ಜವರಾಯ!​
ತಮ್ಮ ಪ್ರೀತಿಯ ವಿಚಾರವನ್ನು ಶ್ರಾವಂತಿ ತಂದೆ-ತಾಯಿಗೆ ತಿಳಿಸಿದ್ದಳು. ಬೇರೆ ಜಾತಿಯಾದರೂ ಒಪ್ಪಿಗೆ ಪಡೆದೇ ಇಬ್ಬರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ಜೂನ್​ 20ರಲ್ಲಿ ಪಲ್ಲಪ್ರೊಲುವಿನ ರಾಮಾಲಯಂನಲ್ಲಿ ಮದುವೆಯಾಗಿದ್ದರು. ಇದಾದ ಬಳಿಕ ಇಬ್ಬರು ಕೆಲವೇ ದಿನಗಳು ಚೆನ್ನಾಗಿದ್ದರು. ಇದರ ನಡುವೆ ಆಷಾಡ ಮಾಸ ಬಂದಿದ್ದರಿಂದ ಎರಡು ತಿಂಗಳು ಇಬ್ಬರು ತಮ್ಮ ತಮ್ಮ ಮನೆಯಲ್ಲಿದ್ದರು. ಆದರೆ, ಈ ಸಮಯದಲ್ಲಿ ಹರಿಕೃಷ್ಣನಿಗೆ ಶ್ರಾವಂತಿ ಮೇಲೆ ಅನುಮಾನ ಮೂಡಲು ಆರಂಭಿಸಿತ್ತು. ಅಲ್ಲದೆ, ಜಗಳವು ನಡೆದಿತ್ತು.

ಅನುಮಾನ ದೊಡ್ಡದಾಗಿ ಬೆಳೆದು ಸುಮಾರು 4 ತಿಂಗಳು ಶ್ರಾವಂತಿಗೆ ಆತ ಫೋನ್​ ಸಹ ಮಾಡಿರಲಿಲ್ಲ. ಕೊನೆಗೆ ಕೊಲ್ಲುವ ನಿರ್ಧಾರಕ್ಕೆ ಬಂದ ಹರಿಕೃಷ್ಣ ಒಳಗೊಳಗೆ ಸಂಚು ರೂಪಿಸಿ ಅವಕಾಶಕ್ಕಾಗಿ ಕಾದು ಕುಳಿತಿದ್ದ. ಈ ಮಧ್ಯೆ ಶ್ರಾವಂತಿ ತನ್ನ ಪಾಲಕರೊಂದಿಗೆ ಇದೇ ತಿಂಗಳ ಜನವರಿ 27ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಅದನ್ನು ತಿಳಿದು ಅಲ್ಲಿಗೆ ಬಂದ ಹರಿಕೃಷ್ಣ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ತನ್ನೊಂದಿಗೆ ಕಳಿಸುವಂತೆ ಮನವೊಲಿಸಿದ್ದ.
ಇದನ್ನೂ ಓದಿರಿ:ಸೆಕ್ಸ್​ ವೇಳೆ ದುರಂತ ಸಾವಿಗೀಡಾದ ವ್ಯಕ್ತಿ: ಮರಣೋತ್ತರ ವರದಿಯಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ!
ಶುಕ್ರವಾರ ರಾತ್ರಿ ಶ್ರಾವಂತಿ ಮತ್ತು ಹರಿಕೃಷ್ಣ ಇಬ್ಬರು ಎನ್​ಟಿಆರ್​ ನಗರದ ಕೊಡವಲೂರ್​ನಲ್ಲಿ ತಂಗಿ ಶನಿವಾರ ತಮ್ಮ ಮನೆಗೆ ಹೋಗುವಂತೆ ಹೇಳಿ ಶ್ರಾವಂತಿ ಪಾಲಕರು ಮನೆಯ ಬೀಗದ ಕೈಕೊಟ್ಟು ಕಳುಹಿಸಿದ್ದರು. ತನ್ನ ಕೃತ್ಯ ಸಾಧಿಸಲು ಇದೇ ಒಳ್ಳೆಯ ಸಮಯವೆಂದು ಭಾವಿಸಿದ ಹರಿಕೃಷ್ಣ ಶುಕ್ರವಾರ ಮಧ್ಯರಾತ್ರಿ ಶ್ರಾವಂತಿ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಬಂದು ನೋಡಿದಾಗ ಶ್ರಾವಂತಿ ಸತ್ತು ಬಿದ್ದಿರುವುದನ್ನು ನೋಡಿ ಪಾಲಕರು ಆಘಾತಕ್ಕೊಳಗಾದರು. ತಕ್ಷಣ ಪೊಲೀಸರಿಗೆ ವಿಷಯ ತಿಳಿದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಹಣಕ್ಕಾಗಿ ಪೀಡಿಸಿದರೆ ಅದು ಕಿರುಕುಳವಾಗಲ್ಲ- ‘ವಿವಾದಿತ’ ಲೇಡಿ ಜಡ್ಜ್​ನಿಂದ ಹೊರಟಿತು ಆದೇಶ

ಅವಳ ಕೈಬಿಡಲಾರೆ, ಆದ್ರೆ ಮದ್ವೆಯಾದರೆ ಸಾಯ್ತೇನೆ ಅಂತಿದ್ದಾರೆ ಅಮ್ಮ- ಪ್ಲೀಸ್​ ಪರಿಹಾರ ಹೇಳಿ…

ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- ‘ನಲ್ಲ ಇರಕು’, ಅಮೆರಿಕಕ್ಕೂ ಕಳಿಸ್ತೇನೆ ಎಂದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 2 =
Remember me
