ಭುವನೇಶ್ವರ:ಮೂಢನಂಬಿಕೆಯಿಂದಾಗಿ ಕತ್ತೆ ಮದುವೆ, ಕಪ್ಪೆ ಮದುವೆಯನ್ನೆಲ್ಲ ಮಾಡುವುದನ್ನು ಕೇಳಿರುತ್ತೀರ. ಆದರೆ ನಾಯಿ ಮದುವೆ ಮಾಡುವುದನ್ನು ಕೇಳಿರುವುದು ಕಷ್ಟಸಾಧ್ಯ. ಅದರಲ್ಲೂ ಮನೆಯಂಗಳದಲ್ಲಿ ಆಡಿಕೊಂಡಿರುವ ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡುವುದೆಂದರೆ?
ಇದನ್ನೂ ಓದಿ:ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ
ಆಶ್ಚರ್ಯ ಎನಿಸಿದರೂ ಇದು ಸತ್ಯವೇ. ಇಂತದ್ದೊಂದು ಮೂಢನಂಬಿಕೆ ಒಡಿಶಾದ ಮಯೂರ್ಭಂಜ್​ನಲ್ಲಿ ಅನುಸರಿಸಲಾಗುತ್ತಿದೆ. ಅಲ್ಲಿನ ಗಂಭರಿಯಾ ಗ್ರಾಮದ ಬುಡಕಟ್ಟು ಸಮುದಾಯದಲ್ಲಿ ಇತ್ತೀಚೆಗೆ ಇಬ್ಬರು ಸಣ್ಣ ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡಲಾಗಿದೆ. ಈ ಸುದ್ದಿ ಎಲ್ಲೆಡೆ ಹರಿದಾಡಿದೆ.
ಅಷ್ಟಕ್ಕೂ ಈ ರೀತಿ ನಾಯಿಯೊಂದಿಗೆ ಮದುವೆ ಮಾಡುವುದಕ್ಕೂ ಒಂದು ಕಾರಣವಿದೆಯಂತೆ. ಮದುವೆ ಮಾಡಲಾಗಿರುವ ಇಬ್ಬರೂ ಮಕ್ಕಳಿಗೆ ಬೇಗ ಹಲ್ಲು ಹುಟ್ಟಿದೆಯಂತೆ. ಅದು ಅವರ ಪ್ರಕಾರ ಒಳ್ಳೆಯದಲ್ಲವಂತೆ. ಹಾಗಾಗಿ ಮಕ್ಕಳ ಮೇಲಿನ ದುಷ್ಟ ಶಕ್ತಿಯ ಕಣ್ಣು ಹೋಗಲೆಂದು, ಅವರಿಗೆ ಅಂಟಿಕೊಂಡಿರುವ ದರಿದ್ರ ದೂರಾಗಲೆಂದು ಈ ರೀತಿ ನಾಯಿಯೊಂದಿಗೆ ಮದುವೆ ಮಾಡಿಸಲಾಗಿದೆಯಂತೆ.
ಇದನ್ನೂ ಓದಿ:ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಅಪಘಾತ: ಚಾಲಕ, ಕುಟುಂಬಸ್ಥರು ಸೇರಿ ಐವರ ಸಾವು
ಈ ಕುರಿತಾಗಿ ಮಾತನಾಡಿರುವ ಮಯೂರ್​ಭಂಜ್​ ಪೊಲೀಸ್ ವರಿಷ್ಠಾಧಿಕಾರಿ ಸ್ಮಿತ್ ಪರ್ಮಾರ್, “ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಈ ರೀತಿಯ ಮೂಢನಂಬಿಕೆಗಳನ್ನು ತಡೆಯಲು ಜಿಲ್ಲಾಧಿಕಾರಿಗಳ ಜತೆ ಸೇರಿ ಕೆಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
