ನವದೆಹಲಿ:ಭಾರತದಲ್ಲಿ ಕಾರು ಖರೀದಿಸುವ ಜನರ ಕನಸನ್ನು 1980ರ ದಶಕದಲ್ಲಿ ನನಸು ಮಾಡಿದ ಮಾರುತಿ 800ಗೆ ಈಗ 40 ವರ್ಷದ ಸಂಭ್ರಮ. 1980ರ ದಶಕದಲ್ಲಿ ಭಾರತದಲ್ಲಿ ಸ್ವಂತ ಕಾರನ್ನು ಹೊಂದುವುದು ಐಷಾರಾಮಿ ವಿಚಾರವಾಗಿತ್ತು. ಆಗ ಜನರ ಮುಂದೆ ಇದ್ದಿದ್ದು ಎರಡೇ ಆಯ್ಕೆ: ಫಿಯಟ್ ಮತ್ತು ಅಂಬಾಸಡರ್. ಹೊಸ ಹಾಗೂ ಆಧುನಿಕ ಕಾರಿನ ಕನಸು ದೂರದ ಮಾತಾಗಿತ್ತು. ಆದರೆ, ಮಾರುತಿ 800 ಎಂಬ ಒಂದು ಚಿಕ್ಕ ಕಾರು 1983ರ ಡಿ.14 ರಂದು ವಾಹನೋದ್ಯಮ ರಂಗ ಪ್ರವೇಶಿಸಿ ಸನ್ನಿವೇಶವನ್ನೇ ಬದಲಾಯಿಸಿತು.
ತಂತ್ರಜ್ಞಾನ ವಿಚಾರದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಮಾರುತಿ 800 ಮುಂದಿತ್ತು. ಅದು ಚಿಕ್ಕ, ಹಗುರ ಮತ್ತು ಚಲಾಯಿಸಲು ಹಾಗೂ ನಿರ್ವಹಣೆಗೆ ಸುಲಭವಾದ ಕಾರ್ ಆಗಿತ್ತು. ಅಲ್ಲದೆ, ಹೆಚ್ಚು ಮೈಲೇಜ್ ಕೂಡ ಕೊಡುತ್ತಿತ್ತು. ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಎಲ್ಲ ವಿಭಾಗಗಳ ಜನರಲ್ಲಿ ಒಂದು ರೀತಿಯ ಪುಳಕವನ್ನೇ ಸೃಷ್ಟಿಸಿತ್ತು. ಉದ್ಯಮಿಗಳಿಂದ ಹಿಡಿದು ಹಿರಿಯ ಕಾರ್ಯನಿರ್ವಾಹಕರ ವರೆಗೆ ಎಲ್ಲ ವಿಭಾಗಗಳ ಜನರಲ್ಲಿ ಈ ಕಾರನ್ನು ಹೊಂದುವ ಹಂಬಲ ಉಂಟಾಯಿತು. ಮಾರುತಿ 800 ಹೊಂದುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಇದು ಭಾರತೀಯ ಮಧ್ಯಮ ವರ್ಗದವರ ಕನಸಿನ ವಾಹನವಾಗಿತ್ತು.
ಆರಂಭವಾದ ಬೆನ್ನಿಗೇ ಸೃಷ್ಟಿಯಾದ ಹವಾ:1983ರ ಏಪ್ರಿಲ್ 9ರಂದು ಮಾರುತಿಯ ಬುಕ್ಕಿಂಗ್ ಆರಂಭವಾದಾಗ 10,000 ರೂಪಾಯಿ ಮುಂಗಡದೊಂದಿಗೆ ಸುಮಾರು 1.2 ಲಕ್ಷ ಗ್ರಾಹಕರು ಕಾರು ಖರೀದಿಗೆ ಮುಗಿಬಿದ್ದರು. ಮಾರುತಿ ಸೃಷ್ಟಿಸಿದ ಹವಾ ಹೇಗಿತ್ತೆಂದರೆ ಜೂನ್ 8ರಂದು, ಅಂದರೆ ಕೇವಲ ಎರಡು ತಿಂಗಳಲ್ಲಿ ಬೇಡಿಕೆ 1.35 ಲಕ್ಷ ಕಾರಿಗೆ ಏರಿತ್ತು. ಹೀಗೆ ದೇಶದಾದ್ಯಂತ ಜನಮನ ಗೆದ್ದ ಮಾರುತಿ ಬ್ರಾಂಡ್​ನ ಒಟ್ಟು 27 ಲಕ್ಷ ಕಾರುಗಳು ಮಾರಾಟವಾಗಿ ಅಂತಿಮವಾಗಿ 31 ವರ್ಷದ ಅರ್ಥಪೂರ್ಣ ಅಸ್ತಿತ್ವದ ನಂತರ 2014ರಲ್ಲಿ ವಿದಾಯ ಹೇಳಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
