ನವದೆಹಲಿ:ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಆಡುವ ಮಾತಗಳನ್ನು ಆಗಾಗ ನೀವು ಕೇಳಿರುತ್ತಿರಿ. ಏಕೆಂದರೆ, ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ. ಬೆಳಗ್ಗಿನ ತಿಂಡಿ ಮಾಡಬೇಕೆಂದರೂ ನೂರು ಬಾರಿ ಯೋಚಿಸಬೇಕಾದ ಕಾಲ ಇದಾಗಿದೆ.
ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವುದರ ನಡುವೆಯೇ 1971ನೇ ಇಸವಿಗೆ ಸಂಬಂಧಿಸಿದ ರೆಸ್ಟೋರೆಂಟ್​ ಒಂದರ ಬಿಲ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರಲ್ಲಿರುವ ಒಂದು ಮಸಾಲೆ ದೋಸೆ ಮತ್ತು ಕಾಫಿ ಬೆಲೆಯನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಅಂದು ಒಂದು ಮಸಾಲೆ ದೋಸೆ ಮತ್ತು ಕಾಫಿಗೆ ಕೇವಲ 2 ರೂಪಾಯಿ ಮಾತ್ರ. ಇಂದು ಯಾವುದೇ ಉತ್ತಮ ಸೌಲಭ್ಯವುಳ್ಳ ರೆಸ್ಟೋರೆಂಟ್​ನಲ್ಲಿ ಮಸಾಲೆ ದೋಸೆ ಮತ್ತು ಕಾಫಿಯನ್ನು ಆರ್ಡರ್​ ಮಾಡಿದರೆ ಕನಿಷ್ಠ 500 ರಿಂದ 800 ರೂಪಾಯಿ ಬಿಲ್​ ಆಗುತ್ತದೆ. ಸಾಮಾನ್ಯ ಹೋಟೆಲ್​ಗಳಲ್ಲಿ ಮಸಾಲೆ ದೋಸೆಗೆ 50 ರಿಂದ 100 ರೂ. ವರೆಗೂ ಬಿಲ್​ ಆಗುತ್ತದೆ.
51 ವರ್ಷದ ಹಿಂದಿನ ರೆಸ್ಟೋರೆಂಟ್​ ಬಿಲ್​ ಇದಾಗಿದೆ. ದೆಹಲಿಯ ಮೋತಿ ಮಹಲ್​ ರೆಸ್ಟೋರೆಂಟ್​ಗೆ ಸಂಬಂಧಿಸಿದ್ದು, ಇಂಡಿಯನ್​ ಹಿಸ್ಟರಿ ವಿಥ್​ ವಿಷ್ಣು ಶರ್ಮಾ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. 1927ರ ಜೂನ್​ 28ರಲ್ಲಿ ಬಿಲ್​ ಮಾಡಲಾಗಿದ್ದು, ಮಸಾಲೆ ದೋಸೆ ಮತ್ತು ಕಾಫಿಗೆ ತಲಾ ಒಂದು ರೂಪಾಯಿ ಚಾರ್ಜ್​ ಮಾಡಲಾಗಿದೆ.
ಬಿಲ್​ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ಬಿಲ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ತಿಳಿಸಲು ನಮಗೆ ಕಾಮೆಂಟ್​ ಮಾಡಿದೆ.(ಏಜೆನ್ಸೀಸ್​)
Moti Mahal restaurant, Delhi's bill receipt of 28.06.1971. 2 Masala Dosa & 2 Coffey, 16 paise tax and Bill is Rs 2.16 only…..!pic.twitter.com/YllnMWQmTD
— indian history with Vishnu Sharma (@indianhistory00)February 1, 2017

ಮಾಜಿ ಪ್ರೇಯಸಿ ಜತೆ ಸಿಕ್ಕಿಬಿದ್ದ ಮೈಕೆಲ್​ ಕ್ಲಾರ್ಕ್​ಗೆ ಕಪಾಳಮೋಕ್ಷ ಮಾಡಿದ ಹಾಲಿ ಪ್ರೇಯಸಿ! ವಿಡಿಯೋ ವೈರಲ್​

ಮಧ್ಯದ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ ಮಹಿಳೆ, ಕಾರಿನ ಬಾನೆಟ್​​ ಮೇಲೆ ಸಿಲುಕಿದ ವ್ಯಕ್ತಿ ಇಬ್ಬರೂ ಬಂಧನ

ಬ್ರಿಜ್​ ವಿರುದ್ಧ ಮುಂದುವರಿದ ಧರಣಿ: ಭಾರತೀಯ ಒಲಿಂಪಿಕ್​ ಅಸೋಸಿಯೇಷನ್ ಮುಂದೆ 4 ಬೇಡಿಕೆಯಿಟ್ಟ ಕುಸ್ತಿಪಟುಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
