ಅಹಮದಾಬಾದ್​:ಗುಜರಾತ್​ನ ಸೂರತ್​ನಲ್ಲಿರುವ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್​ (ಒಎನ್​ಜಿಸಿ) ಘಟಕದಲ್ಲಿ ಗುರುವಾರ ನಸುಕಿನ ವೇಳೆ ಸರಣಿ ಸ್ಫೋಟ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಚಾಚಿಕೊಂಡಿದೆ.
ಗುರುವಾರ ನಸುಕಿನಲ್ಲಿ 2.30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಸ್ಫೋಟದ ಸದ್ದು 4 ಕಿಲೋ ಮೀಟರ್ ದೂರದ ತನಕ ಕೇಳಿಸಿತ್ತು ಎಂದು ಸ್ಥಳೀಯರು ಹೇಳಿರುವುದಾಗಿ ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ಹತೋಟಿಗೆ ತರುವ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ದುರಂತದ ತೀವ್ರತೆ ಇನ್ನಷ್ಟೇ ಅರಿಯಬೇಕಾಗಿದೆ. ಘಟಕದೊಳಗೆ ಯಾರಾದರೂ ಇದ್ದರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ದುರಂತಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದೆ.
#WATCHGujarat: A fire breaks out at an Oil and Natural Gas Corporation (ONGC) plant in Surat. Fire tenders present at the spot. More details awaited.pic.twitter.com/6xPKHW5PrR
— ANI (@ANI)September 23, 2020

ಇದನ್ನೂ ಓದಿ:Web Exclusive: ಮಹಿಳಾ ಉದ್ಯಮಿಗಳ ಪಾರ್ಕ್‌ಗೆ ಭೂಕಂಟಕ: ಹಾರೋಹಳ್ಳಿಯಲ್ಲಿ ಆರಂಭವಾಗಬೇಕಿದ್ದ ಯೋಜನೆ ನನೆಗುದಿಗೆ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂರತ್​ನ ಕಲೆಕ್ಟರ್ ಡಾ. ಧವಲ್ ಪಟೇಲ್, ಒಎನ್​ಜಿಸಿಯ ಹಝರಿಯ ಘಟಕದಲ್ಲಿ ನಸುಕಿನ ಮೂರು ಗಂಟೆ ಸುಮಾರಿಗೆ ಮೂರು ಸ್ಫೋಟಗಳು ಬೆನ್ನು ಬೆನ್ನಿಗೆ ಸಂಭವಿಸಿವೆ. ಇದರಿಂದಾಗಿ ಅಲ್ಲಿ ಬೆಂಕಿ ಹರಡಿದಎ. ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಒಎನ್​ಜಿಸಿ ತಂಡ ಗ್ಯಾಸ್ ಪೈಪ್​ಗಳಲ್ಲಿರುವ ಅನಿಲದ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಘಟನೆಗೆ ಕಾರಣ ಏನೆಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. (ಏಜೆನ್ಸೀಸ್)
ದೆಹಲಿಯಲ್ಲಿ ನಡೆಯಲಿದೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seventeen =
Remember me
