ಕೊಚ್ಚಿ:ವಿವಾಹಿತೆ ಮಹಿಳೆಯೊಬ್ಬಳು ಫೇಸ್​ಬುಕ್​ ಫ್ರೆಂಡ್​ನಿಂದ ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಪಂದಳಂನಲ್ಲಿ ನಡೆದಿದೆ.
ಸಾಜಿತ ಮೃತ ಮಹಿಳೆ. ಈಕೆ ಪಂದಳಂನ ತುಳಸಿ ಭವನ್​ ನಿವಾಸಿ. ಕಳೆದ ಶುಕ್ರವಾರ ರಾತ್ರಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಹತ್ಯೆಯಾಗಿದೆ. ಕೊಲೆಯಾದ ದಿನ ಆಕೆಯೊಂದಿಗೆ ಇದ್ದ ಯುವಕ ಪರಾರಿಯಾಗಿದ್ದಾನೆ. ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿದಾಗ ತಲೆಗೆ ಏಟು ಬಿದ್ದಿರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಆ ಬಳಿಕ ಮಹಿಳೆಯೊಂದಿಗೆ ಪರಿಚಯವಿದ್ದ ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ತಿರುವನಂತಪುರಂನ ವೆಲ್ಲರದ ನಿವಾಸಿ ಶೈಜು ಎಂಬಾತ ಹಲವು ದಿನಗಳಿಂದ ಆಕೆಯೊಂದಿಗೆ ವಾಸವಿದ್ದ ಎಂದು ಶಂಕಿಸಲಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೃತ ಸಾಜಿತ, ಗಂಡನಿಂದ ಬೇರೆಯಾಗಿದ್ದಳು. ತಿರುವಳ್ಳದಲ್ಲಿ ಶಾಪ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಾಜಿತಾಗೆ ಫೇಸ್​ಬುಕ್​ ಮೂಲಕ ತಿರುವನಂತಪುರಂ ಮೂಲದ ಶೈಜು ಪರಿಚಯವಾಗಿದೆ.
ಇಬ್ಬರು ಬಾಡಿಗೆ ಮನೆಯಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದರು. ಅವರು ನೆರೆಹೊರೆಯವರೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಂಡಿರಲಿಲ್ಲ. ಹೀಗಾಗಿ ಅವರ ಬಗ್ಗೆ ಯಾರು ಗಮನ ವಹಿಸಿರಲಿಲ್ಲ. ಸಾಜಿತ ಗಾಯಗೊಂಡಿದ್ದಾರೆ ಎಂದು ಆಕೆಯ ಸ್ನೇಹಿತರು ಮಾಹಿತಿ ನೀಡಿದ ಬಳಿಕ ಪೊಲೀಸರು ಅವರ ಮನೆಗೆ ತಲುಪಿ, ಪರಿಶೀಲನೆ ನಡೆಸಿದಾಗ ಆಕೆ ಕೊಲೆಯಾಗಿರುವುದು ಬೆಳಕಿಗೆ ಬಂದಿತು.
ಪೊಲೀಸರು ಮನೆಗೆ ತಲುಪಿದಾಗ ಸಾಜಿತ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಆಕೆಯ ತಲೆಗೆ ಶೈಜು, ಮರದ ತುಂಡಿನಿಂದ ಹಲ್ಲೆ ಮಾಡಿರುವುದು ಕಂಡುಬಂದಿದೆ. ಶೈಜು ಫೋನ್ ಸ್ವಿಚ್ ಆಫ್ ಆಗಿದೆ. ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಯುವಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ.(ಏಜೆನ್ಸೀಸ್​)
ವರಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಬಂದಂತೆ ವರ್ತಿಸಿದ ವಿದ್ಯಾರ್ಥಿ!

ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

ವರಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಬಂದಂತೆ ವರ್ತಿಸಿದ ವಿದ್ಯಾರ್ಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eighteen =
Remember me
