ನವದೆಹಲಿ:ದೇಶದ 7 ಕೋಟಿ ವ್ಯಾಪಾರಸ್ಥರು ಹಾಗೂ ಸುಮಾರು 40,000 ವ್ಯಾಪಾರ ಸಂಘಗಳನ್ನು ಪ್ರತಿನಿಧಿಸುವ ಭಾರತೀಯ ವರ್ತಕರ ಮಹಾಒಕ್ಕೂಟ (ಸಿಎಐಟಿ) ಚೀನಾದ ಸುಮಾರು 3,000 ಉತ್ಪನ್ನಗಳನ್ನು ಬಹಿಷ್ಕರಿಸಲು ಅಭಿಯಾನವೊಂದನ್ನು ಪ್ರಾರಂಭಿಸಿದೆ.
ದೇಶಾದ್ಯಂತ ಚೀನಾದ ಸರಕುಗಳನ್ನು ಬಹಿಷ್ಕರಿಸಲು ಜೂನ್ 10ರಿಂದ ‘ಭಾರತೀಯ ಸರಕುಗಳು – ನಮ್ಮ ಹೆಮ್ಮೆ’ ಎಂಬ ರಾಷ್ಟ್ರೀಯ ಅಭಿಯಾನ ಪ್ರಾರಂಭಿಸಲಾಗಿದೆ. ಕಳೆದ ಮಾ.25ರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರಂತರ ಸಭೆಗಳನ್ನು ನಡೆಸಿರುವ ಸಿಎಐಟಿ, ಎಲ್ಲ ರಾಜ್ಯಗಳ ಪ್ರಮುಖ ವ್ಯಾಪಾರಸ್ಥರ ಜತೆ ಚಿಲ್ಲರೆ ವ್ಯಾಪಾರ ಮಾರುಕಟ್ಟೆಯನ್ನು ಚೀನಾ ವಶಪಡಿಸಿಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ದೇಶದ ವ್ಯಾಪಾರಿಗಳ ಹಿತರಕ್ಷಣೆ ದೃಷ್ಟಿಯಿಂದ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಮಯ ಬಂದಿದೆ ಎಂದು ಸಿಎಐಟಿ ತಿಳಿಸಿದೆ.
ಕರೊನಾ ಬಿಕ್ಕಟ್ಟಿನ ಹಿನ್ನೆಲೆ ‘ಭಾರತೀಯ ಸರಕುಗಳು -ನಮ್ಮ ಹೆಮ್ಮೆ’ ಅಭಿಯಾನದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರನ್ನು ತಲುಪುವ ಗುರಿ ಹೊಂದಲಾಗಿದೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ಗ್ರಾಹಕರು, ವ್ಯಾಪಾರಸ್ಥರನ್ನು ಪ್ರೆರೇಪಿಸುವುದರ ಜತೆಗೆ ಸ್ಥಳೀಯ ಉತ್ಪನ್ನಗಳ ಬಳಕೆ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಇದಕ್ಕಾಗಿ ಚೀನಾದ ಸುಮಾರು 3 ಸಾವಿರ ಉತ್ಪನ್ನಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಆಟಿಕೆಗಳು, ಜವಳಿ, ಲೇಖನ ಸಾಮಗ್ರಿಗಳು, ಕಾಗದ, ಆಹಾರ ವಸ್ತುಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಹಲವು ವಸ್ತುಗಳು ಸೇರಿವೆ.
ಮಗ, ಸೊಸೆಯೊಂದಿಗೆ ಕೊಡಗಿನ ರೆಸಾರ್ಟ್‌ನಲ್ಲಿ ಎಚ್‌ಡಿಕೆ ವಾಸ್ತವ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
