ಭೋಪಾಲ್​:ಮಾಸ್ಕ್​ ಸರಿಯಾಗಿ ಧರಿಸದಿದ್ದರೆ ದಂಡ ವಿಧಿಸಬೇಕು ಅಥವಾ ಎಚ್ಚರಿಕೆ ನೀಡಬೇಕು. ಆದರೆ, ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದೇ ಬೇರೆ. ಮಾಸ್ಕ್​ ಸರಿಯಾಗಿ ಧರಿಸದ ವ್ಯಕ್ತಿಯೊಬ್ಬನನ್ನು ಪೊಲೀಸರಿಬ್ಬರು ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯತೆ ಮರೆದಿದ್ದಾರೆ.
ಆಟೋ ಚಾಲಕ ಕೃಷ್ಣ ಕೀಯೆರ್ (35)​ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಂದೆಯನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಮಾಸ್ಕ್​ ಅನ್ನು ಸರಿಯಾಗಿ ಧರಿಸದೇ ಮೂಗಿನ ಕೆಳಗೆ ಜಾರಿಸಿಕೊಂಡಿದ್ದನ್ನು ಮಾರ್ಗ ಮಧ್ಯೆ ಪೊಲೀಸರು ಗಮನಿಸಿ ಅವರನ್ನು ತಡೆದಿದ್ದಾರೆ. ಬಳಿಕ ಪೊಲೀಸ್​ ಠಾಣೆಗೆ ಬರುವಂತೆ ಹೇಳಿದ್ದಾರೆ. ಆದರೆ, ಕೃಷ್ಣ ಅವರು ಠಾಣೆಗೆ ಬರಲು ನಿರಾಕರಿಸಿದಾಗ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕೃಷ್ಣ ಅವರನ್ನು ನೆಲಕ್ಕೆ ಬೀಳಿಸಿ ಪೊಲೀಸರು ಕಾಲಿನಿಂದ ಜಾಡಿಸಿ ಒದೆಯುತ್ತಿರುವ ದೃಶ್ಯವಿದೆ. ಈ ವೇಳೆ ಕೃಷ್ಣ ಅವರು ನೋವಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒದ್ದಾಡಿದರು. ಇದೇ ವೇಳೆ ಕೃಷ್ಣ ಜತೆ ಬಂದಿದ್ದ ಅವರ ಮಗ, ತಂದೆಗೆ ಪೊಲೀಸರು ಥಳಿಸುವುದನ್ನು ನೋಡಿ ಸಹಾಯಕ್ಕಾಗಿ ಕೂಗಿಕೊಂಡ ದೃಶ್ಯ ಮನಕಲಕುವಂತಿದೆ.
ಇದನ್ನೂ ಓದಿರಿ:90 ರೂ. ಇದ್ದ ಬಸ್​ ಟಿಕೆಟ್​ ದರ 180ಕ್ಕೆ ಏರಿಕೆ! ಪ್ರಯಾಣಿಕರೇ ಮನೆಯಿಂದ ಹೊರ ಹೋಗುವ ಮುನ್ನ ಜೇಬಲ್ಲಿ ಕಾಸಿದ್ಯಾ ನೋಡಿ
ಈ ಘಟನೆ ಹಾಡಹಗಲಲ್ಲೇ ನಡುರಸ್ತೆಯಲ್ಲೇ ನಡೆದಿದೆ. ಆದರೆ, ಯಾವೊಬ್ಬ ಸಾರ್ವಜನಿಕರು ಸಹ ಕೃಷ್ಣ ಅವರ ರಕ್ಷಣೆಗೆ ಮುಂದಾಗಲಿಲ್ಲ. ಬದಲಾಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುವುದರಲ್ಲಿ ಬಿಜಿಯಾಗಿದ್ದರು.
ಹಲ್ಲೆ ಮಾಡಿದ ಪೊಲೀಸ್​ ಸಿಬ್ಬಂದಿಯನ್ನು ಕಮಲ್​ ಪ್ರಜಾಪತ್​ ಮತ್ತು ಧರ್ಮೇಂದ್ರ ಜತ್​ ಎಂದು ಗುರುತಿಸಲಾಗಿದೆ. ಆದರೆ, ಈವರೆಗೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಯಾವಾಗ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಯ್ತೋ ಆ ಬಳಿಕ ಇಬ್ಬರನ್ನು ಅಮಾನತ್ತು ಮಾಡಲಾಗಿದೆ.
ಕರೊನಾ ತಡೆಗಟ್ಟಲು ಮಾಸ್ಕ್​ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ದೇಶದಲ್ಲಿ ಎರಡನೇ ಅಲೆ ಇದೆ. ಈ ಸಮಯದಲ್ಲಿ ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಹಾಗಂತ ಮಾಸ್ಕ್​ ಸರಿಯಾಗಿ ಧರಿಸದಿದ್ದರೆ ದಂಡ ವಿಧಿಸಬೇಕು. ಅದನ್ನು ಬಿಟ್ಟು ಹಿಗ್ಗಾಮುಗ್ಗಾ ಥಳಿಸುವುದೆಂದರೆ ಅದು ಮೃಗತ್ವಕ್ಕಿಂತ ಕಡೆ ಎನ್ನಬಹುದು.(ಏಜೆನ್ಸೀಸ್​)
ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಕಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

ದ್ವಿಚಕ್ರ ವಾಹನದಲ್ಲಿ ಇವಿಎಂ ಸಾಗಿಸ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..!

ನಟಿ ಶ್ರುತಿ ಹಾಸನ್​ ವಿರುದ್ಧ ಬಿಜೆಪಿ ಕಿಡಿ: ಕ್ರಿಮಿನಲ್​ ಕೇಸ್​ ದಾಖಲಿಸಲು ಒತ್ತಾಯ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − two =
Remember me
