ಸಂಗಾರೆಡ್ಡಿ, ತೆಲಂಗಾಣ:ಗ್ರಾಮದಲ್ಲಿರುವ ಚಿತ್ಕುಳ ಕೆರೆಗೆ ಹರಿದು ಬರುತ್ತಿರುವ ಕೈಗಾರಿಕೆಗಳ ತ್ಯಾಜ್ಯವನ್ನು ಸರಕಾರ ಬೇರೆಡೆಗೆ ಹರಿಸಬೇಕು. ಇದರಿಂದ 10 ಸಾವಿರಕ್ಕೂ ಅಧಿಕ ಮೀನುಗಳು ಸಾವನ್ನಪ್ಪಿವೆ ಎಂದು ಚಿತ್ಕುಲ್ ಗ್ರಾಮದ ಮೀನುಗಾರರು ಆಗ್ರಹಿಸಿದ್ದಾರೆ. ಬುಧವಾರ (ಜೂ.27) ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸತ್ತಿರುವ ಹಿನ್ನೆಲೆಯಲ್ಲಿ ಸುಮಾರು 100 ಮೀನುಗಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಇದನ್ನೂ ಓದಿ:ವಕೀಲರ ಸಂಘದಿಂದ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರತಿಭಟನೆ
ಕೆರೆ ನೀರು ಕಲುಷಿತಗೊಂಡ ಕಾರಣ ಸುಮಾರು 10 ಟನ್ ಮೀನುಗಳು ಸಾವನ್ನಪ್ಪಿವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದು, ಕಳೆದ ವರ್ಷ ಮೀನುಗಾರಿಕಾ ಇಲಾಖೆ 1.2 ಲಕ್ಷ ಮೀನುಗಳನ್ನು ಜಲಮೂಲಕ್ಕೆ ಬಿಟ್ಟಿತ್ತು. ಇದರೊಟ್ಟಿಗೆ ಕಳೆದ ಮಳೆಗಾಲದಲ್ಲಿ ಮೀನುಗಾರರೇ ತಮ್ಮ ಸ್ವಂತ ಹಣವನ್ನು ಸಂಗ್ರಹಿಸಿ, 12 ಲಕ್ಷ ರೂ.ಗೆ ಮೀನು ಖರೀದಿಸಿ, ಕೆರೆಗೆ ಬಿಟ್ಟಿದ್ದರು ಎಂದಿದ್ದಾರೆ.
ಆದಾಗ್ಯೂ, ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ) ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ನೀರಿನಲ್ಲಿ ಕರಗಿದ ಆಮ್ಲಜನಕ (ಡಿಒ) ಮಟ್ಟ ಕಡಿಮೆ ಮಾಡಲು ಕಾರಣವೇನು ಎಂಬುದನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಈ ಪ್ರದೇಶದಲ್ಲಿ ಉತ್ತಮ ಮಳೆಯಾದ ಒಂದು ದಿನದ ನಂತರ ಸೋಮವಾರ ಸತ್ತ ಮೀನುಗಳು ತೇಲಲು ಪ್ರಾರಂಭಿಸಿತು ಎಂದು ಮೀನುಗಾರರು ಆರೋಪಿಸಿದ್ದಾರೆ.
ಇದನ್ನೂ ಓದಿ:ಉಚಿತ ಪ್ರಸಾದ ನಿಲಯ ಉದ್ಘಾಟನೆ ಜುಲೈ1ಕ್ಕೆ
ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮೀನುಗಾರರ ಸಮಾಜದ ಅಧ್ಯಕ್ಷ ಗ್ಯಾರಲಾ ಶ್ರೀನಿವಾಸ್, “ಕೆಲವು ಕೈಗಾರಿಕೆಗಳು ಕೈಗಾರಿಕೆಯ ತ್ಯಾಜ್ಯವನ್ನು ಜಲಮೂಲಕ್ಕೆ ಸುರಿದಿರಬಹುದು. ಪಾಶಮೈಲಾರಂ ಮತ್ತು ಇಸ್ನಾಪುರ ಕೈಗಾರಿಕಾ ಪ್ರದೇಶದಿಂದ ಚಿತ್ಕುಲ್​ನ ಪೆದ್ದ ಚೆರುವಿಗೆ ತ್ಯಾಜದ ಹೊಳೆ ಹರಿದು ಬರುತ್ತಿದೆ. ಮೀನುಗಾರರು ಹೊಳೆಯ ಪಕ್ಕದಲ್ಲಿ ಅನೇಕ ಕೈಗಾರಿಕೆಗಳಿವೆ” ಎಂದರು. ಪ್ರಾಥಮಿಕ ಪರೀಕ್ಷೆಯ ಬಳಿಕ ನೀರಿನಲ್ಲಿ ಕೈಗಾರಿಕಾ ಮಾಲಿನ್ಯದ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
ನಾಯಕನಾಗಿ ನೀನು ಮಾಡಿದ್ದೇನೂ ಇಲ್ಲ! ಬಾಬರ್ ಆಜಂ ನಿವೃತ್ತಿಗೆ ಒತ್ತಾಯಿಸಿದ ಪಾಕ್​ ಮಾಜಿ ಕ್ರಿಕೆಟಿಗ

ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + one =
Remember me
