ನವದೆಹಲಿ:ಇಡೀ ವಿಶ್ವವನ್ನು ಮಹಾಮಾರಿ ಕರೊನಾ ಕಾಡುತ್ತಿದ್ದು, ಭಾರತವು ಸರಿಯಾದ ದಾರಿಯಲ್ಲಿ ಹೋರಾಡುತ್ತಿದೆ. ಪ್ರತಿಯೊಬ್ಬ ನಾಗರಿಕನು ಯೋಧನಾಗಿ ಕರೊನಾ ಯುದ್ಧವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಇಂದು ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಭಾನುವಾರ 64ನೇ ಮನ್​ ಕಿ ಬಾತ್​ ಆವೃತ್ತಿಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ಕರೊನಾ ವೈರಸ್​ ಅನ್ನು ಗಂಭೀರವಾಗಿ ಪರಿಗಣಿಸಿ, ತುಂಬಾ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು.
ರೈತರು ಪ್ರತಿಯೊಬ್ಬರ ಹಸಿವನ್ನು ನೀಗಿಸುತ್ತಿದ್ದಾರೆಈ ಸಾಂಕ್ರಮಿಕ ಸಮಯದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲದಂತೆ ನಮ್ಮ ರೈತರು ನೋಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ತಮ್ಮದೇ ಸಾಮರ್ಥ್ಯದಿಂದ ಕರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಕೆಲವೊಬ್ಬರು ಮನೆ ಬಾಡಿಗೆಗಳನ್ನು ತೆಗದುಕೊಂಡಿಲ್ಲ. ಕಲವರು ಊಟ-ಉಪಚಾರವನ್ನು ಮಾಡುತ್ತಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯರ ಹೋರಾಟದ ಸ್ಪೂರ್ತಿ ಶ್ಲಾಘನೀಯಭಾರತೀಯರು ಹೋರಾಟದ ಸಂಕಲ್ಪ ಮಾಡಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಜನರೇ ನೇತೃತ್ವ ವಹಿಸಿದ್ದಾರೆ. ಭಾರತೀಯರ ಹೋರಾಟದ ಸ್ಪೂರ್ತಿ ಶ್ಲಾಘನೀಯ ಎಂದರು. ಎಲ್ಲ ರಾಜ್ಯಗಳು ಸಹ ಕರೊನಾ ವಿರುದ್ಧ ಸರಿಯಾದ ಮಾರ್ಗದರ್ಶನಗಳನ್ನು ನೀಡುತ್ತಿವೆ ಎಂದು ಹೊಗಳಿದರು.
ಕೋವಿಡ್​ ವಾರಿಯರ್ಸ್​ ಜತೆ ಕೈಜೋಡಿಸಿವೈದ್ಯಕೀಯ ಸಿಬ್ಬಂದಿ ರಕ್ಷಣೆಗಾಗಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕರೊನಾ ವಾರಿಯರ್ಸ್​ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗದುಕೊಳ್ಳಲಾಗುತ್ತದೆ. ಕೋವಿಡ್​ ವಾರಿಯರ್ಸ್​ ಜತೆ ಕೈಜೋಡಿಸಿ, ದೇಶ ಸೇವೆಯನ್ನು ಮಾಡಿ ಎಂದು ಕರೆ ನೀಡಿದರು.
ಅನಗತ್ಯವಾಗಿ ರಸ್ತೆಗೆ ಇಳಿಯುವುದು ಬೇಡಸರ್ಕಾರದಿಂದ ರೈತರ ಖಾತೆಗಳಿಗೆ ನೇರವಾಡಿ ಹಣ ಜಮೆಯಾಗುತ್ತಿದೆ. ಹಿರಿಯರ ಪಿಂಚಣಿ ಕೂಡ ಅವರ ಖಾತೆಗಳಿಗೆ ಸೇರುತ್ತಿದೆ. ಅಗತ್ಯ ವಸ್ತುಗಳನ್ನು ಪಕ್ಕದ ಅಂಗಡಿಗಳಲ್ಲೇ ಕೊಳ್ಳಿರಿ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ರಸ್ತೆಗೆ ಇಳಿಯುವುದು ಬೇಡ. ಅಗತ್ಯವಿರುವ ಪ್ರತಿಯೊಬ್ಬರಿಗೆ ಔಷಧ ನೀಡಲು ಪ್ರಯತ್ನಿಸುತ್ತಿದ್ದೇವೆ. ಔಷಧಿ ಸರಬರಾಜಿಗಾಗಿ ಜೀವದಾನ ವಿಮಾನ ಹಾರಾಟ ಮಾಡುತ್ತಿವೆ ಎಂದು ತಿಳಿಸಿದರು.
ವಿಶ್ವವೇ ಭಾರತ ಕೊಡುಗೆಯನ್ನು ಹಾಡಿ ಹೊಗಳುತ್ತಿದೆಕರೊನಾ ವಿರುದ್ಧ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಭಾರತ ಜಗತ್ತಿನ ಇತರೆ ರಾಷ್ಟ್ರಗಳಿಗೂ ಸಹಾಯಾಸ್ತ ಚಾಚಿದೆ. ಅಗತ್ಯ ವಸ್ತುಗಳನ್ನು ವಿದೇಶಕ್ಕೆ ಪೂರೈಕೆ ಮಾಡಿದೆ. ಇಡೀ ವಿಶ್ವವೇ ಭಾರತ ಕೊಡುಗೆಯನ್ನು ಹಾಡಿ ಹೊಗಳುತ್ತಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ವಿಶ್ವದ ನಾಯಕರು ಕರೆ ಮಾಡಿ ನನಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ ಎಂದರು.
ಬಿಸಿ ನೀರು ಸೇವನೆ ಮತ್ತು ಯೋಗ ಉತ್ತಮಆಯುಷ್ಮಾನ್​ ಇಲಾಖೆಯ ಮಾರ್ಗಸೂಚಿಯನ್ನು ಪಾಲಿಸಿ, ಬಿಸಿ ನೀರು ಸೇವನೆ ಮತ್ತು ಯೋಗ ಉತ್ತಮ. ಯಾವುದೇ ಕಾರಣಕ್ಕೂ ಲಾಕ್​ಡೌನ್​ ಉಲ್ಲಂಘಿಸಬೇಡಿ. ಮಾಸ್ಕ್​ ಅನ್ನು ಕಡ್ಡಾಯವಾಗಿ ಧರಿಸಿ, ಇದರಿಂದ ಇನ್ನೊಬ್ಬರಿಗೆ ವೈರಸ್​ ಹರಡುವುದನ್ನು ತಡೆಯಬಹುದು. ಮಾಸ್ಕ್​ ನಾಗರಿಕ ಸಮಾಜದ ಸಂಕೇತವಾಗಿದೆ. ಕರೊನಾವನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ. ಪರಿಸರದ ಬಗ್ಗೆ ಎಲ್ಲರು ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.
ಕರೊನಾ ವಿರುದ್ಧದ ಹೋರಾಟವೆ ನಿಜವಾದ ಅಕ್ಷಯ ತೃತೀಯ. ಕರೊನಾ ಜೀವನ ಶೈಲಿ, ಜೀವನ ಹಾಗೂ ಎಲ್ಲವನ್ನು ಬದಲಾಯಿಸಿದೆ. ಕರೊನಾ ಮುಗಿದ ಬಳಿಕ ಭಾರತದಲ್ಲಿ ಹೊಸ ಶಕೆ ಪ್ರಾರಂಭವಾಗಲಿದೆ ಎಂದರು.
ಕೊನೆಯಲ್ಲಿ ಇಂದು ಬಸವಣ್ಣನವರ ಜಯಂತಿ. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು ಎಂದು ಪ್ರಧಾನಿ ಮೋದಿ ಶುಭಕೋರಿದರು.(ಏಜೆನ್ಸೀಸ್​)
ಮೊದಲ ಸಂಸತ್ತನ್ನು ರೂಪಿಸಿದ ದಾರ್ಶನಿಕ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:11 − nine =
Remember me
