ನವದೆಹಲಿ:ಭಾರತದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ, ಸ್ಟೇರಿಂಗ್‌ ಸಿಸ್ಟಮ್‌ನ ಟೈ ರಾಡ್‌ಗಳನ್ನು ಬದಲಾಯಿಸಲು 87,599 ವಾಹನಗಳನ್ನು ಹಿಂಪಡೆಯಲಿದೆ ಎಂದು ಕಂಪನಿ ತಿಳಿಸಿದೆ. ಸ್ಟೇರಿಂಗ್‌ ಸಿಸ್ಟಮ್‌ನಲ್ಲಿನ ದೋಷದ ಕಾರಣಕ್ಕಾಗಿ ಈ ನಿರ್ಧಾರ ಮಾಡಿರುವುದಾಗಿ ಕಂಪನಿ ತಿಳಿಸಿದೆ.
ಇದನ್ನೂ ಓದಿ:ಲಿಂಗ ಬದಲಾವಣೆ ನಿಷೇಧ; ಹೊಸ ಶಾಸನಕ್ಕೆ ಸಹಿ ಹಾಕಿದ ರಷ್ಯಾ
ಸ್ಟೇರಿಂಗ್‌ ಸಿಸ್ಟಮ್‌ ಸಮಸ್ಯೆ ಎಂದರೇನು?:ವಾಹನಗಳಲ್ಲಿನ ಸ್ಟೀರಿಂಗ್ ಟೈ ರಾಡ್‌ನಲ್ಲಿನ ಕೆಲವು ಸಮಸ್ಯೆಗಳು ಕಂಡಿವೆ. ಸ್ಟೀರಬಿಲಿಟಿ ಅಂದರೆ, ವಾಹನವನ್ನು ತಿರುಗಿಸುವ ವೇಳೆ ಸಮಸ್ಯೆ ಉಂಟಾಗಲಿದೆ. ಆ ಕಾರಣಕ್ಕಾಗಿ ಈ ಕಾರುಗಳನ್ನು ರಿಕಾಲ್‌ ಮಾಡುತ್ತಿರುವುದಾಗಿ ಮಾರುತಿ ಸುಜಿಕಿ ತಿಳಿಸಿದೆ.
ಇದನ್ನೂ ಓದಿ:VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ
ಸ್ಟೇರಿಂಗ್‌ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದ್ದು, ರಿಕಾಲ್‌ ಮಾಡಿ ಪರಿಶೀಲನೆ ಮಾಡಲಾಗುವುದು. ಬದಲಾವಣೆ ಮಾಡಬೇಕಾದ ಅಗತ್ಯವಿದ್ದಲ್ಲಿ ಸ್ಟೇರಿಂಗ್‌ ಟೈ ರಾಡ್‌ಅನ್ನು ಬದಲಾವಣೆ ಮಾಡುವುದಾಗಿ ತಿಳಿಸಿದೆ. ದೋಷವು ಸ್ಟೀರಿಂಗ್ ಟೈ ರಾಡ್‌ನ ಒಂದು ಭಾಗದಲ್ಲಿದೆ. ಇದು ಅಪರೂಪದ ಸಂದರ್ಭಗಳಲ್ಲಿ, ವಾಹನದ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಇಲ್ಲದೇ ಅದು ಒಡೆದು ಹೋಗಬಹದು ಎಂದು ಕಂಪನಿಯು ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಕಳ್ಳತನಕ್ಕಿಳಿದ ಅಸಾಮಿಗಳು; ಪ್ರತಿಷ್ಠಿತ ಬಡಾವಣೆಗಳೇ ಇವರ ಟಾರ್ಗೆಟ್
ಜುಲೈ 24 ರಿಂದ ಕಾರುಗಳನ್ನು ರಿಕಾಲ್‌ ಮಾಡಲಾಗುವುದು, 2021ರ ಜುಲೈ 5 ರಿಂದ 2023ರ ಫೆಬ್ರವರಿ 15ರವರೆಗೆ ಮಾರಾಟವಾಗಿರುವ ಎಸ್‌ಪ್ರೆಸ್ಸೋ ಹಾಗೂ ಎಕೋ ಕಾರುಗಳ ರಿಕಾಲ್‌ ಮಾಡಲಿದ್ದೇವೆ. ಸಮಸ್ಯೆ ಹೊಂದಿರುವ ವಾಹನಗಳ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಡೀಲರ್ ವರ್ಕ್‌ಶಾಪ್‌ಗಳಿಂದ ದೋಷಯುಕ್ತ ಭಾಗವನ್ನು ತಪಾಸಣೆ ಮತ್ತು ಬದಲಿಗಾಗಿ ಉಚಿತವಾಗಿ ಸಂವಹನವನ್ನು ಸ್ವೀಕರಿಸುತ್ತಾರೆ ಎಂದು ಕಂಪನಿ ಹೇಳಿದೆ.
ಭಾರಿ ಮಳೆ; ಮನೆ ಕುಸಿದು ಹಾವೇರಿ, ದಾವಣಗೆರೆಯ ಪ್ರತ್ಯೇಕ ಘಟನೆಯಲ್ಲಿ 2 ಕಂದಮ್ಮಗಳ ದಾರುಣ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
