ನವದೆಹಲಿ:ಕೋವಿಡ್​-19 ಸಾಂಕ್ರಾಮಿಕ ಅತಿಯಾಗಿದ್ದ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದು, ಸ್ಯಾನಿಟೈಸೇಷನ್​, ಫಿಸಿಕಲ್​ ಡಿಸ್ಟೆನ್ಸ್​ ಸೋಂಕು ಹರಡುವುದನ್ನು ತಡೆಯಲು ಇರುವ ಪ್ರಮುಖ ಮಾರ್ಗ ಎಂದೇ ಹೇಳಲಾಗಿತ್ತು. ಮಾತ್ರವಲ್ಲ, ಆ ಬಳಿಕವೂ ನಂತರದ ಅಲೆಗಳಲ್ಲಿ, ಮತ್ತೆ ಕೋವಿಡ್​ ಹೆಚ್ಚಳ ಎಂಬ ಆತಂಕದ ಸಂದರ್ಭದಲ್ಲೂ ಇದನ್ನು ಪುನರುಚ್ಚರಿಸಲಾಗುತ್ತಿತ್ತು.
ಆದರೆ ಕೋವಿಡ್ ಸಂದರ್ಭದಲ್ಲಿ ಮಾಸ್ಕ್​ ವಹಿಸಿದ ಪಾತ್ರವೆಷ್ಟು ಎಂಬ ಬಗ್ಗೆ ಅಧ್ಯಯನ ನಡೆದಿದ್ದು, ಆ ಕುರಿತ ಒಂದಷ್ಟು ಮಾಹಿತಿ ಹೊರಬಿದ್ದಿದೆ. ಯುಕೆ ಮೂಲದ ಕಾಖ್ರೇನ್ (Cochrane)​ ಈ ಅಧ್ಯಯನ ನಡೆಸಿದೆ. ಕಾಖ್ರೇನ್​ನ ಅಧ್ಯಯನದ ಅಂಶಗಳನ್ನು ‘ಗೋಲ್ಡ್​ ಸ್ಟ್ಯಾಂಡರ್ಡ್​ ಆಫ್​ ಎವಿಡೆನ್ಸ್​ ಬೇಸ್ಡ್​ ಮೆಡಿಸಿನ್​’ ಎಂದು ಪರಿಗಣಿಸಲಾಗುತ್ತಿದೆ ಎಂದು ಅಲ್ಲಿನ ಆನ್​​ಲೈನ್​ ಮಾಧ್ಯಮವೊಂದು ಬಣ್ಣಿಸಿದೆ.
ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯುವಲ್ಲಿ ಮಾಸ್ಕ್​, ವೈಯಕ್ತಿಕ ಅಂತರ ಮುಂತಾದ ಭೌತಿಕ ಕ್ರಮಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಎಂಬುದರ ಬಗ್ಗೆ ಕಾಖ್ರೇನ್​ ಅಧ್ಯಯನ ಮಾಡಿದೆ. ಕೋವಿಡ್ ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಬಹುಶಃ ಮಾಸ್ಕ್​ ಏನೂ ಪರಿಣಾಮ ಬೀರಲ್ಲ ಅಥವಾ ಅತಿಕಡಿಮೆ ವ್ಯತ್ಯಾಸ ಉಂಟುಮಾಡುತ್ತದೆ ಎಂಬುದಾಗಿ ಈ ಅಧ್ಯಯನದಲ್ಲಿ ನಿರ್ಣಯಿಸಲಾಗಿದೆ.
ಮಾತ್ರವಲ್ಲ, ನಿಯಮಿತ ಸೇವೆಯಲ್ಲಿ ಇರುವ ಆರೋಗ್ಯ ಕಾರ್ಯಕರ್ತರಲ್ಲೂ ಮೆಡಿಕಲ್​/ಸರ್ಜಿಕಲ್​ ಇಲ್ಲವೇ ಎನ್​95 ಮಾಸ್ಕ್​​ಗಳ ಬೀರಿದ ಪರಿಣಾಮಗಳ ಬಗ್ಗೆ ಖಚಿತ ವ್ಯತ್ಯಾಸ ತಿಳಿದುಬಂದಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಅದಾಗ್ಯೂ ಮಾಸ್ಕ್​​ ಏನೇನೂ ಪರಿಣಾಮಕಾರಿ ಅಲ್ಲ ಎಂಬುದು ಈ ಅಧ್ಯಯನದ ಅರ್ಥವಲ್ಲ. ಆದರೆ ಇದುವರೆಗಿನ ಅಧ್ಯಯನದ ಪ್ರಕಾರ ಮಾಸ್ಕ್​ ಸೋಂಕು ವ್ಯಾಪಿಸುವುದನ್ನು ತಡೆಯುವುದಿಲ್ಲ ಎಂಬುದಾಗಿದೆ ಎಂದು ಅಧ್ಯಯನ ತಿಳಿಸಿದೆ.
ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

ಹಾಡಹಗಲೇ ಶಿಕ್ಷಕಿಯ ಕತ್ತು ಕೊಯ್ದು ಕೊಲೆ!; 12 ವರ್ಷದ ಪುತ್ರಿ ತಬ್ಬಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + twenty =
Remember me
