ಕರಾಚಿ:ಪಾಕಿಸ್ತಾನ ಸರ್ಕಾರ ವಿರುದ್ಧ ಬೃಹತ್​ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಸಿಂಧ್​ ಪ್ರಾಂತ್ಯದ ಬಂದರು ನಗರ ಕರಾಚಿ ನಗರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಕರಾಚಿ ಯೂನಿವರ್ಸಿಟಿ ಮಸ್ಕನ್​ ಚೌರಂಗಿ ಗುಲ್ಶಾನ್​- ಐ- ಇಕ್ಬಾಲ್​ ಎದುರಿನ 4 ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಸ್ಫೋಟ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಸಾವಿಗೀಡಾಗಿದ್ದು, ಸುಮಾರು 15 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಪಟೇಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಸ್ವರೂಪವನ್ನು ಪೊಲೀಸರು ಪರೀಕ್ಷಿಸುತ್ತಿದ್ದು, ಘಟನಾ ಸ್ಥಳವನ್ನು ಸದ್ಯದ ಮಟ್ಟಿಗೆ ಬಿಗಿಬಂದೋಬಸ್ತ್​ ಮಾಡಲಾಗಿದ್ದು, ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ಆದಾಗ್ಯ ಇದೊಂದು ಸಿಲಿಂಡರ್​ ಸ್ಫೋಟದ ರೀತಿ ಕಾಣುತ್ತಿದೆ ಎಂದು ಮಬೀನಾ ಟೌನ್​ ಪೊಲೀಸ್​ ಎಸ್​ಎಚ್​ಒ ತಿಳಿಸಿದ್ದಾರೆ. ಆದರೂ, ಬಾಂಬ್​ ನಿಷ್ಕ್ರೀಯ ದಳ ಸ್ಥಳಕ್ಕೆ ದೌಡಾಯಿದ್ದು, ಸ್ಫೋಟಕ್ಕೆ ಕಾರಣವನ್ನು ಹುಡುಕುತ್ತಿದ್ದಾರೆಂದು ಪಾಕ್​ ಮಾಧ್ಯಮ ಡೌನ್​ ವರದಿ ಮಾಡಿದೆ.
ಇದನ್ನೂ ಓದಿ:VIDEO| ಬಾಲ ನಟಿಯಾಗಿ ನಟಿಸಿದ್ದ ಚಿತ್ರದ ರೇಪ್​ ಸೀನ್​ ವೈರಲ್​: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..!
4 ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಿಗೂ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಗೆ ಸಿಂಧ್​ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್​ ಅಲಿ ಶಾ ಸಂತಾಪ ವ್ಯಕ್ತಪಡಿಸಿ, ಸಂಪೂರ್ಣ ವರದಿ ನೀಡುವಂತೆ ಕರಾಚಿ ಪೊಲೀಸ್​ ಕಮೀಷನರ್​ರನ್ನು ಕೇಳಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಅಗತ್ಯ ನೆರವಿಗೆ ಸೂಚನೆಯನ್ನು ಸಹ ನೀಡಿದ್ದಾರೆ.(ಏಜೆನ್ಸೀಸ್​)
ಹೋಮ್​ ಮೇಡ್​ ನೂಡಲ್ಸ್​ ತಿಂದು ಒಂದೇ ಕುಟುಂಬದ 9 ಮಂದಿ ಸಾವು: ಮೂವರು ಮಕ್ಕಳು ಬದುಕುಳಿದಿದ್ದೇ ಪವಾಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
