ನವದೆಹಲಿ:ಬರುವ ಸೆಪ್ಟೆಂಬರ್​ ತಿಂಗಳಿಂದ ತನ್ನ ವಿವಿಧ ಮಾಡೆಲ್​ ಕಾರುಗಳ ಬೆಲೆಗಳನ್ನು ಏರಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪೆನಿಯು ತಿಳಿಸಿದೆ. ಹಲವು ಇನ್​ಪುಟ್​ ಕಾಸ್ಟ್​ಗಳ ಹೆಚ್ಚಳವಾಗಿರುವ ಕಾರಣದಿಂದ ಕಂಪೆನಿ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.
ಯಾವ ಮಾದರಿ ಕಾರಿನ ಮೇಲೆ ಎಷ್ಟು ಏರಿಕೆಯಾಗುತ್ತದೆ ಎಂದು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಜೂನ್​​ ತಿಂಗಳಲ್ಲಿ ಸಲ್ಲಿಸಿದ ಹೇಳಿಕೆಯಲ್ಲೂ ಕಂಪೆನಿ ಸುಳಿವು ನೀಡಿತ್ತು.
ಇದನ್ನೂ ಓದಿ:ಪ್ರತಿದಿನ 5 ಲಕ್ಷ ಲಸಿಕೆ ನೀಡಲು ತೀರ್ಮಾನ; ವಾರಕ್ಕೊಮ್ಮೆ ಲಸಿಕೆ ಉತ್ಸವ!
“ಕಳೆದ ವರ್ಷದಲ್ಲಿ ವಿವಿಧ ಇನ್​ಪುಟ್​ ಕಾಸ್ಟ್​ಗಳ ಹೆಚ್ಚಳವು ಕಂಪೆನಿಯ ವಾಹನಗಳ ತಯಾರಿಕಾ ವೆಚ್ಚದ ಮೇಲೆ ವಿಪರೀತ ಪ್ರಭಾವ ಬೀರಿದೆ. ಹೀಗಾಗಿ ಈ ಹೆಚ್ಚುವರಿ ವೆಚ್ಚದ ಸ್ವಲ್ಪ ಪ್ರಮಾಣವನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅವಶ್ಯಕವಾಗಿದೆ. ಎಲ್ಲಾ ಮಾಡೆಲ್​ಗಳ ಮೇಲೆ ಸೆಪ್ಟೆಂಬರ್ 2021 ರಿಂದ ಬೆಲೆ ಏರಿಸಲು ಯೋಜಿಸಲಾಗಿದೆ” ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ.(ಏಜೆನ್ಸೀಸ್)
ನಮ್ಮ ಮೆಟ್ರೊ: ಇಂದಿನಿಂದ ಕೆಂಗೇರಿ ಟರ್ಮಿನಲ್ ಕಾರ್ಯಾರಂಭ; ರೈಲುಗಳ ವಿವರ ಇಲ್ಲಿದೆ

ಬೆನ್ನುನೋವು ನಿಯಂತ್ರಣಕ್ಕೆ ಮಗುವಿನಂತೆ ಮಲಗುವ ಈ ಸರಳ ಯೋಗಾಸನ ಮಾಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + twelve =
Remember me
