ವಾರಂಗಲ್​:ಈ ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಹಾಗೂ ದುಷ್ಟ ಜನರಿದ್ದಾರೆ ಎಂಬುದಕ್ಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ತಾಜಾ ನಿದರ್ಶನವಾಗಿದೆ. ತೆಲಂಗಾಣದ ವಾರಂಗಲ್​ನಲ್ಲಿ ನಡೆದಿರುವ ಈ ಘಟನೆ ಎಷ್ಟು ಅಸಹ್ಯವಾಗಿದೆ ಅಂದರೆ, ಎಂಥವರ ಮುಖದಲ್ಲೂ ಒಮ್ಮೆ ಕೋಪ ಬರಿಸುತ್ತದೆ.
ಹಸ್ತಮೈಥುನ ಮಾಡಿ ಐಸ್​ ಕ್ರೀಮ್​ ಮೇಲೆ ಸ್ಖಲನ ಮಾಡುತ್ತಿದ್ದ ದುಷ್ಟ ವ್ಯಾಪಾರಿಯೊಬ್ಬನನ್ನು ತೆಲಂಗಾಣದ ವಾರಂಗಲ್​ ಪೊಲೀಸರು ಬಂಧಿಸಿದ್ದಾರೆ. ಅಸಹ್ಯ ಹುಟ್ಟಿಸುವ ವಿಡಿಯೋ ವೈರಲ್​ ಆದ ಬಳಿಕ ಕಾಮುಕ ವ್ಯಾಪಾರಿಯನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಲಾಗಿದೆ.
ಬಂಧಿತನನ್ನು ಕಲುರಾಮ್​ ಕುರ್ಬಿಯಾ ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ನಿವಾಸಿ. ಆರೋಪಿ ಕಲೂರಾಮ್ ವಾರಂಗಲ್​ನ​ ನೆಕೊಂಡೈಲ್ ಪ್ರದೇಶದ ರಸ್ತೆಬದಿಯಲ್ಲಿ ಬಹಳ ದಿನಗಳಿಂದ ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದಾನೆ. ಮಹಿಳೆಯರು ಹಾಗೂ ಮಕ್ಕಳು ಈತನ ನಿತ್ಯ ಗ್ರಾಹಕರು ಎನ್ನುತ್ತಾರೆ ಸ್ಥಳೀಯರು.
ಎರಡು ದಿನಗಳ ಹಿಂದೆ ಈತನ ಹಸ್ತಮೈಥುನದ ವಿಡಿಯೋ ಬಿಡುಗಡೆಯಾಗಿತ್ತು. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ದೂರು ಸಹ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಕಲುರಾಮ್​ ಎಂಬುದು ಸ್ಪಷ್ಟವಾದ ಬೆನ್ನಲ್ಲೇ ಬಂಧಿಸಿದ್ದಾರೆ.
దారుణం..ఐస్ క్రీంలో వీర్యం కలుపుతున్నాడు
వరంగల్ – నెక్కొండలో రోడ్డుపై ఐస్ క్రీమ్ అమ్ముతున్న వ్యక్తి దానిలో వీర్యం కలుపుతున్నాడు.pic.twitter.com/BYJkYZ496H
— Telugu Scribe (@TeluguScribe)March 19, 2024

ಇದೇ ಸಂದರ್ಭದಲ್ಲಿ ಅನೇಕ ಮಂದಿ ಕಲುರಾಮ್​ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆ ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಲುರಾಮ್​ ಮಾರಾಟ ಮಾಡಿದ ಐಸ್​ ಕ್ರೀಮ್​ ಒಂದರ ಸ್ಯಾಂಪಲ್​ ಅನ್ನು ಆಹಾರ ನಿರೀಕ್ಷಕರು ಸಂಗ್ರಹ ಮಾಡಿ, ಪರೀಕ್ಷಿಸಿದ ಬಳಿಕ ತಪ್ಪು ಮಾಡಿರುವುದು ಬಯಲಾಗಿದೆ. ಬಳಿಕ ಕಲುರಾಮ್​ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆರೋಪಿ ಕಲುರಾಮ್​ ಲೈಂಗಿಕ ವಿಕೃತಿಗೆ ದಾಸನಾಗಿರುವುದಾಗಿ ಶಂಕಿಸಲಾಗಿದೆ. ಹೀಗಾಗಿ ವಾರಂಗಲ್​ ಪೊಲೀಸರು ಆತನ ಹಿನ್ನೆಲೆಯನ್ನು ಕೆದಕುತ್ತಿದ್ದಾರೆ. ಈ ಮುಂಚೆ ಆತ ವ್ಯಾಪಾರ ಮಾಡಿದ ಸ್ಥಳಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ವಿಡಿಯೋ ಈಗಲೂ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.(ಏಜೆನ್ಸೀಸ್​)
ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ

ದಯವಿಟ್ಟು ನನ್ನನ್ನು ಆ ರೀತಿ ಕರೆಯಬೇಡಿ… ಅಭಿಮಾನಿಗಳ ಬಳಿ ವಿರಾಟ್​ ಕೊಹ್ಲಿ ಮನವಿ

ಬೈಕ್​ ಮುಂದೆ ಬಂದು ದಿಢೀರ್​ ನಾಪತ್ತೆ! ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
