ನವದೆಹಲಿ:ಭಾರತ ಮೂಲದ ಅಂಜು ಎಂಬಾಕೆ ತನ್ನ ಫೇಸ್​ಬುಕ್​ ಫ್ರೆಂಡ್ ನಸ್ರುಲ್ಲನನ್ನು ಭೇಟಿ ಮಾಡಲು ಅಧಿಕೃತ ವೀಸಾದೊಂದಿಗೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಹೋಗಿರುವ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ. ಇದೀಗ ಇಬ್ಬರು ಮದುವೆ ಆಗಿದ್ದು, ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ಸುದ್ದಿ ಹೊರಬಿದ್ದಿದೆ. ಅಂಜುಳನ್ನು ಮದುವೆ ಆಗಲ್ಲ, ಆಕೆ ಫ್ರೆಂಡ್​ ಮಾತ್ರ ಮತ್ತು ಆಕೆ ಭಾರತಕ್ಕೆ ಮರಳುತ್ತಾಳೆ ಎಂದು ಹೇಳಿದ್ದ ನಸ್ರುಲ್ಲ ಇದೀಗ ತನ್ನ ವರಸೆ ಬದಲಿಸಿದ್ದು, ಆಕೆಯನ್ನು ಮದುವೆ ಆಗುವ ಮೂಲಕ ಉಲ್ಟಾ ಹೊಡೆದಿದ್ದಾನೆ.
ಪಾಕಿಸ್ತಾನಕ್ಕೆ ತೆರಳಿರುವ ಅಂಜು (34) ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದಳು. ಆದರೆ, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿದ ಬಳಿಕ ಪ್ರಿಯಕರನನ್ನು ಅರಸಿ ಅಂಜು ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಾಳೆ.
ಇದನ್ನೂ ಓದಿ:ಒಂದು ಸಣ್ಣ ತಪ್ಪಿನಿಂದ ಪ್ರಾಣವನ್ನೇ ಕಳ್ಕೊಂಡ ವಿದ್ಯಾರ್ಥಿನಿ: ಚಿಕ್ಕ ಸುಳಿವು ಸಿಕ್ಕಿದ್ದರೂ ಉಳಿಯುತ್ತಿತ್ತು ಜೀವ
ಸೋಮವಾರ ಈ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ನಸ್ರುಲ್ಲ ಪ್ರತಿಕ್ರಿಯೆ ನೀಡಿ, ಅಂಜುವಿನ ವೀಸಾ ಅವಧಿ ಮುಗಿದ ನಂತರ ಅಂದರೆ, ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ ಎಂದಿದ್ದ. ಅಲ್ಲದೆ ತಮ್ಮ ನಡುವೆ ನಡುವೆ ಯಾವುದೇ ಪ್ರೇಮ ಸಂಬಂಧ ಇಲ್ಲ. ಆಕೆಯನ್ನು ಮದುವೆ ಆಗುವ ಯಾವುದೇ ಆಲೋಚನೆಯೂ ಇಲ್ಲ ಎಂದು ಹೇಳಿದ್ದ. ವಿಜ್ಞಾನ ಪದವೀಧರರಾಗಿರುವ ನಸ್ರುಲ್ಲ, ತಮ್ಮ ಸ್ನೇಹಕ್ಕೆ ಯಾವುದೇ ಪ್ರೀತಿಯ ಆಯಾಮವಿಲ್ಲ ಎಂದು ಸ್ಥಳೀಯ ಅಧಿಕಾರಿಗಳಿಗೆ ಅಫಿಡವಿಟ್ ಸಹ ಸಲ್ಲಿಸಿದ್ದ. ಆದರೆ, ಇದೀಗ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಅಂಜುಳನ್ನು ಮದುವೆ ಆಗಿದ್ದಾನೆ. ಅಲ್ಲದೆ, ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಸಹ ಆಗಿದ್ದಾಳೆ. ಹೇಳಿದ್ದೊಂದು ಮಾಡಿದ್ದೊಂದು ಎನ್ನುವಂತಾಗಿದೆ ನಸ್ರುಲ್ಲ ಕತೆ.
ನಸ್ರುಲನನ್ನು ವರಿಸಿರುವ ಅಂಜು ಇದೀಗ ಪಾಕಿಸ್ತಾನವನ್ನು ಹೊಗಳಿದ್ದಾಳೆ. ಬ್ಯೂಟಿಫುಲ್​ ಪಾಕಿಸ್ತಾನ ಎಂಬ ಟ್ವಿಟರ್​ ಪೇಜ್​ನಲ್ಲಿ ವಿಡಿಯೋವೊಂದು ಪೋಸ್ಟ್​ ಆಗಿದ್ದು, ಅದರಲ್ಲಿ ಪಾಕಿಸ್ತಾನದಲ್ಲಿರುವ ಭಾರತದ ಸುಂದರ ಯುವತಿ ಪಾಕಿಸ್ತಾನವನ್ನು ಸುಂದರ ದೇಶದ ಎಂದಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಅಂಜು ಮತ್ತು ನಸ್ರುಲ್ಲ ಪಾಕಿಸ್ತಾನದ ವಿವಿಧ ತಾಣಗಳಲ್ಲಿ ರೊಮ್ಯಾಂಟಿಕ್​ ಆಗಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.
A pretty girl Anju from india in pakistan and says Pakistan is Beautiful Country ❤pic.twitter.com/zre8a6G2LM
— Beautiful Pakistan🇵🇰 (@LandofPakistan)July 25, 2023

ಅಂಜು ಇಸ್ಲಾಮ್​ಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ನಸ್ರುಲ್ಲಾನನ್ನು ಮದುವೆ ಆಗಿರುವುದಾಗಿ ಪಾಕಿಸ್ತಾನದ ದೀರ್​ನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕ್ರೈಸ್ತ ಧರ್ಮೀಯಳಾದ ಈಕೆ ಮತಾಂತರಗೊಂಡು ಫಾತಿಮಾ ಆಗಿ ಇಂದು ನಸ್ರುಲ್ಲಾನನ್ನೇ ಮದುವೆಯಾಗಿದ್ದಾಳೆ. ಸದ್ಯದಲ್ಲೇ ಇಬ್ಬರೂ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಅಂಜುಗೆ ಅರವಿಂದ ಎಂಬಾತನೊಂದಿಗೆ ಈ ಮೊದಲೇ ಮದುವೆಯಾಗಿದ್ದು, ಈ ದಂಪತಿಗೆ 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಜೈಪುರಕ್ಕೆ ಹೋಗಿ ಬರುವುದಾಗಿ ಪತಿ ಬಳಿ ಹೇಳಿ ಹೊರಟಿದ್ದ ಅಂಜು, ಬಳಿಕ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿ, ಇದೀಗ ಮದುವೆ ಸಹ ಆಗಿದ್ದಾಳೆ. ಇದೀಗ ಇಬ್ಬರು ಮಕ್ಕಳು ತಾಯಿಯಿಲ್ಲದೇ ಅನಾಥರಾಗಿದ್ದು, ಅಂಜು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನೀನು ಮಾಡಿದ ತಪ್ಪಿನಿಂದ ಇಂದು ನಿನ್ನ ಮಕ್ಕಳು ನೋವು ಅನುಭವಿಸುವಂತಾಗಿದೆ ಎಂದು ಜರಿದಿದ್ದಾರೆ. ಅಲ್ಲದೆ, ನಸ್ರುಲ್ಲ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಮೊದಲು ಫ್ರೆಂಡ್​ ಅಷ್ಟೇ ಎಂದು ಹೇಳಿ, ಇದೀಗ ಆಕೆಯನ್ನು ಮದುವೆ ಆಗುವ ಮೂಲಕ ಕೊನೆಗೂ ನಿನ್ನ ಪಾಕಿಸ್ತಾನ ಬುದ್ಧಿಯನ್ನು ತೋರಿಸಿಬಿಟ್ಟೆ ಎಂದು ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ:ಜಲಾಶಯ ಭರ್ತಿ, ಆತಂಕ ಮಾಯ: ರಾಜ್ಯಾದ್ಯಂತ ಇನ್ನಷ್ಟು ಬಿರುಸು ಪಡೆದ ಮಳೆ; ಉಕ್ಕಿ ಹರಿದ ನದಿಗಳು, ಮತ್ತೆ ನಾಲ್ವರು ಬಲಿ
ನಾನು ದಿಢೀರನೇ ಪಾಕಿಸ್ತಾನಕ್ಕೆ ಆಗಮಿಸಿಲ್ಲ. ಸಾಕಷ್ಟು ಪ್ಲಾನ್​ ಮಾಡಿಕೊಂಡೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ. ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ಸಂಬಂಧಿಕರು ಮತ್ತು ಮಕ್ಕಳಿಗೆ ಕಿರುಕುಳ ನೀಡಬೇಡಿ ಎಂದು ನಾನು ಮಧ್ಯಮದವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಅಂಜು ಪಾಕಿಸ್ತಾನದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾಳೆ.
ಪೇಶಾವರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಅಪ್ಪರ್ ದಿರ್ ಜಿಲ್ಲೆಯ ಕುಲ್ಶೋ ಗ್ರಾಮದಿಂದ ಫೋನ್ ಮೂಲಕ ಪಾಕಿಸ್ತಾನ ಪಿಟಿಐಗೆ ನಸ್ರುಲ್ಲ ಮಾಹಿತಿ ನೀಡಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ, ಅಪ್ಪರ್​ ದಿರ್‌ಗೆ ಮಾತ್ರ ಮಾನ್ಯವಾಗಿರುವ 30 ದಿನಗಳ ವೀಸಾವನ್ನು ಅಂಜುಗೆ ನೀಡಲು ನಿರ್ಧರಿಸಲಾಗಿದೆ ಎಂದು ಚಾನ್ಸರಿಗೆ ತಿಳಿಸಲಾಗಿದೆ.(ಏಜೆನ್ಸೀಸ್​)
ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

ಫೇಸ್​ಬುಕ್​ ಫ್ರೆಂಡ್​ಗಾಗಿ ಪಾಕಿಸ್ತಾನಕ್ಕೆ ಪರಾರಿಯಾದ ಅಂಜುವಿನ ಅಸಲಿ ಕತೆ ಬಿಚ್ಚಿಟ್ಟ ತಂದೆ ಥಾಮಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
