ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿದ್ದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್​ ಮೂಲಕ ಯಶಸ್ವಿ ಆಗಿರುವುದು ಈಗ ಹಳೆಯ ವಿಚಾರ. ಏಕೆಂದರೆ ಇಂದು ಅದೇ ಇಸ್ರೋ ಸೂರ್ಯಯಾನ ಕೈಗೊಂಡಿದ್ದು, ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆಯನ್ನೂ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಅದಾಗ್ಯೂ ಇಸ್ರೋದ ಚಂದ್ರಯಾನ-3ರ ಯಶಸ್ಸಿನ ವಿಚಾರ ಈಗ ಮುನ್ನೆಲೆಗೆ ಬರುವುದಕ್ಕೂ ಮುಖ್ಯವಾದ ಕಾರಣವೊಂದಿದೆ. ಏಕೆಂದರೆ ಚಂದ್ರಯಾನ-3ರ ಯಶಸ್ಸಿನ ಹಿಂದೆ ಎರಡು ಸಂಗತಿಗಳು ಪ್ರಮುಖ ಪಾತ್ರ ವಹಿಸಿವೆಯಂತೆ. ಇಂಥದ್ದೊಂದು ವಿಚಾರವನ್ನು ಇಸ್ರೋ ವಿಜ್ಞಾನಿಯೊಬ್ಬರೇ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಇಸ್ರೋದ ಚಂದ್ರಯಾನ-3 ಮಿಷನ್​ ಸೈಂಟಿಸ್ಟ್​ ವೆಂಕಟೇಶ್ವರ ಶರ್ಮಾ ಅವರು ಮಾಧ್ಯಮವೊಂದರಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ ಈ ಸಂಗತಿಯನ್ನು ತಿಳಿಸಿದ್ದಾರೆ. ಈ ಯಶಸ್ಸಿನಲ್ಲಿ ತಂಡದ ದೃಢತೆಗೆ ಕಾರಣವಾದ ಅಂಶಗಳನ್ನು ತಿಳಿಸಿ ಎಂದಾಗ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ನೆಲದಡಿಯಲ್ಲಿದೆ ಎರಡಂತಸ್ತಿನ ಮನೆ; ಇದರ ನಿರ್ಮಾಣಕ್ಕೆ ಈತ ತೆಗೆದುಕೊಂಡ ಸಮಯ 12 ವರ್ಷ
ನಮ್ಮ ತಂಡಕ್ಕೆ ಪ್ರತಿದಿನ ಸಂಜೆ ಐದು ಗಂಟೆಗೆ ಒಂದು ಮಸಾಲೆ ದೋಸೆ ಮತ್ತು ಒಂದು ಕಾಫಿ ಕೊಡುವ ಮೂಲಕ ನಾವು ಇದನ್ನು ಸಾಧಿಸಿದ್ದೆವು. ಇದು ತುಂಬಾ ಸಣ್ಣ ಸಂಗತಿಯಾದರೂ ಇಡೀ ತಂಡ ಇನ್ನಷ್ಟು ಕೆಲಸ ಮಾಡುವಂತೆ ಹುರಿದುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇವೆರಡರಿಂದ ಖುಷಿಯಾದ ಎಲ್ಲರೂ ಸಂತೋಷದಿಂದ ಇನ್ನಷ್ಟು ಹೊತ್ತು ತೊಡಗಿಸಿಕೊಂಡಿದ್ದರು. ಸವಾಲಿನ ಸಮಯದಲ್ಲಿ ಇವೆರಡೂ ಸಹಾಯಕ್ಕೆ ಬಂದವು ಎಂದು ಅವರು ಹೇಳಿಕೊಂಡಿದ್ದಾರೆ.
ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟು ಇನ್ನೂ ಇದೆಯಾ?; ಹಾಗಿದ್ದರೆ ಹುಷಾರು!

ಕೋವಿಡ್​ನಿಂದ ಗುಣವಾಗಿ ಡಿಸ್​​ಚಾರ್ಜ್​ ಆದಮೇಲೆ ಸತ್ತವರೆಷ್ಟು ಗೊತ್ತೇ?; ಐಸಿಎಂಆರ್​ ಅಧ್ಯಯನದಲ್ಲಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
