ಹೈದರಾಬಾದ್​:ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ 2018ರ ಸೆಪ್ಟೆಂಬರ್​ನಲ್ಲಿ ನಡೆದಿದ್ದ ಮರ್ಯಾದೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿ ರಾವ್, ಭಾನುವಾರ ಹೈದರಾಬಾದ್​ ಹೊಟೆಲ್​ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ನಿನ್ನೆಯಷ್ಟೇ ಅವರ ಅಂತ್ಯಕ್ರಿಯೆಯೂ ನೆರವೇರಿತು.
ಮರ್ಯಾದೆ ಹತ್ಯೆಯಿಂದ ಸಾಕಷ್ಟು ಸುದ್ದಿಯಾದ ಮಾರುತಿ ರಾವ್​ ಹುಟ್ಟಿನಿಂದಲೇ ಶ್ರೀಮಂತ ವ್ಯಕ್ತಿಯೇನಲ್ಲ. ಮಧ್ಯಮ ಕುಟುಂಬದಲ್ಲಿ ಹುಟ್ಟಿದ ರಾವ್​, ಬೆಳೆಯುತ್ತಾ ಆತನನ್ನು ನೋಡಿ ಹೊಟ್ಟೆಕಿಚ್ಚು ಪಡುವಷ್ಟು ಹಣ ಸಂಪಾದಿಸಿದ್ದ. ಕಿರಾಣಿ ವ್ಯಾಪಾರಿಯಾಗಿ ವೃತ್ತಿ ಪ್ರಾರಂಭಿಸಿದ. ಬಳಿಕ ರೈಸ್​ ಮಿಲ್​ ವ್ಯವಹಾರ ಪ್ರವೇಶಿಸಿ, ರಿಯಲ್​ ಎಸ್ಟೇಟ್​ ವ್ಯವಹಾರದಲ್ಲೂ ತೊಡಗಿಕೊಂಡಿದ್ದ. ಅಲ್ಲಿಂದಾಚೆಗೆ ಹಿಂದೆ ತಿರುಗಿ ನೋಡದ ರಾವ್​ ಬಹುಬೇಗನೇ ಕೋಟ್ಯಾಧೀಶ್ವರನಾಗಿಬಿಟ್ಟಿದ್ದ. ಸುಮಾರು 200 ಕೋಟಿ ರೂ. ಒಡೆಯನಾಗಿದ್ದ.
ಮಿರಿಯಾಲಗುಡ ಮಾರುತಿ ರಾವ್​ ಎಂದೇ ಪರಿಚಿತನಾಗಿದ್ದ. ಅನೇಕರು ಆತನ ಆಸ್ತಿಯ ಬಗ್ಗೆ ಕೇಳಿದ್ದಾರೆ. ಆದರೆ, ಕೆಲವರು ಹೇಳುವ ಪ್ರಕಾರ ಆತನ​ ಆಸ್ತಿ 200 ಕೋಟಿಗಿಂತಲೂ ಹೆಚ್ಚಿತ್ತು ಎಂದಿದ್ದಾರೆ.
ಅಂದಹಾಗೆ ರಾವ್​ ತನ್ನ ಮಗಳನ್ನು ಮದುವೆಯಾಗಿದ್ದ ಪೆರುಮಾಳ ಪ್ರಣಯ್​ ಎಂಬಾತನ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. 2018ರಲ್ಲಿ ಈ ಘಟನೆ ನಡೆದಿತ್ತು. ಆದರೆ, ಕಳೆದ ಭಾನುವಾರ ಹೈದರಾಬಾದಿನ ಆರ್ಯ ವೈಶ್ಯ ಭವನದಲ್ಲಿ ರಾವ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರವಷ್ಟೇ ಮಿರಿಯಲಗುಡದಲ್ಲಿ ನಡೆದಿದೆ. ಪ್ರಣಯ್ ಕೊಲೆಗೆ ಸಂಬಂಧಿಸಿದಂತೆ ನಿರಂತರ ವಿಚಾರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಇತ್ತೀಚೆಗಷ್ಟೇ ರಾವ್​ ಆಸ್ತಿ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್​ ಮೂಲಗಳ ಪ್ರಕಾರ ರಾವ್​​ ಆಸ್ತಿ ಮೌಲ್ಯ ಪ್ರಸ್ತುತ 200 ಕೋಟಿ ರೂ. ಇದೆ. 15 ವರ್ಷಗಳ ಹಿಂದೆ ರೈಸ್​ ಮಿಲ್​ ಮತ್ತು ರಿಯಲ್​ ಎಸ್ಟೇಟ್​​ ವ್ಯವಹಾರ ಆರಂಭಿಸಿದ್ದಾಗಿ ರಾವ್​ ತನಿಖಾ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಮಿರಿಯಲಗುಡದಲ್ಲಿ ಅಮೃತಾ ಹೆಸರಿನಲ್ಲಿ 100 ಬೆಡ್​​ ವ್ಯವಸ್ಥೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಪತ್ನಿ ಗಿರಿಜಾ ಹೆಸರಿನಲ್ಲಿ ಮಿರಿಯಲಗುಡದಲ್ಲಿ 10 ಎಕರೆ ಭೂಮಿಯು ಕೂಡ ಇರುವುದಾಗಿ ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.
ಮಿರಿಯಲಗುಡ ಬೈಪಾಸ್​ ರಸ್ತೆಯಲ್ಲಿ 22 ಸೈಟ್​ಗಳಿವೆ. ತಾಯಿ ಹೆಸರಿನಲ್ಲಿ ಶಾಪಿಂಗ್ ಮಾಲ್​, ಹೊಸಪೇಟೆಯಲ್ಲಿ 400 ಯಾರ್ಡ್​ ಪ್ಲಾಟ್​ ಹಾಗೂ ಹೈದರಾಬಾದಿನಲ್ಲಿ 5 ಅಪಾರ್ಟ್​ಮೆಂಟ್​ಗಳಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಬೇನಾಮಿ ಆಸ್ತಿಯು ಇದೆ ಎನ್ನಲಾಗಿದೆ.
ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದ ವೇಳೆ ಡೆತ್​ನೋಟ್​ ಕೂಡ ಪತ್ತೆಯಾಗಿತ್ತು. ಅದರಲ್ಲಿ ಪತ್ನಿ ಕುರಿತು ಕ್ಷಮಿಸು ಗಿರಿಜಾ ಎಂತಲೂ ಮಗಳ ಬಗ್ಗೆ ಅಮೃತಾ ಅಮ್ಮನ ಬಳಿ ಹೋಗು ಎಂದು ಬರೆಯಲಾಗಿತ್ತು. ಇನ್ನು ಸೋಮವಾರ ನಡೆದ ಅಂತ್ಯಕ್ರಿಯೆಗೆ ಅಮೃತಾ ಹೋಗಿದ್ದಾಗ ಸಂಬಂಧಿಕರು ಆಕೆಯನ್ನು ನೋಡಿ ಅಮೃತಾ ಗೋ ಬ್ಯಾಕ್​ ಎಂಬ ಆಕ್ರೋಶ ಘೋಷಣೆ ಕೂಗಿದ್ದರು. ಇದರಿಂದ ಅಮೃತಾಗೂ ಮುಜುಗರ ಉಂಟಾಗಿತ್ತು. ಇದೀಗ ರಾವ್​ ಮರಣ ಹೊಂದಿದ್ದು, ಅವರ ಆಸ್ತಿಯು ಚರ್ಚೆಯ ವಿಷಯವಾಗಿದೆ.
ಘಟನೆ ಹಿನ್ನೆಲೆದಲಿತ ಸಮುದಾಯದವನಾಗಿದ್ದ ಪ್ರಣಯ್​ ಮತ್ತು ವೈಶ್ಯ ಸಮುದಾಯವಳಾಗಿದ್ದ ಅಮೃತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇದಕ್ಕೆ ಅಮೃತಾ ತಂದೆ ರಾವ್​ ಒಪ್ಪಿರಲಿಲ್ಲ. ಬಳಿಕ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದರು ಎಂಬ ಆರೋಪವಿದೆ. ಸೆಪ್ಟೆಂಬರ್​ 14, 2018ರಂದು ಗರ್ಭಿಣಿ ಪತ್ನಿ ಅಮೃತಾ ಮುಂದೆಯೇ ಪ್ರಣಯ್​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅಂದಿನಿಂದ ಪ್ರಕರಣ ತನಿಖೆ ನಡೆಯುತ್ತಲೇ ಇದೆ.(ಏಜೆನ್ಸೀಸ್​)
ತೆಲಂಗಾಣ ಮರ್ಯಾದೆ ಹತ್ಯೆಯ ಪ್ರಮುಖ ಆರೋಪಿ, ಅಮೃತಾ ರಾವ್​ ತಂದೆ ಮಾರುತಿ ರಾವ್​ ಶವವಾಗಿ ಪತ್ತೆ

ಮರ್ಯಾದಾ ಹತ್ಯೆಯ ಆರೋಪಿ ಮಾರುತಿ ರಾವ್ ಶವ ಸಿಕ್ಕ ಬೆನ್ನಲ್ಲೇ ಮಗಳು ಅಮೃತಾಳಿಂದ ಹೊರಬಿತ್ತು ಒಂದು ವಿಷಯ; ಪ್ರಣಯ್​ ಸಾವಿನ ಬಳಿಕ ಆಕೆ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + ten =
Remember me
